ಆ್ಯಪ್ನಗರ

‘ಟ್ರೈನ್‌ 18’ಗೆ ವಂದೇ ಭಾರತ್‌ ಎಕ್ಸಪ್ರೆಸ್‌ ಎಂದು ನಾಮಕರಣ

ಗಂಟೆಗೆ ಗರಿಷ್ಠ 160 ಕಿ.ಮೀ. ವೇಗದಲ್ಲಿ ಚಲಿಸುವ ಸಂಪೂರ್ಣ ಹವಾನಿಯಂತ್ರಿತ ರೈಲು ದಿಲ್ಲಿ ಮತ್ತು ವಾರಣಾಸಿ ನಡುವೆ ಸಂಚರಿಸಲಿದೆ. ಕಾನ್ಪುರ ಮತ್ತು ಅಲಹಾಬಾದ್‌ನಲ್ಲಿ ನಿಲುಗಡೆ ನೀಡಲಾಗಿದೆ. ಶೀಘ್ರದಲ್ಲೇ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಲಿದ್ದಾರೆ.

Vijaya Karnataka 28 Jan 2019, 5:00 am
ಹೊಸದಿಲ್ಲಿ: ದೇಶಿಯವಾಗಿ ನಿರ್ಮಾಣವಾಗಿರುವ ಭಾರತೀಯ ರೈಲ್ವೆಯ ಮಹಾತ್ವಾಕಾಂಕ್ಷಿ 'ಟ್ರೈನ್‌ 18' ರೈಲಿಗೆ ವಂದೇ ಭಾರತ್‌ ಎಕ್ಸಪ್ರೆಸ್‌ ಎಂದು ನಾಮಕರಣ ಮಾಡಲಾಗಿದೆ.
Vijaya Karnataka Web train18


''ಸಾರ್ವಜನಿಕರು ಈ ರೈಲಿಗೆ ಅನೇಕ ಹೆಸರುಗಳನ್ನು ಸೂಚಿಸಿದರು. ವಂದೇ ಭಾರತ್‌ ಎಕ್ಸಪ್ರೆಸ್‌ ಎಂಬ ಹೆಸರು ಅಂತಿಮಗೊಳಿಸಲಾಗಿದೆ. ಇದು ಗಣರಾಜ್ಯೋತ್ಸವ ಸಂದರ್ಭದಲ್ಲಿ ನಾಗರಿಕರಿಗೆ ನೀಡುತ್ತಿರುವ ಉಡುಗೊರೆಯಾಗಿದೆ,'' ಎಂದು ರೈಲ್ವೆ ಸಚಿವ ಪಿಯೂಶ್‌ ಗೋಯಲ್‌ ಹೇಳಿದ್ದಾರೆ.

ಗಂಟೆಗೆ ಗರಿಷ್ಠ 160 ಕಿ.ಮೀ. ವೇಗದಲ್ಲಿ ಚಲಿಸುವ ಸಂಪೂರ್ಣ ಹವಾನಿಯಂತ್ರಿತ ರೈಲು ದಿಲ್ಲಿ ಮತ್ತು ವಾರಣಾಸಿ ನಡುವೆ ಸಂಚರಿಸಲಿದೆ. ಕಾನ್ಪುರ ಮತ್ತು ಅಲಹಾಬಾದ್‌ನಲ್ಲಿ ನಿಲುಗಡೆ ನೀಡಲಾಗಿದೆ. ಶೀಘ್ರದಲ್ಲೇ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಲಿದ್ದಾರೆ.

ವಿಶೇಷಗಳೇನು?

- ಮೇಕ್‌ ಇನ್‌ ಇಂಡಿಯಾ ಅಭಿಯಾನದಲ್ಲಿ ಸಿದ್ಧವಾದ ಅತ್ಯಾಧುನಿಕ ರೈಲು

- ದೇಶದ ಮೊದಲ ಲೊಕೊಮೊಟಿವ್‌ ಎಂಜಿನ್‌ ರಹಿತ ರೈಲು

- ಪ್ರತಿ ಬೋಗಿಯಲ್ಲೂ ಸಿಸಿಟಿವಿ ಕ್ಯಾಮೆರಾ, ವೈಫೈ

- ಪ್ರತಿ ಬೋಗಿಯಲ್ಲೂ ಮನರಂಜನೆ ಸೌಲಭ್ಯ


97

ಕೋಟಿ ರೂ.: ರೈಲಿನ ನಿರ್ಮಾಣ ವೆಚ್ಚ

16

ಬೋಗಿಗಳನ್ನಯ ಟ್ರೈನ್‌ 18 ಹೊಂದಿದೆ

18

ತಿಂಗಳ ಅವಧಿಯಲ್ಲಿ ಚೆನ್ನೈನ ಇಂಟಿಗ್ರಲ್‌ ಕೋಚ್‌ ಫ್ಯಾಕ್ಟರಿಯಲ್ಲಿ ನಿರ್ಮಿಸಲಾಗಿದೆ

ಈ ರೈಲನ್ನು ಸಂಪೂರ್ಣವಾಗಿ ಭಾರತದಲ್ಲೇ ಕೇವಲ 18 ತಿಂಗಳ ಅವಧಿಯಲ್ಲಿ ಭಾರತೀಯ ಎಂಜಿನಿಯರ್‌ಗಳು ನಿರ್ಮಿಸಿದ್ದಾರೆ. ಮೇಕ್‌ ಇನ್‌ ಇಂಡಿಯಾ ಯೋಜನೆಯಲ್ಲಿ ವಿಶ್ವದರ್ಜೆಯ ರೈಲುಗಳನ್ನು ನಿರ್ಮಿಸಲು ಸಾಧ್ಯವಿದೆ ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ.

- ಪಿಯೂಶ್‌ ಗೋಯಲ್‌, ರೈಲ್ವೆ ಸಚಿವ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ