ಆ್ಯಪ್ನಗರ

ಬ್ರಾಹ್ಮಣ ವಿರೋಧಿ ಪೋಸ್ಟರ್ ವಿವಾದ: ಕ್ಷಮೆ ಕೋರಿದ ಟ್ವಿಟರ್

ಜಾಕ್‌ಗೆ ದಲಿತ ಹೋರಾಟಗಾರರೊಬ್ಬರು ಬ್ರಾಹ್ಮಣ ಪ್ರಭುತ್ವವನ್ನು ಕೊನೆಗೊಳಿಸಿ ಎಂಬ ಬರಹವಿದ್ದ ಬೋರ್ಡ್ ಹಿಡಿದುಕೊಂಡ ಮಹಿಳೆಯ ಚಿತ್ರವಿದ್ದ ಪೋಸ್ಟರ್ ಅನ್ನು ನೀಡಿದ್ದರು.

Vijaya Karnataka Web 20 Nov 2018, 7:36 pm
ಹೊಸದಿಲ್ಲಿ: ಟ್ವಿಟರ್ ಸಿಇಒ ಜಾಕ್ ಡೋರ್ಸೆ ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭ ಕಾರ್ಯಕ್ರಮವೊಂದರಲ್ಲಿ ಪ್ರದರ್ಶಿಸಿದ ಪೋಸ್ಟರ್ ಒಂದು ವಿವಾದಕ್ಕೆ ಕಾರಣವಾಗಿದ್ದು, ಟ್ವಿಟರ್‌ನಲ್ಲಿ ಸಿಇಒ ಜಾಕ್ ಟ್ರೋಲ್‌ಗೆ ಒಳಗಾಗಿದ್ದಾರೆ.
Vijaya Karnataka Web Jack


ಕಳೆದ ಭಾನುವಾರ ಟ್ವಿಟರ್ ಸಿಇಒ ಜಾಕ್‌ ಡೋರ್ಸೆ ಜತೆ ಮಹಿಳಾ ಪತ್ರಕರ್ತರ ಗುಂಪೊಂದು ಸಂವಾದ ನಡೆಸಿತ್ತು. ಈ ಸಂದರ್ಭದಲ್ಲಿ ಜಾಕ್‌ಗೆ ದಲಿತ ಹೋರಾಟಗಾರರೊಬ್ಬರು ಬ್ರಾಹ್ಮಣ ಪ್ರಭುತ್ವವನ್ನು ಕೊನೆಗೊಳಿಸಿ ಎಂಬ ಬರಹವಿದ್ದ ಬೋರ್ಡ್ ಹಿಡಿದುಕೊಂಡ ಮಹಿಳೆಯ ಚಿತ್ರವಿದ್ದ ಪೋಸ್ಟರ್ ಅನ್ನು ನೀಡಿದ್ದು, ಅದನ್ನು ಹಿಡಿದುಕೊಂಡು ಫೋಟೋಗೆ ಪೋಸ್ ನೀಡಿದ್ದರು.

ಈ ಚಿತ್ರವನ್ನು ಸಂವಾದಲ್ಲಿ ಪಾಲ್ಗೊಂಡಿದ್ದ ಪತ್ರಕರ್ತೆಯೋರ್ವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದರು. ಪೋಸ್ಟರ್ ಹಿಡಿದ ಜಾಕ್ ಡೋರ್ಸೆಯ ಚಿತ್ರ ಟ್ವಿಟರ್‌ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು.

ಅದನ್ನು ಗಮನಿಸಿದ್ದ ಹಲವರು, ಡೋರ್ಸೆಯ ನಿಲುವನ್ನು ಖಂಡಿಸಿದ್ದರು. ಅಲ್ಲದೆ ಈ ರೀತಿಯ ಚಿತ್ರಗಳು ಜನರಿಗೆ ತಪ್ಪು ಸಂದೇಶ ನೀಡುತ್ತವೆ, ಇದು ಸಮುದಾಯವೊಂದರ ವಿರುದ್ಧದ ನೀತಿ ಎಂದು ಹಲವರು ಜಾಕ್‌ ಡೋರ್ಸೆಯನ್ನು ಟ್ವಿಟರ್‌ನಲ್ಲಿ ತರಾಟೆಗೆ ತೆಗೆದುಕೊಂಡಿದ್ದರು.

ಚಿತ್ರ ವಿವಾದ ಸೃಷ್ಟಿಸುತ್ತಲೇ ಟ್ವಿಟರ್ ಇಂಡಿಯಾ ಸಮಜಾಯಿಷಿ ನೀಡಿದ್ದು, ಇದು ಜಾಕ್ ಅವರ ನಿಲುವಲ್ಲ, ಅವರ ಹೇಳಿಕೆಯೂ ಅಲ್ಲ. ಕಾರ್ಯಕ್ರಮದಲ್ಲಿ ಅವರಿಗೆ ಉಡುಗೊರೆ ದೊರೆತಿದ್ದ ಪೋಸ್ಟರ್ ಅನ್ನು ಹಿಡಿದುಕೊಂಡಿದ್ದರು ಎಂದು ಹೇಳಿಕೆ ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ