ಆ್ಯಪ್ನಗರ

ಉತ್ತರಾಖಂಡ ಸಿಎಂ ಆಗಿ ತ್ರಿವೇಂದ್ರ ಸಿಂಗ್ ರಾವತ್ ನಾಳೆ ಪ್ರಮಾಣ

ಉತ್ತರಾಖಂಡ ಮುಖ್ಯಮಂತ್ರಿಯಾಗಿ ತ್ರಿವೇಂದ್ರ ಸಿಂಗ್‌ ರಾವತ್ ಅವರನ್ನು ಬಿಜೆಪಿ ಆಯ್ಕೆ ಮಾಡಿದ್ದು, ಶಾಸಕರು ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಚುನಾಯಿಸಿದರು. ಅವರು ಶನಿವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 18 Mar 2017, 8:21 am
ಡೆಹ್ರಾಡೂನ್: ಸಂಘ ಪರಿವಾರದ ನೆಚ್ಚಿನ ಮುಖಂಡ ತ್ರಿವೇಂದ್ರ ಸಿಂಗ್‌ ರಾವತ್‌ ಉತ್ತರಾಖಂಡ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಶುಕ್ರವಾರ ಸರ್ವಾನುಮತದಿಂದ ಆಯ್ಕೆಯಾದರು. ಮುಖ್ಯಮಂತ್ರಿಯಾಗಿ ಅವರು ಶನಿವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
Vijaya Karnataka Web trivendra singh rawat to be uttarakhand chief minister swearing in on saturday
ಉತ್ತರಾಖಂಡ ಸಿಎಂ ಆಗಿ ತ್ರಿವೇಂದ್ರ ಸಿಂಗ್ ರಾವತ್ ನಾಳೆ ಪ್ರಮಾಣ


ಕೇಂದ್ರೀಯ ವೀಕ್ಷಕರಾಗಿ ಆಗಮಿಸಿದ್ದ ನರೇಂದ್ರ ಸಿಂಗ್‌ ತೋಮರ್‌ ಸಮ್ಮುಖದಲ್ಲಿ ನಡೆದ ಶಾಸಕಾಂಗ ಸಭೆಯು ಸಣ್ಣ ಅಪಸ್ವರಕ್ಕೂ ಆಸ್ಪದ ನೀಡದೆ ರಾವತ್‌ ನಾಯಕತ್ವವನ್ನು ಘೋಷಿಸಿತು. ಅವರ ಹೆಸರನ್ನು ಸತ್ಪಾಲ್‌ ಮಹಾರಾಜ್‌ ಮತ್ತು ಪ್ರಕಾಶ್‌ ಪಂತ್‌ ಅನುಮೋದಿಸಿದರು.

ರಾವತ್‌ ಇಂದು ಉತ್ತರಾಖಂಡ ರಾಜ್ಯದ ಎಂಟನೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಪಕ್ಷದ ಅಧ್ಯಕ್ಷ ಅಮಿತ್‌ ಶಾ ಸೇರಿದಂತೆ ಹಲವು ಗಣ್ಯರು ಸಮಾರಂಭ ಸಾಕ್ಷೀಕರಿಸಲಿದ್ದಾರೆ.

ಉತ್ತರ ಪ್ರದೇಶ ಬಿಎಲ್‌ಪಿ ಇಂದು: ರಾಜ್ಯ ಬಿಜೆಪಿ ಶಾಸಕಾಂಗ ನಾಯಕನ ಆಯ್ಕೆಗೆ ಇಂದು ಸಂಜೆ 4 ಗಂಟೆಗೆ ಸಭೆ ನಡೆಯಲಿದೆ. ಬಹುತೇಕ ಅಂತಿಮಗೊಂಡಿರುವ ನಾಯಕನ ಹೆಸರನ್ನು ಈ ಸಭೆ ಅನುಮೋದಿಸಲಿದೆ ಎನ್ನುವ ಸುತ್ತಿಗಳು ಕೇಳಿ ಬಂದಿವೆ.

Trivendra Singh Rawat to be Uttarakhand Chief Minister, swearing-in on Saturday

DEHRADUN: The BJP has picked Trivendra Singh Rawat as its Chief Minister candidate in Uttarakhand. Rawat was elected the BJP's legislature party leader by party MLAs on Friday. He will take oath on Saturday.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ