ಆ್ಯಪ್ನಗರ

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಟ್ವಿಟರ್‌ ಖಾತೆಯ ಡಿಪಿಯನ್ನೇ ಡಿಲೀಟ್‌ ಮಾಡಿದ ಟ್ವಿಟರ್‌..! ಯಾಕೆ ಗೊತ್ತಾ?

ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರು ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಹಾಕಿದ್ದ ಭಾವಚಿತ್ರವನ್ನು ಟ್ವಿಟರ್‌ ಸಂಸ್ಥೆ ದಿಢೀರನೆ ಕೆಲ ಕಾಲ ಅಳಿಸಿಹಾಕಿತ್ತು. ನಂತರ ತಕ್ಷಣವೇ ಈ ನಿರ್ಧಾರವನ್ನು ಹಿಂಪಡೆದು ಖಾತೆಯನ್ನು ಕ್ರಿಯಾತ್ಮಕಗೊಳಿಸಿತ್ತು. ಅಮಿತ್ ಶಾ ಅವರು ಕಾಪಿರೈಟ್‌ ಇದ್ದ ಫೋಟೋವನ್ನು ಹಾಕಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ.

Vijaya Karnataka Web 13 Nov 2020, 9:27 am
ಹೊಸದಿಲ್ಲಿ: ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರು ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಹಾಕಿದ್ದ ಪ್ರೊಫೈಲ್‌ ಫೋಟೋವನ್ನು ಟ್ವಿಟರ್‌ ಡಿಲೀಟ್‌ ಮಾಡಿ ಅಚ್ಚರಿ ಮೂಡಿಸಿದೆ. ಆದರೆ ಸ್ವಲ್ಪ ಸಮಯದ ಬಳಿಕ ಮತ್ತೊಂದು ಚಿತ್ರವನ್ನು ಅಮಿತ್‌ ಶಾ ಅವರ ಪ್ರೊಫೈಲ್‌ಗೆ ಹಾಕಲಾಗಿದೆ.
Vijaya Karnataka Web amit shah


ಅಸಂಖ್ಯಾತ ಕನ್ನಡಿಗರಿಗೆ ಬರಹಗಳ ಹುಚ್ಚು ಹತ್ತಿಸಿದ ‘ಅಕ್ಷರ ರಾಕ್ಷಸ’ ಖ್ಯಾತ ಪತ್ರಕರ್ತ ರವಿ ಬೆಳಗೆರೆ ಇನ್ನಿಲ್ಲ..!

ಅಸಲಿಗೆ ಅಮಿತ್‌ ಶಾ ಅವರ ಅಧಿಕೃತ ಟ್ವಿಟರ್‌ ಖಾತೆಯಲ್ಲಿದ್ದ ಪ್ರೊಫೈಲ್‌ ಫೋಟೋವನ್ನು ಅಳಿಸಿಹಾಕಲು ಕಾಪಿರೈಟ್‌ ಕಾರಣ ಎನ್ನಲಾಗಿದ್ದು, ಕಾಪಿರೈಟ್‌ ಇದ್ದ ಚಿತ್ರವನ್ನು ತಮ್ಮ ಪ್ರೊಫೈಲ್‌ನಲ್ಲಿ ಹಾಕಿದ ಕಾರಣ ಅದನ್ನು ಟ್ವಟರ್ ಸಂಸ್ಥೆ ತೆಗೆದು ಹಾಕಿದೆ ಎಂದು ತಿಳಿದು ಬಂದಿದೆ. ಆದರೆ ಕೆಲ ಸಮಯದ ಬಳಿಕ ಬೇರೊಂದು ಫೋಟೋವನ್ನು ಅವರ ಪ್ರೊಫೈಲ್‌ಗೆ ಹಾಕಲಾಗಿದೆ.

ಹಿರಿಯ ಪತ್ರಕರ್ತ ರವಿ ಬೆಳೆಗೆರೆ ನಿಧನ: ಖ್ಯಾತ ಬರಹಗಾರ ನಡೆದು ಬಂದ ಹಾದಿ ಇಲ್ಲಿದೆ!

ಅಮಿತ್‌ ಶಾ ಅವರ ಪ್ರೊಫೈಲ್‌ ಫೋಟೋ ಮೇಲೆ ಕ್ಲಿಕ್‌ ಮಾಡಿದಾಗ ‘ಮಾಧ್ಯಮವನ್ನು ತೋರಿಸಲಾಗುವುದಿಲ್ಲ’ ಎಂದು ತೋರಿಸುತ್ತಿತ್ತು. ಈ ಸಂಬಂಧ ಪ್ರತಿಕ್ರಿಯೆ ನೀಡಿರೋ ಟ್ವಿಟರ್ ಸಂಸ್ಥೆಯ ವಕ್ತಾರ, ಅಜಾಗರೂಕತೆ ಮತ್ತು ನಮ್ಮ ಜಾಗತಿಕ ಹಕ್ಕು ಸ್ವಾಮ್ಯಗಳ ನೀತಿಗಳಡಿಯಲ್ಲಿ ನಾವು ಅವರ ಖಾತೆಯನ್ನು ತಾತ್ಕಾಲಿಕವಾಗಿ ಲಾಕ್‌ ಮಾಡಿದ್ದೇವೆ. ಆದರೆ ತಕ್ಷಣವೇ ಈ ನಿರ್ಧಾರವನ್ನು ಹಿಂಪಡೆದು ಖಾತೆಯನ್ನು ಕ್ರಿಯಾತ್ಮಕಗೊಳಿಸಿದ್ದೇವೆ ಎಂದು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳ ಬಿಜೆಪಿ ಮುಖ್ಯಸ್ಥನ ಮೇಲೆ ದಾಳಿ..! ದಿಲೀಪ್‌ ಘೋಷ್‌, ಸ್ಥಳೀಯ

ಇತ್ತೀಚೆಗೆ ಬಿಸಿಸಿಐ ಸಂಸ್ಥೆಯ ಅಧಿಕೃತ ಟ್ವಿಟರ್‌ ಖಾತೆಯ ಪ್ರೊಫೈಲ್‌ ಫೋಟೋವನ್ನು ಕೂಡ ಕಾಪಿರೈಟ್‌ ಸಮಸ್ಯೆಯಿಂದ ಟ್ವಿಟರ್‌ ಅಳಿಸಿಹಾಕಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ