ಆ್ಯಪ್ನಗರ

ಕುಂಭಮೇಳದಲ್ಲಿ ವಿದೇಶಿ ಸಾಧ್ವಿಯಿಂದ ‘ಟಾಯ್ಲೆಟ್‌ ಕೆಫೆಟೇರಿಯಾ’

ಈ ಕೆಫೆಟೇರಿಯಾದಲ್ಲಿ ಕಮೋಡ್‌ ರೀತಿಯ ಕುರ್ಜಿಗಳನ್ನು ನಿರ್ಮಿಸಲಾಗಿದೆ. ಗ್ರಾಹಕರು ಅಲ್ಲಿ ಕೂತು ವಿರಮಿಸಬಹುದು. ಇಲ್ಲಿ ಶೌಚಾಲಯ ಬಳಕೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

Vijaya Karnataka 20 Jan 2019, 5:00 am
ಪ್ರಯಾಗ್‌ರಾಜ್‌: ಕುಂಭಮೇಳದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಒತ್ತು ನೀಡಿ, ಬಯಲು ಶೌಚಾಲಯಕ್ಕೆ ಸಂಪೂರ್ಣ ಕಡಿವಾಣ ಹಾಕುವ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸಲು ವಿದೇಶಿ ಸಾಧ್ವಿಯೊಬ್ಬರು ಕುಂಭಮೇಳದಲ್ಲಿ 'ಟಾಯ್ಲೆಟ್‌ ಕೆಫೆಟೇರಿಯಾ' ಆರಂಭಿಸಿದ್ದಾರೆ.
Vijaya Karnataka Web T 1


ಈ ಕೆಫೆಟೇರಿಯಾದಲ್ಲಿ ಕಮೋಡ್‌ ರೀತಿಯ ಕುರ್ಜಿಗಳನ್ನು ನಿರ್ಮಿಸಲಾಗಿದೆ. ಗ್ರಾಹಕರು ಅಲ್ಲಿ ಕೂತು ವಿರಮಿಸಬಹುದು. ಇಲ್ಲಿ ಶೌಚಾಲಯ ಬಳಕೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

''ಸ್ಟಾನ್‌ಫೋರ್ಡ್‌ ವಿಶ್ವವಿದ್ಯಾಲಯದಿಂದ ಪದವಿ ಪಡೆದ ನಂತರ ಮೊದಲ ಬಾರಿಗೆ 1996ರಲ್ಲಿ ಋುಷಿಕೇಶ್‌ಗೆ ಆಗಮಿಸಿದೆ. ಹಿಂದೂ ಧರ್ಮ ಮತ್ತು ಅದರ ಸಂಪ್ರದಾಯಗಳಿಂದ ಪ್ರಭಾವಗೊಂಡು ಸಂನ್ಯಾಸ ಸ್ವೀಕರಿಸಿದೆ. ಸ್ವಚ್ಛತೆ ಮತ್ತು ನೈರ್ಮಲ್ಯ ತುಂಬ ಅಗತ್ಯವಾಗಿದ್ದು, ಜನರಲ್ಲಿ ಇದರ ಬಗ್ಗೆ ಅರಿವು ಮೂಡಿಸಲು ಈ ಕೆಫೆಟೇರಿಯಾ ಆರಂಭಿಸಲಾಗಿದೆ. ಶೌಚಾಲಯ ಬಳಸುವುದು ಮತ್ತು ಸರಿಯಾಗಿ ಕೈಗಳನ್ನು ತೊಳೆಯುವುದು ಅತ್ಯಗತ್ಯ. ವಿಶ್ವದ ದೊಡ್ಡ ಧಾರ್ಮಿಕ ಸಮಾರಂಭವನ್ನು ಸರಕಾರ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದೆ. ನಿಜಕ್ಕೂ ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಅಗಾಧ ಒತ್ತು ನೀಡಲಾಗಿದೆ. ಅಭೂತಪೂರ್ವ ಭದ್ರತೆ ಮತ್ತು ಲಕ್ಷಾಂತರ ಶೌಚಾಲಯ ನಿರ್ಮಿಸಿದ ರಾಜ್ಯ ಸರಕಾರ ಅಭಿನಂದನೀಯ,'' ಎಂದು ಸಾಧ್ವಿ ಭಗವತಿ ಸರಸ್ವತಿ ಹೇಳಿದ್ದಾರೆ.

ಕುಂಭಮೇಳಕ್ಕಾಗಿ ಸರಕಾರ ಬರೋಬ್ಬರಿ 1.22 ಲಕ್ಷ ಶೌಚಾಲಯಗಳನ್ನು ನಿರ್ಮಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ