ಆ್ಯಪ್ನಗರ

ಟ್ರಂಪ್‌ ಏನನ್ನೂ ನೋಡಿಲ್ಲ, ಏನೂ ಕೇಳಿಸಿಲ್ಲ

''ನಾನೇನನ್ನೂ ನೋಡಿಲ್ಲ, ಕೇಳಿಸಿಕೊಂಡೂ ಇಲ್ಲ. ಜೂನ್‌ 12ರ ಶೃಂಗ ಸಭೆಯನ್ನು ಎದುರು ನೋಡುತ್ತಿದ್ದೇನಷ್ಟೆ'' ಸಂಪೂರ್ಣ ಅಣ್ವಸ್ತ್ರ ನಿಶ್ಶಸ್ತ್ರೀಕರಣಕದ್ಕೆ ಒತ್ತಡ ಹೇರಿದರೆ ಸಿಂಗಾಪುರದಲ್ಲಿ ನಿಗದಿಯಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ನಡುವೆ ಮಾತುಕತೆ ನಡೆಯುವುದೇ ಅನುಮಾನ ಎಂಬ ಉ.ಕೊರಿಯಾ ಬೆದರಿಕೆಗೆ ಟ್ರಂಪ್‌ ಪ್ರತಿಕ್ರಿಯಿಸಿರುವ ರೀತಿ ಇದು.

Vijaya Karnataka 18 May 2018, 9:38 am
ವಾಷಿಂಗ್ಟನ್‌ :''ನಾನೇನನ್ನೂ ನೋಡಿಲ್ಲ, ಕೇಳಿಸಿಕೊಂಡೂ ಇಲ್ಲ. ಜೂನ್‌ 12ರ ಶೃಂಗ ಸಭೆಯನ್ನು ಎದುರು ನೋಡುತ್ತಿದ್ದೇನಷ್ಟೆ'' ಸಂಪೂರ್ಣ ಅಣ್ವಸ್ತ್ರ ನಿಶ್ಶಸ್ತ್ರೀಕರಣಕದ್ಕೆ ಒತ್ತಡ ಹೇರಿದರೆ ಸಿಂಗಾಪುರದಲ್ಲಿ ನಿಗದಿಯಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ನಡುವೆ ಮಾತುಕತೆ ನಡೆಯುವುದೇ ಅನುಮಾನ ಎಂಬ ಉ.ಕೊರಿಯಾ ಬೆದರಿಕೆಗೆ ಟ್ರಂಪ್‌ ಪ್ರತಿಕ್ರಿಯಿಸಿರುವ ರೀತಿ ಇದು.
Vijaya Karnataka Web Donald Trump


ಜೂನ್‌ 12ರಂದು ಸಿಂಗಾಪುರದಲ್ಲಿ ನಿಗದಿಯಾಗಿರುವ ತಮ್ಮ ಹಾಗೂ ಕಿಮ್‌ ಜಾಂಗ್‌ ಉನ್‌ ನಡುವಿನ ಚಾರಿತ್ರಿಕ ಶೃಂಗಸಭೆಯನ್ನು ರದ್ದುಗೊಳಿಸುವುದಾಗಿ ಉತ್ತರ ಕೊರಿಯಾ ನೀಡಿದ ಎಚ್ಚರಿಕೆ ಅಮೆರಿಕದ ಗಮನಕ್ಕೆ ಬಂದೇ ಇಲ್ಲ ಎಂದೂ ಟ್ರಂಪ್‌ ಸ್ಪಷ್ಟಪಡಿಸಿದ್ದಾರೆ.

''ನಾವು ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ನಾವು ಅವರ ಬೆದರಿಕೆಯನ್ನು ಗಮನಿಸಿಯೇ ಇಲ್ಲ. ನಾವಂತೂ ಶೃಂಗಸಭೆಯನ್ನು ಎದುರು ನೋಡುತ್ತಿದ್ದೇವೆ. ನಾವು ಏನನ್ನೂ ನೋಡಿಲ್ಲ... ಏನನ್ನೂ ಕೇಳಿಸಿಕೊಂಡೂ ಇಲ್ಲ... ಮುಂದೆ ಏನೇನಾಗುತ್ತವೋ ಅವೆಲ್ಲವನ್ನೂ ಎದುರು ನೋಡುತ್ತಿದ್ದೇವೆ,'' ಎಂದು ಶ್ವೇತಭವನದಲ್ಲಿ ನಡೆದ ಸುದ್ದಿಗೋಷಷ್ಠಿಯಲ್ಲಿ ನಾಜೂಕಿನ ಉತ್ತರ ನೀಡಿದ್ದಾರೆ.

'ಕಿಮ್‌ ಮೋಸ ಮಾಡುತ್ತಿರುವರೇ' ಎಂದು ಪತ್ರಕರ್ತರು ಕೇಳಿದ್ದಕ್ಕೆ, ''ಏನಾಗುತ್ತೋ ನೋಡೋಣ,'' ಎಂದ ಟ್ರಂಪ್‌, ''ಕೊರಿಯನ್‌ ದ್ವೀಪದಲ್ಲಿ ಅಣ್ವಸ್ತ್ರ ನಾಶಕ್ಕೆ ನೀವು ಈಗಲೂ ಆಗ್ರಹಿಸುತ್ತೀರಾ'' ಎಂದು ಕೇಳಿದ್ದಕ್ಕೆ ''ಹೌದು'' ಎಂದು ಯಾವುದೇ ಅಳುಕಿಲ್ಲದೆ ಉತ್ತರಿಸಿದರು.

ಖಾಸಗಿ ವಕೀಲನಿಗೆ 2.5 ಲಕ್ಷ ಡಾಲರ್‌ ಪಾವತಿ

ನೀಲಿ ಚಿತ್ರಗಳ ತಾರೆ ಸ್ಟಾರ್ಮಿ ಡೇನಿಯೆಲ್ಸ್‌ಗೆ 1,30,000 ಡಾಲರ್‌ ಭಕ್ಷೀಸು ನೀಡಿದ್ದೂ ಸೇರಿದಂತೆ ಚುನಾವಣಾ ಸಂಬಂಧಿ ಖರ್ಚಿಗಾಗಿ ತಮ್ಮ ಖಾಸಗಿ ವಕೀಲ ಮೈಕೆಲ್‌ ಕೊಹೆನ್‌ ಅವರಿಗೆ ಒಟ್ಟು 2,50,00 ಡಾಲರ್‌ ಹಣ ನೀಡಿರುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬಹಿರಂಗಪಡಿಸಿದ್ದಾರೆ. ಆಫೀಸ್‌ ಆಫ್‌ ಗವರ್ನಮೆಂಟ್‌ ಎಥಿಕ್ಸ್‌ (ಒಜಿಇ)ಗೆ ಆರ್ಥಿಕ ವಿವರ ಸಲ್ಲಿಸಲು ಕೊನೆಯ ದಿನವಾದ ಮಂಗಳವಾರ ಟ್ರಂಪ್‌ ತಮ್ಮ ಆರ್ಥಿಕ ವ್ಯವಹಾರಗಳ ಸಂಪೂರ್ಣ ವಿವರಗಳನ್ನು ಸಲ್ಲಿಸಿದ್ದಾರೆ. ಅದರಲ್ಲಿ ಕೊಹೆನ್‌ಗೆ ಸಂದಾಯ ಮಾಡಿದ ಹಣದ ವಿವರವೂ ಸೇರಿದೆ. 71 ವರ್ಷದ ಟ್ರಂಪ್‌ ಸಲ್ಲಿಸಿದ ವಿವರಗಳನ್ನು ಪರಾಮರ್ಶಿಸಿದ ಬಳಿಕ ಒಇಜಿ ಅದನ್ನು ಬುಧವಾರ ಬಹಿರಂಗಗೊಳಿಸಿದೆ. ಟ್ರಂಪ್‌ ಜತೆಗಿನ ಲೈಂಗಿಕ ಸಂಬಂಧವನ್ನು ಬಹಿರಂಗಗೊಳಿಸದಂತೆ ಅಧ್ಯಕ್ಷೀಯ ಚುನಾವಣೆ ವೇಳೆ ತನಗೆ ಆಮಿಷ ಒಡ್ಡಲಾಗಿದೆ ಎಂದು ಡೇನಿಯಲ್ಸ್‌ ಹೇಳಿದ್ದರು. ಡೇನಿಯಲ್‌ಗೆ 1,30,000 ಡಾಲರ್‌ ಸಂದಾಯ ಮಾಡಿದ್ದು, ಅದನ್ನು ತಾವು ಮರುಪಾವತಿ ಮಾಡಿರುವುದಾಗಿ ಟ್ರಂಪ್‌ ಮೇ 3ರಂದು ಖಚಿತಪಡಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ