ಆ್ಯಪ್ನಗರ

ಇಂದಿನ ಟಾಪ್ 10 ಸುದ್ದಿಗಳು

ನೀವು ನೋಡಲೇ ಬೇಕಾದ ಇಂದಿನ (19-03-2019) ಟಾಪ್ 10 ಸುದ್ದಿಗಳಿವು.

Vijaya Karnataka Web 19 Mar 2019, 6:45 pm

ಧಾರವಾಡ: ನಿರ್ಮಾಣ ಹಂತದ ಬಹುಮಹಡಿ ಕಟ್ಟಡ ಕುಸಿತ; ಇಬ್ಬರ ಸಾವು, ಹಲವರು ಅವಶೇಷಗಳಡಿ ಸಿಲುಕಿದ ಶಂಕೆ

ಧಾರವಾಡ: ಧಾರವಾಡದಲ್ಲಿ ನಿರ್ಮಾಣ ಹಂತದ ಬಹುಮಹಡಿ ಕಟ್ಟಡವೊಂದು ಕುಸಿದ ಪರಿಣಾಮ ಒಬ್ಬ ಮೃತಪಟ್ಟಿದ್ದಾನೆ. ಹಲವಾರು ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ ಇದೆ.
Vijaya Karnataka Web ಕಟ್ಟಡ ಕುಸಿತ
ಕಟ್ಟಡ ಕುಸಿತ


ರಾಹುಲ್‌ ನಂತರ ಪ್ರಿಯಾಂಕಾ ಕಾರ್ಯಕ್ರಮದಲ್ಲೂ ಮೋದಿ ಮೋದಿ ಜೈಕಾರ
ಮಿರಾಜಪುರ: ಬೆಂಗಳೂರಿನಲ್ಲಿ ನಡೆದ ಸಂವಾದ ವೇಳೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯನ್ನುಮೋದಿ ಮೋದಿ ಎಂದು ಘೋಷಣೆ ಕೂಗಿ ಸ್ವಾಗತ ನೀಡಿದ್ದು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೇ ರಾಹುಲ್‌ ಗಾಂಧಿ ಭಾರಿ ಮುಜುಗರಕ್ಕೂ ಒಳಗಾದರು.

ತುಮಕೂರು ಬಿಟ್ಟುಕೊಡದ್ದಕ್ಕೆ ಗರಮ್‌: ಮೈತ್ರಿ ಪಕ್ಷಗಳ ಸಭೆಗೆ ಕೈ ಕೊಟ್ಟ ಪರಮ್‌
ಬೆಂಗಳೂರು: ಮೈತ್ರಿ ಧರ್ಮ ಪಾಲನೆಯಡಿ ಹಾಲಿ ಕಾಂಗ್ರೆಸ್‌ ಸಂಸದರ ತುಮಕೂರು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವುದು ಸಾಕಷ್ಟು ಅಸಮಾಧಾನಕ್ಕೆ ಕಾರಣವಾಗಿದೆ.

ದೇವರಿಗೇ ಸ್ಪೀಡ್‌ ಪೋಸ್ಟ್‌ ಕಳುಹಿಸಿ ನ್ಯಾಯ ಕೇಳಿದ!
ಲಖ್ನೋ: ಉತ್ತರ ಪ್ರದೇಶದ ಬಸ್ತಿಯಲ್ಲಿ ವ್ಯಕ್ತಿಯೋರ್ವ ಫಾಸ್ಟ್‌ ಟ್ರ್ಯಾಕ್‌ ಕೋರ್ಟ್‌ ಮೂಲಕ ದೇವರಲ್ಲಿ ನ್ಯಾಯ ಕೇಳಿ ಸ್ಪೀಡ್‌ ಪೋಸ್ಟ್ ಕಳುಹಿಸಿದ್ದಾನೆ. ಆತನ ಪೋಸ್ಟ್ ಡೆಲಿವರಿ ಅಡ್ರೆಸ್ ನೋಡಿದ ಅಂಚೆ ಇಲಾಖೆ ಅಚ್ಚರಿ ವ್ಯಕ್ತಪಡಿಸಿದೆ.

ಹಿಂದೂ ಯುವತಿಯ ಮದುವೆಗೆ ಮುಸ್ಲಿಂ ಯುವಕರ ನೇತೃತ್ವ
ಉಪ್ಪಿನಂಗಡಿ: ತೀರಾ ಬಡ ಕುಟುಂಬದ ಹಿಂದೂ ಧರ್ಮದ ಯುವತಿಯ ಮದುವೆಯೊಂದನ್ನು ನೆರೆಯ ಮುಸ್ಲಿಂಮರೇ ಮುಂದೆ ನಿಂತು ಮಾಡುವ ಮೂಲಕ ಸೌಹಾರ್ದತೆ ಮೆರೆದ ಘಟನೆ ಉಪ್ಪಿನಂಗಡಿ ಸಮೀಪದ ಕರುವೇಲು ಎಂಬಲ್ಲಿ ಸೋಮವಾರ ನಡೆದಿದೆ.

ರಾಷ್ಟ್ರಹಿತಕ್ಕಾಗಿ 'ಕಳಪೆ' ಸಂಸದರ ಸಹಿಸುವ ಅನಿವಾರ್ಯತೆ ಇದೆ: ಕಲ್ಲಡ್ಕ ಪ್ರಭಾಕರ ಭಟ್
ಮಂಗಳೂರು: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅತ್ಯುತ್ತಮ ಸಾಧನೆ ಮಾಡಲಿದೆ ಎಂದು ಆರೆಸ್ಸೆಸ್‌ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ. ಕೆಲವು ಸಂಸದರ ಸಾಧನೆ ನಿರೀಕ್ಷೆಗೆ ತಕ್ಕಂತೆ ಇಲ್ಲದಿದ್ದರೂ ಪ್ರಧಾನಿ ಮೋದಿ ಅವರ ಜನಪ್ರಿಯತೆಯಿಂದಾಗಿ ಬಿಜೆಪಿಗೆ ಭಾರೀ ಬಹುಮತದ ಗೆಲುವು ನಿಶ್ಚಿತ ಎಂದು ಅವರು ಪ್ರತಿಪಾದಿಸಿದರು.

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ಗೆ ಬಿಗ್‌ ಶಾಕ್‌: ವಿಧಾನಸಭೆ ಪ್ರತಿಪಕ್ಷ ನಾಯಕ ರಾಜೀನಾಮೆ
ಮುಂಬೈ: ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಕಾಂಗ್ರೆಸ್‌ಗೆ ಬಿಗ್‌ ಶಾಕ್‌ ಎದುರಾಗಿದೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯೊಕರೊಬ್ಬರು ರಾಜೀನಾಮೆ ನೀಡಿದ್ದು ಭಾರಿ ಮುಜುಗರ ತಂದಿದೆ.

IPL 2019: ಆರ್‌ಸಿಬಿ ಸಂಪೂರ್ಣ ವೇಳಾಪಟ್ಟಿ ಇಂತಿದೆ
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2019ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನ ಗ್ರೂಪ್ ಹಂತದ ಸಂಪೂರ್ಣ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆಗೊಳಿಸಿದೆ. ಇದರಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡಲಿರುವ ಎಲ್ಲ 14 ಪಂದ್ಯಗಳ ವಿವರಗಳನ್ನು ಇಲ್ಲಿ ಕೊಡಲಾಗಿದೆ.

ಐಪಿಎಲ್ ವೇಳಾಪಟ್ಟಿ ಬಿಡುಗಡೆ; ಮೇ 12ರಂದು ಫೈನಲ್?
ಮುಂಬಯಿ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನ ಗ್ರೂಪ್ ಹಂತದ ವೇಳಾಪಟ್ಟಿಯನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಲಾಗಿದೆ. ಈ ನಡುವೆ ಫೈನಲ್ ಪಂದ್ಯ ಮೇ 12 ಭಾನುವಾರದಂದು ಆಯೋಜನೆಯಾಗುವ ಸಾಧ್ಯತೆಯಿದೆ.

Apple iPhone: ಐಫೋನ್ 6 ಮತ್ತು ಐಫೋನ್ 6 ಪ್ಲಸ್ ಮಾರಾಟ ಸ್ಥಗಿತಕ್ಕೆ ಚಿಂತನೆ
ಯುವಜನತೆಯ ನೆಚ್ಚಿನ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಆ್ಯಪಲ್ದೇಶದಲ್ಲಿ ಜನಪ್ರಿಯ ಮಾದರಿ ಐಫೋನ್ 6 ಮತ್ತು ಐಫೋನ್ 6 ಪ್ಲಸ್ ಅನ್ನು ಮಾರಾಟದಿಂದ ಹಿಂಪಡೆಯಲು ನಿರ್ಧರಿಸಿದೆ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ