ಆ್ಯಪ್ನಗರ

ಅಮೆರಿಕದಲ್ಲಿ ತೆಲುಗು ದಂಪತಿಗಳ ವೇಶ್ಯಾವಾಟಿಕೆ ದಂಧೆ: ಬಂಧನ

ಲುಗು ಹಾಗೂ ಕನ್ನಡ ಚಿತ್ರ ನಟಿಯರನ್ನು ಅಮೆರಿಕಕ್ಕೆ ಕರಿಸಿಕೊಂಡು ವೇಶ್ಯವಾಟಿಕೆ ನಡೆಸುವ ಅಂತಾರಾಷ್ಟ್ರೀಯ ಜಾಲ ಬೆಳಕಿಗೆ ಬಂದಿದೆ.

TIMESOFINDIA.COM 15 Jun 2018, 11:52 am
ಹೈದರಾಬಾದ್‌: ತೆಲುಗು ಹಾಗೂ ಕನ್ನಡ ಚಿತ್ರ ನಟಿಯರನ್ನು ಅಮೆರಿಕಕ್ಕೆ ಕರಿಸಿಕೊಂಡು ವೇಶ್ಯವಾಟಿಕೆ ನಡೆಸುವ ಅಂತಾರಾಷ್ಟ್ರೀಯ ಜಾಲ ಬೆಳಕಿಗೆ ಬಂದಿದೆ.
Vijaya Karnataka Web us


ಈ ಸಂಬಂಧ ಅಮೆರಿಕದಲ್ಲಿ ಟಾಲಿವುಡ್‌ನ ಪ್ರೊಡಕ್ಷನ್‌ ಮ್ಯಾನೇಜರ್‌ ದಂಪತಿ ಸೇರಿದಂತೆ ಈ ವರೆಗೆ ಐವರನ್ನು ಬಂಧಿಸಲಾಗಿದೆ. ಅಮೆರಿಕದಲ್ಲಿ ನಡೆಯಲಿರುವ ಭಾರತೀಯ ಸಮ್ಮೇಳನದಲ್ಲಿ ಭಾಗವಹಿಸುವ ಭಾರತೀಯರಿಗೆ ಹುಡುಗಿಯರನ್ನು ಪೂರೈಕೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ದಂಧೆ ನಡೆಸುವ ಸಲುವಾಗಿ ಹೈದರಾಬಾದ್‌ ಮೂಲದ ಕಿಶನ್‌ ಮೊಡುಗುಮುಡಿ ಅಲಿಯಾನ್‌ ಶ್ರೀರಾಜ್‌ ಚೆನ್ನುಪತಿ ಹಾಗೂ ಚಂದ್ರಕಲಾ ಪೂರ್ಣಿಮಾ ಮೊಡುಗುಮುಡಿ ಅಲಿಯಾಸ್‌ ವೇಭ ಜಯಂ ಚಿಕಾಗೋದಲ್ಲಿ ಅಕ್ರಮವಾಗಿ ನೆಲೆಸಿದ್ದರು. ಏಪ್ರಿಲ್‌ನಲ್ಲಿ ಅಮೆರಿಕದ ವಾಷಿಂಗ್ಟನ್‌ನಲ್ಲಿ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಯುಎಸ್‌ ಫೆಡೆರಲ್ ಏಜೆಂಟ್ಸ್‌ ಆಫ್‌ ಹೋಂಲ್ಯಾಂಡ್‌ ಸೆಕ್ಯುರಿಟಿ ಇನ್ವೆಸ್ಟಿಗೇಷನ್ಸ್‌ ಸಂಸ್ಥೆ ದಂಪತಿ ವಿರುದ್ಧ ಕ್ರಮಿನಲ್‌ ಪ್ರಕರಣ ದಾಖಲಿಸಿಕೊಂಡಿದೆ.

ಸಮ್ಮೇಳನದ ಹೆಸರಲ್ಲಿ ವೇಶ್ಯಾವಾಟಿಕೆ

ಭಾರತೀಯ ಸಮ್ಮೇಳನಗಳಲ್ಲಿ ಭಾಗವಹಿಸುವ ಅತಿಥಿಗಳನ್ನು ಬೇಟಿ ಮಾಡುತ್ತಿದ್ದ ಬಂಧಿತ ದಂಪತಿ, ಮೋಜಿಗಾಗಿ ಹುಡುಗಿಯರನ್ನು ಕಳುಹಿಸುತ್ತಿದ್ದರು. ಇದಕ್ಕಾಗಿ ಹೈದರಾಬಾದ್‌ ಸೇರಿದಂತೆ ಇನ್ನಿತರ ಭಾಗಗಳಿಂದ ಚಿತ್ರ ನಟಿಯರನ್ನು ವಿವಿಧ ಆಮಿಷಗಳನ್ನು ಒಡ್ಡಿ ಕರೆಸಿಕೊಳ್ಳುತ್ತಿದ್ದರು. ಪ್ರಮುಖವಾಗಿ ಅಮೆರಿಕದ ವಿವಿಧ ಭಾಗದಲ್ಲಿ ನಡೆಯುವ ಭಾರತ ಹಾಗೂ ತೆಲುಗು ಸಮ್ಮೇಳನಗಳಲ್ಲಿ ಪಾಲ್ಗೊಳ್ಳುವ ಭಾರತೀಯರನ್ನು ಕೇಂದ್ರವಾಗಿಟ್ಟುಕೊಂಡು ವ್ಯಾಪಾರ ವೇಶ್ಯಾವಾಟಿಕೆ ನಡೆಸುತ್ತಿದ್ದರು. ನಟಿಯರ ಪ್ರಯಾಣ ವೆಚ್ಚ, ಹೋಟೆಲ್‌ ರೂಂ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ದಂಪತಿಗಳೇ ನೋಡಿಕೊಳ್ಳುತ್ತಿದ್ದರು. ಪ್ರತಿ ದಂಧೆಯಿಂದ 1ರಿಂದ 3ಸಾವಿರ ಡಾಲರ್‌ ಸಂಪಾದಿಸುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಯುಎಸ್‌ ಫೆಡರಲ್‌ ಏಜೆಂಟ್‌ಗಳು ದಂತಿಯ ಮನೆಯಲ್ಲಿ ಸಿಕ್ಕ ಎಲ್ಲ ದಾಖಲೆ, ಕ್ರೆಡಿಟ್‌ ಕಾರ್ಡ್‌ ಹಾಗೂ ಇನ್ನಿತರ ವಿವರಗಳನ್ನು ವಶಪಡಿಸಿಕೊಂಡಿದೆ. ಇದೇ ವೇಳೆ ಬ್ಯಾಂಗ್‌ ಒಂದರಲ್ಲಿ 70 ನಿರೋಧ್‌ಗಳು ಸಿಕ್ಕಿದೆ ಎಂದು ತಿಳಿದು ಬಂದಿದೆ.
2017ರ ಮೇನಿಂದ 2018 ಜನವರಿ 22ರ ವರೆಗೆ ನಡೆದ ಸಮ್ಮೇಳನಗಳಲ್ಲಿ ಭಾರತೀ ಚಿತ್ರ ನಟಿಯರನ್ನು ಬಳಸಿ, ದಂಧೆ ನಡೆಸಿದ್ದಾರೆ ಎಂದು ಆರೋಪದಲ್ಲಿ ತಿಳಿಸಲಾಗಿದೆ.

ಚಿತ್ರ ನಟಿಯೊಬ್ಬರು 2017ರ ನ.8ರಂದು ಕ್ಯಾಲಿಫೋರ್ನಿಯಾದಲ್ಲಿ ನಡೆದ ತೆಲುಗು ಅಸೊಸಿಯೇಷನ್‌ ಆಫ್‌ ಸದರ್ನ್‌ ಕ್ಯಾಲಿಫೋರ್ನಿಯ(ಟಿಎಎಸ್‌)ನ ಕಾರ್ಯಕ್ರಮಕ್ಕೆ ಆಗಮಿಸಲಿದ್ದರು. ಆದರೆ ಕಾರ್ಯಕ್ರಮ ಮುಗಿದು 2 ದಿನಗಳ ಬಳಿಕ ಅವರು ಯುಎಸ್‌ಗೆ ಬಂದಿದ್ದು, ಕ್ಯಾಲಿಫೋರ್ನಿಯಾ ಬದಲಾಗಿ, ಚಿಕಾಗೋಗೆ ತೆರಳಿದ್ದಾಳೆ. ಈ ಕುರಿತು ಪೊಲೀಸರು ಅನುಮಾನಗೊಂಡು ತನಿಖೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ