ಆ್ಯಪ್ನಗರ

ಕರೊನಾ ವೈರಸ್‌: ಭಾರತದ ನೆರವಿಗೆ ಧನ್ಯವಾದ ತಿಳಿಸಿದ ಮಾಲ್ಡೀವ್ಸ್‌ ಸೇನೆ!

ಕೊರೊನಾ ವೈರಸ್‌ ಸೋಂಕು ಇಡೀ ವಿಶ್ವವನ್ನೇ ಕಾಡುತ್ತಿದೆ. ಈ ನಡುವೆಯೇ ಭಾರತವು ತನ್ನ ನೆರೆ ರಾಷ್ಟ್ರಗಳಿಗೆ ಸಹಾಯಹಸ್ತ ಚಾಚುತ್ತಿದ್ದು, ಮಾನವೀಯತೆ ಮೆರೆದಿದೆ. ಮಾಲ್ಡೀವ್ಸ್‌ಗೆ 6.2 ಟನ್‌ ತೂಕದ ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನು ಪೂರೈಸಿದೆ.

Vijaya Karnataka Web 2 Apr 2020, 6:30 pm
ಹೊಸದಿಲ್ಲಿ: ಕೊರೊನಾ ವೈರಸ್‌ ಸೋಂಕು ಇಡೀ ವಿಶ್ವವನ್ನೇ ಕಾಡುತ್ತಿದೆ. ಈ ನಡುವೆಯೇ ಭಾರತವು ತನ್ನ ನೆರೆ ರಾಷ್ಟ್ರಗಳಿಗೆ ಸಹಾಯಹಸ್ತ ಚಾಚುತ್ತಿದ್ದು, ಮಾನವೀಯತೆ ಮೆರೆದಿದೆ.
Vijaya Karnataka Web maldives


ಭಾರತದ ಮಹಾನಗರಗಳಾದ ಮುಂಬಯಿ, ದಿಲ್ಲಿ, ಮಧುರೈ ಮತ್ತು ಚನ್ನೈಗಳಲ್ಲಿ ಸಿಲುಕಿದ್ದ ಮಾಲ್ಡೀವ್ಸ್‌ ಪ್ರಜೆಗಳನ್ನು ಭಾರತೀಯ ಸೇನೆಯು ತನ್ನ ತವರಿಗೆ ಮರಳಿಸಿದೆ. ಇದಲ್ಲದೆ ಸುಮಾರು 6.2 ಟನ್‌ ತೂಕದ ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನು ಪೂರೈಸಿದೆ.



ಈ ಎಲ್ಲದ ಕಾರ್ಯದಲ್ಲೂ ನೆರವಿಗೆ ನಿಂದ ಭಾರತ ಸೇನೆಯ ವಾಯುದಳಕ್ಕೆ ಮಾಲ್ಡೀವ್‌ ರಕ್ಷಣಾ ಸಚಿವಾಲಯ ಟ್ವೀಟ್‌ ಮಾಡಿದೆ. ಮಾಲ್ಡೀವ್ಸ್‌ ರಕ್ಷಣಾ ಸಚಿವೆ ಮಾರಿಯಾ ದಿದಿ ಅವರು ಭಾರತೀಯ ರಕ್ಷಣಾ ಪಡೆಗೆ ಧನ್ಯವಾದ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಕರೆಗೆ ಓಗೊಟ್ಟ ಭಾರತ, 3 ದಿನದಲ್ಲಿ PM Caresಗೆ ಬಂತು 7,300 ಕೋಟಿ ರೂ.

ಭಾರತದಲ್ಲಿ ಈಗಾಗಲೇ ಸೋಂಕಿತರ ಸಂಖ್ಯೆ 2 ಸಾವಿರ ಸಮೀಪಿಸಿದ್ದು, ಕೊರೊನಾ ವಿರುದ್ಧದ ಹೋರಾಟಕ್ಕೆ ದೇಶಕ್ಕೆ ದೇಶವೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಜೊತೆ ಕೈಜೋಡಿಸಿದೆ. ಪಿಎಂ ಕೇರ್ಸ್‌ ನಿಧಿಗೆ ಮೂರೇ ದಿನಗಳಲ್ಲಿ 7,300 ಕೋಟಿ ರೂ.ಗೂ ಹೆಚ್ಚು ಹಣ ಹರಿದು ಬಂದಿದೆ ಎಂದು ಅಂದಾಜು ಮಾಡಲಾಗಿದೆ.

ದೇಶಾದ್ಯಂತ 50 ಡಾಕ್ಟರ್ಸ್‌, ನರ್ಸ್‌ಗಳಿಗೂ ತಟ್ಟಿದ ಕೊರೊನಾ ಸೋಂಕು!

ಕೊರೊನಾ ವಿರುದ್ಧದ ಹೋರಾಟಕ್ಕಾಗಿ ಮಾರ್ಚ್‌ 28ರಂದು ಪಿಎಂ ಕೇರ್ಸ್‌ - ಪ್ರಧಾನ ಮಂತ್ರಿ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ನಿಧಿಯನ್ನು ಸ್ಥಾಪನೆ ಮಾಡಲಾಗಿತ್ತು. ನಿಧಿ ಪ್ರಾರಂಭಿಸಿದ ಮೂರು ದಿನಗಳಲ್ಲಿ 7,314 ಕೋಟಿ ರೂ. ದೇಣಿಗೆ ಜಮೆಯಾಗಿದೆ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ