ಆ್ಯಪ್ನಗರ

ತ್ರಿಪುರವನ್ನು ಕಳೆದುಕೊಂಡ ಸಿಪಿಎಂ

ಕಳೆದ 25 ವರ್ಷಗಳಿಂದ ಆಳ್ವಿಕೆ ನಡೆಸುತ್ತಿರುವ ಕಮ್ಯುನಿಸ್ಟ್ ಪಕ್ಷ ಈ ಬಾರಿ ತ್ರಿಪುರದಲ್ಲಿ ಅಧಿಕಾರ ಕಳೆದುಕೊಳ್ಳುವುದು ದಿಟವಾಗುತ್ತಿದ್ದು, ಭಾರತೀಯ ಜನತಾ ಪಕ್ಷದ 38 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

Vijaya Karnataka Web 3 Mar 2018, 2:26 pm
ಅಗರ್ತಲಾ: 25 ವರ್ಷಗಳ ಎಡರಂಗ ಆಡಳಿತಕ್ಕೆ ಐತಿಹಾಸಿಕ ಆಘಾತ ನೀಡಿರುವ ಬಿಜೆಪಿ, ತ್ರಿಪುರಾದಲ್ಲಿ ಸರಕಾರ ರಚಿಸಲು ಸ್ಪಷ್ಟ ಬಹುಮತ ಗಳಿಸಿರುವುದರೊಂದಿಗೆ ಈಶಾನ್ಯ ರಾಜ್ಯಗಳಿಗೂ ಕೇಸರಿ ಅಲೆ ಭರ್ಜರಿಯಾಗಿ ಬೀಸಿದಂತಾಗಿದೆ. ಈ ಫಲಿತಾಂಶದೊಂದಿಗೆ, ದೇಶದಲ್ಲಿ ಎಡರಂಗದ ಪ್ರಭುತ್ವ ಈಗ ಕೇರಳದಲ್ಲಿ ಮಾತ್ರ ಉಳಿದುಕೊಂಡಂತಾಗಿದೆ.
Vijaya Karnataka Web tripura assembly election results 2018
ತ್ರಿಪುರವನ್ನು ಕಳೆದುಕೊಂಡ ಸಿಪಿಎಂ


ವರದಿಗಳ ಪ್ರಕಾರ 59 ಕ್ಷೇತ್ರಗಳಲ್ಲಿ ಬಿಜೆಪಿ 43 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಸ್ಪಷ್ಟ ಬಹುಮತದತ್ತ ಮುಖ ಮಾಡಿದೆ. ಆದರೆ ಆಡಳಿತಾ ರೂಢ ಸಿಪಿಎಂ ಮೈತ್ರಿಕೂಟಕ್ಕೆ ಭಾರಿ ಮುಖಭಂಗವಾಗಿದ್ದು, ಎಡಪಕ್ಷಗಳ ಒಕ್ಕೂಟ ಕೇವಲ 20 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ಪಕ್ಷ ಖಾತೆ ತೆರೆಯುವಲ್ಲಿ ವಿಫಲವಾಗಿದೆ.



60 ವಿಧಾನ ಸಭಾ ಕ್ಷೇತ್ರಗಳಿರುವ ತ್ರಿಪುರದಲ್ಲಿ 59 ಕ್ಷೇತ್ರಗಳಲ್ಲಿ ಫೆ.18 ರಂದು ಮತದಾನ ನಡೆದಿತ್ತು.

ತ್ರಿಪುರಾ ಚುನಾವಣೆ: ತಾಜಾ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ