ಆ್ಯಪ್ನಗರ

ಮೋದಿಯವರಿಂದ ಪಾಠ ಕಲಿತೆ: ರಾಹುಲ್‌

ಐದು ವರ್ಷದ ಹಿಂದೆ ಜನರು ನೀಡಿದ ಅಧಿಕಾರದ ಅಸ್ತ್ರವನ್ನು ನರೇಂದ್ರ ಮೋದಿಯವರು ದುರಹಂಕಾರದಿಂದ ವ್ಯರ್ಥ ಮಾಡಿಕೊಂಡರು. ಒಬ್ಬ ರಾಜಕಾರಣಿಯಾಗಿ ಹೇಗಿರಬಾರದು ಎಂಬುದನ್ನು ನಾನು ಮೋದಿ ಅವರಿಂದ ಕಲಿತಿದ್ದೇನೆ. 2014ರ ಚುನಾವಣೆ ನನಗೆ ಪ್ರಮುಖವಾದ ವಿಷಯ. ಅಂದಿನ ಫಲಿತಾಂಶದಿಂದ ನಾನು ಸಾಕಷ್ಟು ಕಲಿತಿದ್ದು, ಮುಖ್ಯವಾಗಿ ನಮ್ರತೆಯನ್ನು ಕಲಿತಿದ್ದೇನೆ ಎಂದು ನಾನು ತಾಯಿಗೆ ( ಸೋನಿಯಾ ಗಾಂಧಿ) ಹೇಳುತ್ತಿದ್ದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ.

Vijaya Karnataka Web 12 Dec 2018, 11:56 am
ಹೊಸದಿಲ್ಲಿ: ‘‘ಐದು ವರ್ಷದ ಹಿಂದೆ ಜನರು ನೀಡಿದ ಅಧಿಕಾರದ ಅಸ್ತ್ರವನ್ನು ನರೇಂದ್ರ ಮೋದಿಯವರು ದುರಹಂಕಾರದಿಂದ ವ್ಯರ್ಥ ಮಾಡಿಕೊಂಡರು. ಒಬ್ಬ ರಾಜಕಾರಣಿಯಾಗಿ ಹೇಗಿರಬಾರದು ಎಂಬುದನ್ನು ನಾನು ಮೋದಿ ಅವರಿಂದ ಕಲಿತಿದ್ದೇನೆ,’’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ.

ಪಂಚರಾಜ್ಯಗಳ ಫಲಿತಾಂಶದ ಬೆನ್ನ ಹಿಂದೆಯೇ ಸುದ್ದಿಗೋಷ್ಠಿ ನಡೆಸಿದ ಅವರು, ‘‘2014ರ ಚುನಾವಣೆ ನನ್ನ ಪಾಲಿಗೆ ಎಂದೂ ಮರೆಯದ ಅದ್ಭುತ ಕ್ಷಣಗಳು. ಅಂದಿನ ಫಲಿತಾಂಶದಿಂದ ನಾನು ಸಾಕಷ್ಟು ಕಲಿತಿದ್ದೇನೆ. ಹೇಗೆ ಯೋಚಿಸಬೇಕು, ಬಹಳ ಮುಖ್ಯವಾಗಿ ಮಾನವೀಯತೆಯನ್ನು ರೂಢಿಸಿಕೊಂಡಿದ್ದೇನೆ. ಒಬ್ಬ ರಾಜಕಾರಣಿ ಜನರ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ವಿಧಾನ ಹೇಗಿರಬೇಕು ಮತ್ತು ಯಾವ ರೀತಿ ಕೆಲಸ ಮಾಡಬೇಕು ಎನ್ನುವುದನ್ನು ತಿಳಿದೆ,’’ ಎಂದರು.

ಅಲ್ಲದೆ, ''2014ರ ಚುನಾವಣೆ ನನಗೆ ಪ್ರಮುಖವಾದ ವಿಷಯ. ಅಂದಿನ ಫಲಿತಾಂಶದಿಂದ ನಾನು ಸಾಕಷ್ಟು ಕಲಿತಿದ್ದು, ಮುಖ್ಯವಾಗಿ ನಮ್ರತೆಯನ್ನು ಕಲಿತಿದ್ದೇನೆ ಎಂದು ನಾನು ತಾಯಿಗೆ ( ಸೋನಿಯಾ ಗಾಂಧಿ) ಹೇಳುತ್ತಿದ್ದೆ'' ಎಂದು ಸಹ ಎಐಸಿಸಿ ಮುಖ್ಯಸ್ಥ ರಾಹುಲ್ ಗಾಂಧಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.


''ಅಧಿಕ ಮೌಲ್ಯದ ನೋಟು ರದ್ದತಿ ಒಂದು ದೊಡ್ಡ ಹಗರಣ. ಈ ದೇಶದಲ್ಲಿ ಉದ್ಯೋಗ, ಭ್ರಷ್ಟಾಚಾರ ನಿರ್ಮೂಲನೆ ಮತ್ತು ರೈತರಿಗೆ ಬೆಂಬಲ ನೀಡುವುದು ನಮ್ಮ ಪ್ರಮುಖ ಆಶಯ. ದೊಡ್ಡ ಗೆಲುವಿನ ಅಹಮ್ಮಿನಿಂದ ಬೀಗುತ್ತಿದ್ದ ಮೋದಿಯವರು ಜನರ ಹೃದಯ ಬಡಿತಕ್ಕೆ ಕಿವಿಗೊಡುವುದನ್ನು ಮರೆತರು. ರೈತರು ಏನು ಹೇಳುತ್ತಿದ್ದಾರೆ ಎನ್ನುವುದನ್ನು ಅವರು ಕೇಳಿಸಿಕೊಳ್ಳಲೇ ಇಲ್ಲ. ಅದರಿಂದ ಜನರ ನಂಬಿಕೆ ಕುಸಿಯಿತು. ದೇಶದ ಭವಿಷ್ಯ ನೋಡುವುದರಲ್ಲಿ ಅವರು ವಿಫಲರಾಗಿದ್ದಾರೆ'' ಎಂದು ಟೀಕಿಸಿದರು. ಈ ಮೂಲಕ ಪ್ರಧಾನಿ ಮೋದಿಯ ಹಲವು ನಿರ್ಧಾರಗಳಿಗೆ ಜನರ ಬೆಂಬಲವಿರಲಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರಾಹುಲ್ ಗಾಂಧಿ ನೀಡಿದ್ದಾರೆ.

ಜತೆಗೆ, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢದಲ್ಲಿ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವುದು ದೊಡ್ಡ ವಿಚಾರವೇನಲ್ಲ. ಅದು ಸಲೀಸಾಗಿ ಆಗುತ್ತದೆ'' ಎಂದು ಪಂಚರಾಜ್ಯಗಳ ಫಲಿತಾಂಶದ ಬೆನ್ನ ಹಿಂದೆಯೇ ಸುದ್ದಿಗೋಷ್ಠಿ ನಡೆಸಿದ ರಾಹುಲ್ ಗಾಂಧಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ