ಆ್ಯಪ್ನಗರ

ಈ 42 ಚೀನೀ ಆ್ಯಪ್‌ಗಳು ದೇಶದ ಭದ್ರತೆಗೆ ಮಾರಕ

ಗಡಿಯಲ್ಲಿ ಹೆಚ್ಚಿನ ಭದ್ರತೆಗೆ ಮುಂದಾಗಿರುವ ಭಾರತೀಯ ಸೇನೆ ಇದೀಗ ಗಡಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸೈನಿಕರಿಗೆ ತಮ್ಮ ಮೊಬೈಲ್‌ನಲ್ಲಿ ಅಳವಡಿಸಿಕೊಂಡಿರುವ ಚೈನೀಸ್‌ನ್ನು ಡಿಲೀಟ್‌ ಮಾಡುವಂತೆ ಕೇಳಿಕೊಂಡಿದೆ.

TNN 29 Nov 2017, 2:27 pm
ಹೊಸದಿಲ್ಲಿ: ಗಡಿಯಲ್ಲಿ ಹೆಚ್ಚಿನ ಭದ್ರತೆಗೆ ಮುಂದಾಗಿರುವ ಭಾರತೀಯ ಸೇನೆ ಇದೀಗ ಗಡಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸೈನಿಕರಿಗೆ ತಮ್ಮ ಮೊಬೈಲ್‌ನಲ್ಲಿ ಅಳವಡಿಸಿಕೊಂಡಿರುವ ಚೈನೀಸ್‌ ಆ್ಯಪ್‌ಗಳನ್ನು ಡಿಲೀಟ್‌ ಮಾಡುವಂತೆ ಕೇಳಿಕೊಂಡಿದೆ.
Vijaya Karnataka Web troops asked to get rid of apps to foil espionage bids
ಈ 42 ಚೀನೀ ಆ್ಯಪ್‌ಗಳು ದೇಶದ ಭದ್ರತೆಗೆ ಮಾರಕ


ಚೀನೀ ಆ್ಯಪ್‌ಗಳು ಸೇನಾ ತಾಣಗಳ ಕುರಿತಾದ ಮಾಹಿತಿಗಳನ್ನು ಸಂಗ್ರಹಿಸುತ್ತಿರುವ ಸಾಧ್ಯತೆಯಿರುವುದನ್ನು ಅರಿತಿರುವ ಸೈಬರ್‌ಸೆಕ್ಯುರಿಟಿ ಇಲಾಖೆ, ಈ ಕೂಡಲೇ ಗಡಿಯಲ್ಲಿ ಕರ್ತವ್ಯ ನಿರ್ವಹಿಸುವ ಸೈನಿಕರು ತಮ್ಮ ಮೊಬೈಲ್‌ ಪೋನ್‌ ಫಾರ್ಮಾಟ್‌ ಮಾಡಬೇಕು ಅಥವಾ ಚೀನಾ ಆ್ಯಪ್‌ಗಳನ್ನು ಡಿಲೀಟ್‌ ಮಾಡುವಂತೆ ಮನವಿ ಮಾಡಿಕೊಂಡಿದೆ.

ಮಾಹಿತಿಗಳ ಪ್ರಕಾರ ಚೀನಾದ ವಿ-ಚ್ಯಾಟ್, ಟ್ರೂ ಕಾಲರ್, ವೈಬೋ, ಯುಸಿ ಬ್ರೌಸರ್ ಮತ್ತು ಯುಸಿ ನ್ಯೂಸ್ ಸೇರಿ ಸುಮಾರು 42 ಆ್ಯಪ್‌ಗಳನ್ನು ಭಾರತದ ಭದ್ರತೆಗೆ ಅತ್ಯಂತ ಅಪಾಯಕಾರಿಯಾಗಿವೆ ಎಂದು ಗುಪ್ತಚರ ದಳ ಎಚ್ಚರಿಕೆ ನೀಡಿದೆ.

ಚೀನಾ ಮೂಲದ ಮೊಬೈಲ್‌ ಸೇರಿದಂತೆ ಇತರೇ ವಿದ್ಯುನ್ಮಾನ ಸಾಧನಗಳ ಕುರಿತು ಎಚ್ಚರದಿಂದ ಇರಬೇಕು ಈ ಕುರಿತು ಪ್ರತೀ ಬಾರಿಯೂ ತೆಗೆದುಕೊಳ್ಳಬಹುದಾದ ಕ್ರಮಗಳನ್ನು ಸೈಬರ್‌ ಸೆಕ್ಯೂರಿಟಿ ಅಧಿಕಾರಿಗಳು ಸೈನಿಕರು ಸೇರಿದಂತೆ ಎಲ್ಲರಿಗೂ ನಿರ್ದೇಶನ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ