ಆ್ಯಪ್ನಗರ

ಧಗೆ ಧಗೆ; ಟ್ರಾಫಿಕ್ ಪೊಲೀಸರಿಗೆ AC ಹೆಲ್ಮೆಟ್

ತಮ್ಮ ರಾಜ್ಯದ ಸಂಚಾರಿ ಪೊಲೀಸರಿಗೆ ಸಹಿಸಲಾಗದ ದಗೆಯಿಂದ ಬಚಾವ್ ಮಾಡಿಸಲು ಛತ್ತೀಸ್‌ಗಢ ಸರಕಾರ ವಿನೂತನ ಉಪಾಯ ಕಂಡುಕೊಂಡಿದೆ.

Times Now 14 Jun 2019, 3:43 pm
ಹೊಸದಿಲ್ಲಿ: ಸಂಚಾರಿ ಪೊಲೀಸರೆಂದರೆ ಸೈನಿಕರಂತೆ. ಚಳಿ, ಮಳೆ, ಗಾಳಿ, ಬಿಸಿಲೆನ್ನದೆ ಅವರು ತಮ್ಮ ಕರ್ತವ್ಯವನ್ನು ಮಾಡುತ್ತಲೇ ಇರುತ್ತಾರೆ. ಬೇಸಿಗೆಯಲ್ಲಿ ಉರಿ ಬಿಸಿಲ ದಗೆಗೆ ಹಣೆಯಿಂದ ಸೋರುತ್ತಿರುವ ಬೆವರು ಒರೆಸಿಕೊಳ್ಳುತ್ತ ಸುಸ್ತಾಗುವ ಅವರ ದಯನೀಯ ಸ್ಥಿತಿಯನ್ನು ನೋಡಲಾಗದೆ ಛತ್ತೀಸಘಡ ಸರಕಾರ ಅವರಿಗಾಗಿ ವಿನೂತನ ವ್ಯವಸ್ಥೆಯೊಂದನ್ನು ಮಾಡಲು ಹೊರಟಿದೆ. ಸರಕಾರವೀಗ ಅವರಿಗೆ ಹವಾನಿಯಂತ್ರಿತ ಶಿರಸ್ತ್ರಾಣವನ್ನು ನೀಡುವ ಯೋಜನೆ ಜಾರಿಗೆ ತರುತ್ತಿದೆ. ಬಿಸಿಲಲ್ಲಿ ಕೆಲಸ ಮಾಡುವ ಎಲ್ಲ ಸರಕಾರಿ ಸಿಬ್ಬಂದಿಗಳಿಗೆ ಈ ಯೋಜನೆ ಅನ್ವಯವಾಗಲಿದೆ.
Vijaya Karnataka Web 1560453210-TRAFFIC-POLICE


ಪ್ರಯೋಗಾರ್ಥವಾಗಿ ಎರಡು ಹೆಲ್ಮೆಟ್‌ಗಳನ್ನು ನೀಡಿ ಪರೀಕ್ಷಿಸುವೆವು. ಎಲ್ಲ ಸರಿ ಎನ್ನಿಸಿದರೆ ಸಂಚಾರಿ ಪೊಲೀಸರಿಗೆಲ್ಲ ಈ ಹೆಲ್ಮೆಟ್‌ನ್ನು ನೀಡಲಾಗುವುದು ಎಂದು ಛತ್ತೀಸಗಢ ಪೊಲೀಸ್ ಮಹಾನಿರ್ದೇಶಕ ಡಿ. ಎಮ್ ಅವಸ್ಥಿ ಹೇಳಿದ್ದಾರೆ.

ಈ ಹೆಲ್ಮೆಟ್ ಧರಿಸುವುದರ ಪರಿಣಾಮವನ್ನು ಪರೀಕ್ಷಿಸಲು ಅವಸ್ಥಿ ಅವರು ಸ್ವತಃ ತಾವೇ ಅದನ್ನು ಧರಿಸಿ ಪರೀಕ್ಷಿಸಿದ್ದಾರೆ. ರಾಜ್ಯದಲ್ಲಿ 10ಸಾವಿರಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ವಿಪರೀತ ದಗೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆಲ್ಲ ಈ ಯೋಜನೆ ಪ್ರಯೋಜನವಾಗಲಿದೆ ಎಂದವರು ಆಶಯ ವ್ಯಕ್ತ ಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ