ಆ್ಯಪ್ನಗರ

ಇಬ್ಬರು ಮಕ್ಕಳ ಅತ್ಯಾಚಾರಿಗಳಿಗೆ ಒಂದೇ ದಿನದಲ್ಲಿ ಗಲ್ಲು ಶಿಕ್ಷೆ

ಮಧ್ಯ ಪ್ರದೇಶದ ಎರಡು ಪ್ರತ್ಯೇಕ ನ್ಯಾಯಾಲಯಗಳು ಬಾಲಕಿಯರ ಮೇಲೆ ಅತ್ಯಾಚಾರ ಮಾಡಿದ ಇಬ್ಬರು ಆರೋಪಿಗಳಿಗೆ ಒಂದೇ ದಿನ ಗಲ್ಲು ಶಿಕ್ಷೆ ವಿಧಿಸಿದೆ. ಇದಕ್ಕೆ ಕಾರಣ ಬಿಜೆಪಿ ಸರಕಾರ ಇತ್ತೀಚೆಗೆ ಜಾರಿಗೆ ತಂದ ಕಾನೂನು.

TIMESOFINDIA.COM 28 Jul 2018, 11:44 am
ಭೋಪಾಲ್: ಮಧ್ಯ ಪ್ರದೇಶದ ಎರಡು ಪ್ರತ್ಯೇಕ ನ್ಯಾಯಾಲಯಗಳು ಬಾಲಕಿಯರ ಮೇಲೆ ಅತ್ಯಾಚಾರ ಮಾಡಿದ ಇಬ್ಬರು ಆರೋಪಿಗಳಿಗೆ ಒಂದೇ ದಿನ ಗಲ್ಲು ಶಿಕ್ಷೆ ವಿಧಿಸಿದೆ. ಇದಕ್ಕೆ ಕಾರಣ ಬಿಜೆಪಿ ಸರಕಾರ ಇತ್ತೀಚೆಗೆ ಜಾರಿಗೆ ತಂದ ಕಾನೂನು.
Vijaya Karnataka Web hanging


ದೇಶದಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿರುವ ಲೈಂಗಿಕ ಕಿರುಕುಳ ಪ್ರಕರಣಗಳ ಬಳಿಕ ಎಚ್ಚೆತ್ತುಕೊಂಡಿದ್ದ ಮಧ್ಯಪ್ರದೇಶ ಸರಕಾರ, 12 ವರ್ಷದೊಳಗಿನ ಬಾಲಕಿಯರನ್ನು ಅತ್ಯಾಚಾರ ಮಾಡಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಕಾನೂನನ್ನು ಜಾರಿಗೆ ತಂದಿತ್ತು. ಈ ಹಿನ್ನೆಲೆ, ಇಬ್ಬರು ಆರೋಪಿಗಳಿಗೆ ಮಧ್ಯ ಪ್ರದೇಶದ ಗ್ವಾಲಿಯರ್ ಹಾಗೂ ಕತ್ನಿ ನ್ಯಾಯಾಲಯಗಳು ಗಲ್ಲು ಶಿಕ್ಷೆ ವಿಧಿಸಿದೆ. ಅಲ್ಲದೆ, ಕತ್ನಿ ಜಿಲ್ಲೆಯ ಆರೋಪಿಗೆ ಚಾರ್ಜ್‌ಶೀಟ್ ಹಾಕಿದ 5 ದಿನಗಳಲ್ಲೇ ಅಪರಾಧಿ ಎಂದು ತೀರ್ಮಾನಿಸಲಾಗಿದೆ. ಈ ಮೂಲಕ ಕೇಂದ್ರ ಸರಕಾರದಿಂದ ಕಾನೂನು ಮಾರ್ಪಾಡು ಮಾಡಿದ ಬಳಿಕ ಮೂವರು ಅತ್ಯಾಚಾರಿಗಳಿಗೆ ಮಧ್ಯ ಪ್ರದೇಶ ರಾಜ್ಯವೊಂದರಲ್ಲೇ ಗಲ್ಲು ಶಿಕ್ಷೆ ವಿಧಿಸಲಾಗಿದೆ.

ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯ ತ್ವರಿತಗತಿ ನ್ಯಾಯಾಲಯ ನಿನ್ನೆ ಮಧ್ಯಾಹ್ನ ಐಸ್‌ ಕ್ಯಾಂಡಿ ಮಾರಾಟ ಮಾಡುತ್ತಿದ್ದವನಿಗೆ 6 ವರ್ಷದ ಬಾಲಕಿಯ ಮೇಲೆ ಕಿಡ್ನಾಪ್, ಅತ್ಯಾಚಾರ ಹಾಗೂ ಕೊಲೆ ಆರೋಪದ ಮೇಲೆ ಗಲ್ಲು ಶಿಕ್ಷೆ ವಿಧಿಸಿದೆ. ಇದು ಅತಿ ಅಪರೂಪದ ಘಟನೆ ಎಂದು ಬಣ್ಣಿಸಿರುವ ನ್ಯಾಯಾಲಯ, ಘಟನೆ ನಡೆದು 36 ದಿನಗಳಲ್ಲೇ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದೆ. ಜುಲೈ 2 ರಂದು ಅಂದರೆ ಆರೋಪಿ ಜಿತೇಂದ್ರ ಕುಶ್ವಾಹ ಬಂಧನದ ಬಳಿಕ 12 ದಿನಗಳಲ್ಲಿ ಚಾರ್ಜ್‌ಶೀಟ್ ಹಾಕಲಾಗಿದ್ದು, ಬಾಲಕಿ ಮೇಲೆ ಅತ್ಯಾಚಾರ, ಕೊಲೆ ನಡೆದ 24 ಗಂಟೆಗಳಲ್ಲೇ ಆತನನ್ನು ಬಂಧಿಸಲಾಗಿತ್ತು.

ಇನ್ನೊಂದೆಡೆ, ಶಾಲೆಯಿಂದ ವಾಪಸ್ ಬರುತ್ತಿದ್ದ ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ್ದ ಆಟೋ ರಿಕ್ಷಾ ಚಾಲಕ ರಾಜ್‌ಕುಮಾರ್ ಕೋಲ್‌ಗೆ ಕತ್ನಿ ಜಿಲ್ಲೆಯ ವಿಶೇಷ ನ್ಯಾಯಾಲಯ ನಿನ್ನೆ ಸಂಜೆ ಗಲ್ಲು ಶಿಕ್ಷೆ ವಿಧಿಸಿದೆ. ಇದಕ್ಕೂ ಮುನ್ನ 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಹಾಗೂ ಕೊಲೆ ಮಾಡಿದ್ದ ವ್ಯಕ್ತಿಗೆ ಸಾಗರ್ ಜಿಲ್ಲೆಯ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿತ್ತು. ಘಟನೆ ನಡೆದ 72 ಗಂಟೆಗಳಲ್ಲೇ ಆರೋಪಿ ವಿರುದ್ಧ ಚಾರ್ಜ್‌ಶೀಟ್‌ ಹಾಕಲಾಗಿದ್ದು, ಕೇವಲ 46 ದಿನಗಳಲ್ಲಿ ನ್ಯಾಯಾಲಯ ವಿಚಾರಣೆ ನಡೆಸಿತ್ತು.

ನವೆಂಬರ್ 2017 ರಲ್ಲಿ ಮಧ್ಯಪ್ರದೇಶ ಸರಕಾರ 12 ವರ್ಷದೊಳಗಿನ ಬಾಲಕಿಯರನ್ನು ಅತ್ಯಾಚಾರ ಮಾಡಿದ ಆರೋಪಿಗಳ ಮೇಲೆ ಗಲ್ಲು ಶಿಕ್ಷೆ ವಿಧಿಸುವ ಸಂಬಂಧ ಕಾನೂನು ಜಾರಿಗೆ ತಂದಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ