ಆ್ಯಪ್ನಗರ

ಪಾಕ್ ವಿರುದ್ಧ ಕ್ರಮ ಕೈಗೊಳ್ಳದ ಮೋದಿ ವಿರುದ್ಧ ಟ್ವೀಟ್ ಆಕ್ರೋಶ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಮೇಲೆ ದೇಶದ ಜನ ಸಾಕಷ್ಟು ನಿರೀಕ್ಷೆ ಹೊಂದಿತ್ತು. ಆದರೆ, ಅವರ ನಿರೀಕ್ಷೆಗಳು ಹುಸಿಯಾದಂತೆ ಬಾಸವಾಗುತ್ತಿದೆ.

ಏಜೆನ್ಸೀಸ್ 2 May 2017, 3:21 pm
ಹೊಸದಿಲ್ಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಮೇಲೆ ದೇಶದ ಜನ ಸಾಕಷ್ಟು ನಿರೀಕ್ಷೆ ಇಟ್ಟಿಕೊಂಡಿತ್ತು. ಆದರಲ್ಲಿಯೂ ಪಾಕಿಸ್ತಾನ ಹಾಗೂ ಭಯೋತ್ಪಾದನೆ ವಿರುದ್ಧ ಈ ಸರಕಾರ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ದೇಶದ ಜನತೆಗೆ ಅಪಾರ ವಿಶ್ವಾಸವಿತ್ತು. ಸರ್ಜಿಕಲ್ ಸ್ಟ್ರೈಕ್ ನಡೆಸಿದ ಮೋದಿ ಸರಕಾರವನ್ನು ಜನರು ಕೊಂಡಾಡಿದ್ದರು. ಅದಾದ ನಂತರ ಪಾಕಿಸ್ತಾನ ಮೇಲಿಂದ ಮೇಲೆ ಭಾರತೀಯ ಯೋಧರನ್ನು ಕೊಲ್ಲುತ್ತಲೇ ಇದೆ. ಕದನ ವಿರಾಮ ಉಲ್ಲಂಘಿಸುತ್ತಿದೆ. ಇಷ್ಟಾದರೂ 'ತಕ್ಕ ಪ್ರತಿಕ್ರಿಯೆ ತೋರುತ್ತೇವೆ' ಎಂದು ಸರಕಾರ ಹೇಳುತ್ತಿದೆ ಹೊರತು, ಯಾವುದೇ ಕ್ರಮ ಕೈಗೊಳ್ಳಲು ಮುಂದಾಗಿಲ್ಲ.
Vijaya Karnataka Web twitter trending modi weakest pm ever
ಪಾಕ್ ವಿರುದ್ಧ ಕ್ರಮ ಕೈಗೊಳ್ಳದ ಮೋದಿ ವಿರುದ್ಧ ಟ್ವೀಟ್ ಆಕ್ರೋಶ


ನಿನ್ನೆ ಪಾಕಿಸ್ತಾನ ಮತ್ತೆ ತನ್ನ ಹೀನಕೃತ್ಯವನ್ನು ಮುಂದುವರಿಸಿದ್ದು, ಭಾರತೀಯ ಯೋಧರ ಶಿರಚ್ಛೇದ ಮಾಡಿದೆ. ಇದರಿಂದ ಭಾರತೀಯರ ರಕ್ತ ಕುದಿಯುತ್ತಿದ್ದು, ಯೋಧರ ಬಲಿದಾನಕ್ಕೆ ತಕ್ಕ ಶಾಸ್ತಿಯಾಗಬೇಕೆಂದು ಬಯಸುತ್ತಿದೆ. ಈ ಸಮಯದಲ್ಲಿಯೂ ಪ್ರಧಾನಿ ಮೋದಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದು, ಟ್ವೀಟರ್‌ನಲ್ಲಿ #ModiWeakestPMever ಟ್ರೆಂಡಿಂಗ್ ಶುರವಾಗಿತ್ತು.

@nskathy Only Jumlas No work~ #ModiWeakestPMever pic.twitter.com/azAx5ddEm6 — പോമോനെമോദി (@PoMoneModii) May 2, 2017 ಒಂದೆಡೆ ಭಾರತದ ಗಡಿಯಲ್ಲಿ ಚೀನಾದ ಉಪಟಳವಾದರೇ, ಮತ್ತೊಂದೆಡೆ ಪಾಕ್ ಪಾಪಿಗಳು ಭಾರತೀಯ ಯೋಧರ ಶಿರಚ್ಛೇದನ ಮಾಡುವ ಮೂಲಕ ಅಟ್ಟಹಾಸ ಮೆರೆಯುತ್ತಿದ್ದಾರೆ. ಆದರೂ ಪ್ರಧಾನಿ ಮೋದಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಪ್ರಧಾನಿಯದ್ದು ಮಾತು ಜಾಸ್ತಿ, ಕೆಲಸ ಕಡಿಮೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.

#ModiWeakestPMever Sleeping PM of India — Parth Patel (@iparthpatel) May 2, 2017 ಮನೋಹರ ಪರಿಕರ್ ರಾಜೀನಾಮೆಯಿಂದ ತೆರವಾಗಿರುವ ರಕ್ಷಣಾ ಸಚಿವ ಸ್ಥಾನಕ್ಕೆ ಬೇರೊಬ್ಬರನ್ನು ನೇಮಕ ಮಾಡಬೇಕಿದೆ. ಪದೇ ಪದೇ ಗಡಿಯಲ್ಲಿ ಉದ್ಧಟತನ ಪ್ರದರ್ಶಿಸುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಬೇಕು ಎಂದೂ ಜನರು ಜನತೆ ಒತ್ತಾಯಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ