ಆ್ಯಪ್ನಗರ

ಸಿಖ್‌ ವಿರೋಧಿ ಹಿಂಸಾಚಾರದ ಮರುತನಿಖೆಗೆ ಕೇಂದ್ರ ನಿರ್ಧಾರ, ಕಮಲ್‌ನಾಥ್‌ಗೆ ಸಂಕಷ್ಟ

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆ ಬಳಿಕ ಸಿಖ್ಖರನ್ನು ಗುರಿಯಾಗಿಸಿಕೊಂಡು 1984ರಲ್ಲಿ ದಿಲ್ಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪವನ್ನು ಕಮಲ್‌ನಾಥ್‌ ಎದುರಿಸುತ್ತಿದ್ದಾರೆ.

Agencies 10 Sep 2019, 5:00 am
ಹೊಸದಿಲ್ಲಿ: 1984ರಲ್ಲಿ ನಡೆದಿದ್ದ ಸಿಖ್‌ ವಿರೋಧಿ ಹಿಂಸಾಚಾರ ಪ್ರಕರಣದ ಮರುತನಿಖೆಗೆ ಕೇಂದ್ರ ಗೃಹ ಸಚಿವಾಲಯ ಹಸಿರು ನಿಶಾನೆ ತೋರಿಸಿರುವುದರಿಂದ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‌ನಾಥ್‌ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ.
Vijaya Karnataka Web trouble for kamal nath as home ministry wants 1984 riots case reopened
ಸಿಖ್‌ ವಿರೋಧಿ ಹಿಂಸಾಚಾರದ ಮರುತನಿಖೆಗೆ ಕೇಂದ್ರ ನಿರ್ಧಾರ, ಕಮಲ್‌ನಾಥ್‌ಗೆ ಸಂಕಷ್ಟ


ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆ ಬಳಿಕ ಸಿಖ್ಖರನ್ನು ಗುರಿಯಾಗಿಸಿಕೊಂಡು 1984ರಲ್ಲಿ ದಿಲ್ಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪವನ್ನು ಕಮಲ್‌ನಾಥ್‌ ಎದುರಿಸುತ್ತಿದ್ದಾರೆ. ಆದರೆ ಕಮಲ್‌ ನಾಥ್‌ ತಮ್ಮ ವಿರುದ್ಧ ಆರೋಪವನ್ನು ಅಲ್ಲಗಳೆಯುತ್ತಾ ಬಂದಿದ್ದಾರೆ. ಅಗಸ್ಟ್‌ವೆಸ್ಟ್‌ಲ್ಯಾಂಡ್‌ ಕಾಪ್ಟರ್‌ ಖರೀದಿ ಪ್ರಕರಣದಲ್ಲಿ ಕಮಲ್‌ನಾಥ್‌ ಅವರ ಸೋದರ ಸಂಬಂಧಿ ರತುಲ್‌ ಪುರಿ ಬಂಧನದ ಬೆನ್ನಲ್ಲೇ ಮತ್ತೊಂದು ಆಘಾತ ತಟ್ಟಿದೆ.

ಪ್ರಕರಣದ ತನಿಖೆ ನಡೆಸಿದ ನಾನಾವತಿ ಆಯೋಗವು ಸಹ ಸಂಶಯದ ಲಾಭದ ಮೇಲೆ ಕಮಲ್‌ನಾಥ್‌ ಅವರನ್ನು ಖುಲಾಸೆಗೊಳಿಸಿದೆ. ಆದರೆ, ಕೇಂದ್ರ ಸರಕಾರ ನಿರ್ಧಾರದೊಂದಿಗೆ ಪ್ರಕರಣಕ್ಕೆ ಮರುಜೀವ ಬಂದಂತಾಗಿದೆ. 1984ರ ಸಿಖ್‌ ಗಲಭೆಗೆ ಸಂಬಂಧಿಸಿದಂತೆ 220ಕ್ಕೂ ಹೆಚ್ಚು ಪ್ರಕರಣಗಳನ್ನು ತನಿಖೆ ನಡೆಸಲು ಕೇಂದ್ರ ಸರಕಾರ ವಿಶೇಷ ತನಿಖಾ ತಂಡ ರಚಿಸಿದ ಎರಡು ವರ್ಷದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.

ಇನ್ನಿಬ್ಬರು ಮಾಜಿ ಕಾಂಗ್ರೆಸ್‌ ನಾಯಕರಾದ ಜಗದೀಶ್‌ ಟೈಟ್ಲರ್‌ ಮತ್ತು ಸಜ್ಜನ್‌ ಕುಮಾರ್‌ ಸಹ ಈ ಪ್ರಕರಣದ ಆರೋಪಿಗಳಾಗಿದ್ದರು. ಸಜ್ಜನ್‌ ಕುಮಾರ್‌ ಸೇರಿದಂತೆ 88 ಮಂದಿಯ ವಿರುದ್ಧ ಆರೋಪ ಸಾಬೀತಾಗಿದ್ದು, ದಿಲ್ಲಿ ಹೈಕೋರ್ಟ್‌ ಶಿಕ್ಷೆಯನ್ನೂ ಎತ್ತಿ ಹಿಡಿದಿದದೆ. ಟೈಟ್ಲರ್‌ ಖುಲಾಸೆಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ