ಆ್ಯಪ್ನಗರ

ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದೇವೆ, ವಾಪಸ್‌ ಪಕ್ಷ ಸೇರುವ ಮಾತೇ ಇಲ್ಲ: ಬಂಡಾಯ ಶಾಸಕರ ಸ್ಪಷ್ಟನೆ

‘‘ನಾವು ಪಕ್ಷ ತೊರೆದು ಓಡಿ ಬಂದಿರುವುದಕ್ಕೆ ದಿಗ್ವಿಜಯ್‌ ಸಿಂಗ್‌ ಕಾರಣ. ಅವರಂಥ ನಾಯಕರು ಕಾಂಗ್ರೆಸ್‌ನ್ನು ಹಾಳು ಮಾಡುತ್ತಿದ್ದಾರೆ. ಈಗ ಇಲ್ಲಿಗೂ ಬಂದು ನಮ್ಮನ್ನು ಭೇಟಿ ಮಾಡಲು ಹಠ ಸಾಧಿಸುತ್ತಿರುವ ಅವರಿಂದ ನಮಗೆ ರಕ್ಷಣೆ ನೀಡಿ ಎಂದು ಬೆಂಗಳೂರು ಪೊಲೀಸರನ್ನು ಕೇಳಿಕೊಂಡಿದ್ದೇವೆ,’’ ಎಂದು ಅತೃಪ್ತ ಶಾಸಕಿ ಇಮರ್ತಿ ದೇವಿ ದೂರಿದ್ದಾರೆ.

Agencies 18 Mar 2020, 6:12 pm

ಬೆಂಗಳೂರು: ಯಾರ ಬಲವಂತ ಅಥವಾ ಆಮಿಷಕ್ಕೆ ಬಲಿಯಾಗದೇ ಸ್ವಇಚ್ಛೆಯಿಂದಲೇ ತಾವು ಪಕ್ಷ ತೊರೆದು ಬಂದಿರುವುದಾಗಿ ಬೆಂಗಳೂರಿನ ರೆಸಾರ್ಟ್‌ನಲ್ಲಿ ಬೀಡುಬಿಟ್ಟಿರುವ ಅತೃಪ್ತ ಕಾಂಗ್ರೆಸ್‌ ಶಾಸಕರು ತಿಳಿಸಿದ್ದಾರೆ. “ಮಧ್ಯ ಪ್ರದೇಶದಿಂದ ಬಂದಿರುವ ದಿಗ್ವಿಜಯ್‌ ಸಿಂಗ್‌ ಅವರನ್ನು ತಾವು ಭೇಟಿ ಮಾಡುವುದಿಲ್ಲ. ಅಂತಹ ಇಚ್ಛೆ ಖಂಡಿತ ತಮಗಿಲ್ಲ,” ಎಂದು ಅವರು ಹೇಳಿಕೆ ನೀಡಿರುವ ವಿಡಿಯೋ ಬುಧವಾರ ಬಿಡುಗಡೆಗೊಂಡಿದೆ.
Vijaya Karnataka Web Madhya Pradesh Congress Rebel MLA


ಬಂಡಾಯ ಶಾಸಕರನ್ನು ಬಿಜೆಪಿ ಒತ್ತೆಯಲ್ಲಿ ಇರಿಸಿಕೊಂಡಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‌ನಾಥ್‌ ಸೇರಿದಂತೆ ಕಾಂಗ್ರೆಸ್‌ನ ಹಲವು ನಾಯಕರು ಆರೋಪಿಸಿದ್ದಾರೆ. ‘‘ಸರಕಾರ ಕುಸಿಯುವ ಭೀತಿಯಿಂದ ಕಾಂಗ್ರೆಸ್‌ ಮುಖಂಡರು ಈ ರೀತಿ ಆಪಾದನೆ ಮಾಡುತ್ತಿದ್ದಾರೆ. ಅದರಲ್ಲಿ ಹುರುಳಿಲ್ಲ. ಕಳೆದ ಒಂದು ವರ್ಷದಿಂದ ಅವರ ಮುಂದೆ ನಮ್ಮ ಅಳಲು ಹೇಳಿಕೊಳ್ಳಲು ಪ್ರಯತ್ನಿಸಿ ಸೋತಿದ್ದೇವೆ. ಅಂದು ಮುಖ್ಯಮಂತ್ರಿ ಕಮಲ್‌ನಾಥ್‌ ಸೇರಿದಂತೆ ಯಾರೂ ನಮ್ಮ ಮಾತಿಗೆ ಕಿವಿಗೊಡಲಿಲ್ಲ. ಈಗ ಸಂಕಷ್ಟ ಎದುರಾಗಿದ್ದರಿಂದ ದಿಗ್ವಿಜಯ್‌ ಸಿಂಗ್‌ ಇಲ್ಲಿಗೆ ಬಂದಿದ್ದಾರೆ. ಒಂದು ವರ್ಷದಿಂದ ಕೇಳದ ನಮ್ಮ ಅಳಲನ್ನು ಈಗ ಒಂದು ದಿನದಲ್ಲಿ ಏನು ಕೇಳಬಲ್ಲರು? ಸ್ವಯಂ ನಿರ್ಧಾರದಿಂದಲೇ ನಾವಿಲ್ಲಿಗೆ ಬಂದಿದ್ದೇವೆ. ಕಾಂಗ್ರೆಸ್‌ಗೆ ರಾಜೀನಾಮೆ ಕೂಡ ನೀಡಿದ್ದೇವೆ. ವಾಪಸ್‌ ಪಕ್ಷ ಸೇರುವ ಮಾತೇ ಇಲ್ಲ,’’ ಎಂದು ಅತೃಪ್ತರು ಹೇಳಿಕೊಂಡಿದ್ದಾರೆ.

ಮಧ್ಯಪ್ರದೇಶದ ಶಾಸಕರ ಭೇಟಿಗೆ ಅವಕಾಶ ನಿರಾಕರಣೆ, ಡಿಕೆಶಿಯಿಂದ ಪೊಲೀಸ್ ಆಯುಕ್ತರಿಗೆ ದೂರು

‘‘ನಾವು ಪಕ್ಷ ತೊರೆದು ಓಡಿ ಬಂದಿರುವುದಕ್ಕೆ ದಿಗ್ವಿಜಯ್‌ ಸಿಂಗ್‌ ಕಾರಣ. ಅವರಂಥ ನಾಯಕರು ಕಾಂಗ್ರೆಸ್‌ನ್ನು ಹಾಳು ಮಾಡುತ್ತಿದ್ದಾರೆ. ಈಗ ಇಲ್ಲಿಗೂ ಬಂದು ನಮ್ಮನ್ನು ಭೇಟಿ ಮಾಡಲು ಹಠ ಸಾಧಿಸುತ್ತಿರುವ ಅವರಿಂದ ನಮಗೆ ರಕ್ಷಣೆ ನೀಡಿ ಎಂದು ಬೆಂಗಳೂರು ಪೊಲೀಸರನ್ನು ಕೇಳಿಕೊಂಡಿದ್ದೇವೆ,’’ ಎಂದು ಅತೃಪ್ತ ಶಾಸಕಿ ಇಮರ್ತಿ ದೇವಿ ತಿಳಿಸಿದ್ದಾರೆ.

ಬಿಜೆಪಿ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ ಅವರ ಬೆಂಬಲಿಗ ಹಾಗೂ ಮಾಜಿ ಕಾಂಗ್ರೆಸ್‌ ನಾಯಕ ಪಂಕಜ್‌ ಚತುರ್ವೇದಿ ಅವರು ಅತೃಪ್ತ ಶಾಸಕರು ನೀಡಿರುವ ಹೇಳಿಕೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕಾಂಗ್ರೆಸ್‌ ತೊರೆದಿರುವ 22 ಬಂಡಾಯ ಶಾಸಕರು ಸದ್ಯ ಬೆಂಗಳೂರಿನ ರೆಸಾರ್ಟ್‌ನಲ್ಲಿ ಠಿಕಾಣಿ ಹೂಡಿದ್ದಾರೆ.
ಬಿಜೆಪಿ ಸರ್ಕಾರದ ಉಸ್ತುವಾರಿಯಲ್ಲಿ ಕೈ ಶಾಸಕರ ಅಕ್ರಮ ಬಂಧನ, ಸಿದ್ದರಾಮಯ್ಯ ಆರೋಪ

ಪತನದ ಹಂತ ತಲುಪಿರುವ 15 ತಿಂಗಳ ಅವಧಿಯ ಕಾಂಗ್ರೆಸ್‌ ಸರಕಾರ ಉಳಿಸಲು ದಿಗ್ವಿಜಯ್‌ ಸಿಂಗ್‌ ಕಳೆದ ಹತ್ತು ದಿನಗಳಿಂದ ಕಸರತ್ತು ನಡೆಸಿದ್ದಾರೆ. ಈ ಮೊದಲು ಗುರುಗ್ರಾಮದ ಹೋಟೆಲ್‌ಗೆ ತೆರಳಿದ್ದ ಅತೃಪ್ತ ಶಾಸಕರ ಭೇಟಿಗೂ ಸಿಂಗ್‌ ವಿಫಲ ಪ್ರಯತ್ನ ಮಾಡಿದ್ದರು. ಈಗ ಕರ್ನಾಟಕಕ್ಕೆ ಆಗಮಿಸಿ, ಡಿಕೆ ಶಿವಕುಮಾರ್‌ ಜತೆಗೂಡಿ ಅತೃಪ್ತರನ್ನು ಭೇಟಿಯಾಗುವ ಪ್ರಯತ್ನ ನಡೆಸಿ ಪೊಲೀಸರ ವಶವಾಗಿ ನಂತರ ಬಿಡುಗಡೆಯಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ