ಆ್ಯಪ್ನಗರ

ದೀರ್ಘಾವಧಿ ಸೇವೆ ಸಲ್ಲಿಸಿದ ಕಾಂಗ್ರೆಸ್ಸೇತರ ಪ್ರಧಾನಿ ಹೆಗ್ಗಳಿಕೆ ನರೇಂದ್ರ ಮೋದಿ ಪಾಲು..!

ಭಾರತೀಯ ಇತಿಹಾಸದಲ್ಲಿ ಕಾಂಗ್ರೆಸ್ಸೇತರ ಪ್ರಧಾನಿಗಳಲ್ಲಿ ದೀರ್ಘಾವಧಿ ಸೇವೆ ಸಲ್ಲಿಸಿದವರು ಎಂಬ ಹೆಗ್ಗಳಿಕೆಗೂ ನರೇಂದ್ರ ಮೋದಿ ಗುರುವಾರ ಪಾತ್ರರಾಗಿದ್ದು, ವಾಜಪೇಯಿ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ.

Agencies 13 Aug 2020, 10:29 pm
ಹೊಸದಿಲ್ಲಿ: ಮಾಜಿ ಪ್ರಧಾನಿಗಳಾದ ಜವಾಹರ್‌ ಲಾಲ್‌ ನೆಹರು, ಇಂದಿರಾ ಗಾಂಧಿ ಮತ್ತು ಮನಮೋಹನ್‌ ಸಿಂಗ್‌ ನಂತರ ಅತಿ ಹೆಚ್ಚು ಅವಧಿಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಕೀರ್ತಿಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಪಾತ್ರರಾಗಿದ್ದಾರೆ.
Vijaya Karnataka Web two days ahead of independence day narendra modi becomes 4th longest serving pm of india
ದೀರ್ಘಾವಧಿ ಸೇವೆ ಸಲ್ಲಿಸಿದ ಕಾಂಗ್ರೆಸ್ಸೇತರ ಪ್ರಧಾನಿ ಹೆಗ್ಗಳಿಕೆ ನರೇಂದ್ರ ಮೋದಿ ಪಾಲು..!


ಇದರ ಜೊತೆ ಭಾರತೀಯ ಇತಿಹಾಸದಲ್ಲಿ ಕಾಂಗ್ರೆಸ್ಸೇತರ ಪ್ರಧಾನಿಗಳಲ್ಲಿ ದೀರ್ಘಾವಧಿ ಸೇವೆ ಸಲ್ಲಿಸಿದವರು ಎಂಬ ಹೆಗ್ಗಳಿಕೆಗೂ ನರೇಂದ್ರ ಮೋದಿ ಪಾತ್ರರಾಗಿದ್ದಾರೆ. ಇದಕ್ಕೂ ಮುಂಚೆ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಈ ಕೀರ್ತಿಗೆ ಭಾಜನರಾಗಿದ್ದರು.

ಎನ್‌ಡಿಎಯಿಂದ ಪ್ರಧಾನಿ ಆಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿ 6 ವರ್ಷ 64 ದಿನಗಳ ಕಾಲ ಸೇವೆ ಸಲ್ಲಿಸಿದ್ದರು. ಇದೀಗ ನರೇಂದ್ರ ಮೋದಿ ಅವರು ಎರಡನೇ ಅವಧಿ ಸೇರಿ ಆರು ವರ್ಷ 79 ದಿನಗಳ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ.

ಇನ್ನು, ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು 17 ವರ್ಷಗಳ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ನಂತರ ಅವರ ಮಗಳು ಇಂದಿರಾ ಗಾಂಧಿ ಕ್ರಮವಾಗಿ 11 ವರ್ಷಗಳು ಮತ್ತು ಸುಮಾರು ನಾಲ್ಕುವರೆ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರೆ, ಡಾ. ಮನಮೋಹನ್ ಸಿಂಗ್ ಅವರು ತಲಾ ಐದು ವರ್ಷಗಳ ಸತತ ಎರಡು ಅವಧಿಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು.

ಆರ್ಥಿಕ ಚೇತರಿಕೆಗೆ ಮತ್ತೊಮ್ಮೆ ಬೂಸ್ಟ್‌ ನೀಡಲಿದ್ದಾರೆ ನರೇಂದ್ರ ಮೋದಿ!

ನರೇಂದ್ರ ಮೋದಿ ಅವರು 2014 ರ ಮೇ 26 ರಂದು ದೇಶದ 14 ನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. 2019ರ ಮೇ 30 ರಂದು ಪ್ರಧಾನ ಮಂತ್ರಿಯಾಗಿ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದರು. ನರೇಂದ್ರ ಮೋದಿ ಭಾರತದ 74ನೇ ಸ್ವಾತಂತ್ರ್ಯ ದಿನಾಚರಣೆಗೆ ಕೇವಲ ಎರಡು ದಿನಗಳ ಮುನ್ನ ನಾಲ್ಕನೇ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಪ್ರಧಾನಿಯಾಗಿದ್ದಾರೆ.

ಕೊರೊನಾ ನಿಯಂತ್ರಣದಲ್ಲಿ ಮೋದಿಗೆ 'ಜೈ' ಎಂದ ಭಾರತದ ಗ್ರಾಮಗಳು, ಸಮೀಕ್ಷೆಯಲ್ಲಿ ಫುಲ್‌ ಮಾರ್ಕ್ಸ್‌!

ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗದ ಇತರ ಕಾಂಗ್ರೆಸ್ಸೇತರ ಪ್ರಧಾನಿಗಳ ಅಂದರೆ ಮೊರಾರ್ಜಿ ದೇಸಾಯಿ (1977ರ ಮಾರ್ಚ್ 24 ರಿಂದ 1979ರ ಜುಲೈ 28) ಚರಣ್ ಸಿಂಗ್ (1979ರ ಜುಲೈ 28 ರಿಂದ 1980ರ ಜನವರಿ 14), ವಿಶ್ವನಾಥ್ ಪ್ರತಾಪ್ ಸಿಂಗ್(1989ರ ಡಿಸೆಂಬರ್ 2 ರಿಂದ 1991ರ ಜೂನ್ 21), ಎಚ್ ಡಿ ದೇವೇಗೌಡ (1996ರ ಜೂನ್ 1 ರಿಂದ 1997ರ ಏಪ್ರಿಲ್ 21), ಇಂದ್ರಕುಮಾರ್ ಗುಜ್ರಾಲ್ (1997ರ ಏಪ್ರಿಲ್ 21ರಿಂದ 1998ರ ಮಾರ್ಚ್ 19) ಸೇವೆ ಸಲ್ಲಿಸಿದ್ದರು.

ಮೋದಿ ಸರಕಾರಕ್ಕೆ ಫುಲ್‌ ಮಾರ್ಕ್ಸ್‌, ಕಾಂಗ್ರೆಸ್‌ಗೆ ಬೇಕು ರಾಹುಲ್‌ ಸಾರಥ್ಯ - ಸಮೀಕ್ಷೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ