ಆ್ಯಪ್ನಗರ

ಉತ್ತರ ಪ್ರದೇಶ ಡಿಜಿಪಿಯನ್ನು ಗುರುತು ಹಿಡಿಯದ ಇಬ್ಬರು ಪೊಲೀಸರು ಅಮಾನತು!

ಉತ್ತರ ಪ್ರದೇಶ ಪೊಲೀಸ್ ಮುಖ್ಯಸ್ಥರನ್ನು ಗುರುತು ಹಿಡಿಯಲು ವಿಫಲರಾದ ಸಬ್‌ ಇನ್ಸ್‌ಪೆಕ್ಟರ್‌ ಹಾಗೂ ಕಾನ್ಸ್‌ಟೇಬಲ್‌ ಒಬ್ಬರನ್ನು ಅಮಾನತು ಮಾಡಲಾಗಿದೆ. ಪೊಲೀಸ್ ಯೂನಿಫಾರ್ಮ್‌ನಲ್ಲಿಲ್ಲದ ಡಿಜಿಪಿಯನ್ನು ಗುರುತು ಹಿಡಿಯಲು ಇಬ್ಬರು ಪೊಲೀಸರು ವಿಫಲರಾಗಿದ್ದು, ಬಳಿಕ ಅವರು ಯಾರೆಂದು ಬೆಂಗಾವಲು ವಾಹನದಲ್ಲಿದ್ದವರನ್ನು ಕೇಳಿದ್ದಾರೆ ಎನ್ನಲಾಗಿದೆ.

TIMESOFINDIA.COM 13 Sep 2018, 2:29 pm
ನೋಯ್ಡಾ: ಉತ್ತರ ಪ್ರದೇಶ ಪೊಲೀಸ್ ಮುಖ್ಯಸ್ಥರನ್ನು ಗುರುತು ಹಿಡಿಯಲು ವಿಫಲರಾದ ಸಬ್‌ ಇನ್ಸ್‌ಪೆಕ್ಟರ್‌ ಹಾಗೂ ಕಾನ್ಸ್‌ಟೇಬಲ್‌ ಒಬ್ಬರನ್ನು ಅಮಾನತು ಮಾಡಲಾಗಿದೆ. ಪೊಲೀಸ್ ಯೂನಿಫಾರ್ಮ್‌ನಲ್ಲಿಲ್ಲದ ಡಿಜಿಪಿಯನ್ನು ಗುರುತು ಹಿಡಿಯಲು ಇಬ್ಬರು ಪೊಲೀಸರು ವಿಫಲರಾಗಿದ್ದು, ಬಳಿಕ ಅವರು ಯಾರೆಂದು ಬೆಂಗಾವಲು ವಾಹನದಲ್ಲಿದ್ದವರನ್ನು ಕೇಳಿದ್ದಾರೆ ಎನ್ನಲಾಗಿದೆ.
Vijaya Karnataka Web police


ನೋಯ್ಡಾಗೆ ಕೆಲಸದ ಮೇಲೆ ಬಂದಿದ್ದ ಡಿಜಿಪಿ ಓ.ಪಿ.ಸಿಂಗ್‌ ತಮ್ಮ ಅಧಿಕೃತ ವಾಹನದಲ್ಲಿ ಲಖನೌಗೆ ವಾಪಸಾಗುತ್ತಿದ್ದರು. ಈ ವೇಳೆ, ಟೋಪಿ ಹಾಕದೆ ಆಮ್ರಪಾಲಿ ಚೆಕ್‌ ಪೋಸ್ಟ್‌ನಲ್ಲಿ ನಿಂತಿದ್ದ ಎಸ್‌ಐ ಹರಿ ಭಾನ್‌ ಸಿಂಗ್ ಹಾಗೂ ಕಾನ್ಸ್‌ಟೇಬಲ್‌ ಯೋಗೇಶ್‌ ಕುಮಾರ್‌ರನ್ನು ನೋಡಿ ಅವರು ತಮ್ಮ ವಾಹನವನ್ನು ನಿಲ್ಲಿಸೋಕೆ ತಮ್ಮ ಚಾಲಕನಿಗೆ ತಿಳಿಸಿದರು. ಆದರೆ, ಕೇವಲ ಟೋಪಿ ಹಾಕದಿದ್ದು ಮಾತ್ರವಲ್ಲ ಸಿವಿಲ್‌ ಡ್ರೆಸ್‌ನಲ್ಲಿದ್ದ ಡಿಜಿಪಿಗೆ ಸೆಲ್ಯೂಟ್ ಕೂಡ ಹೊಡೆಯಲಿಲ್ಲ. ಅಷ್ಟೇ ಅಲ್ಲದೆ, ಡಿಜಿಪಿಯನ್ನು ಗುರುತಿಸಲು ಸಹ ಇಬ್ಬರು ಪೊಲೀಸರು ವಿಫಲರಾಗಿದ್ದು, ಅವರು ಯಾರೆಂದು ಕೇಳಿದ್ದಾರೆ. ಇದರಿಂದ ಓ.ಪಿ.ಸಿಂಗ್ ಸಿಟ್ಟಿಗೆದ್ದರು ಎಂದು ಮೂಲಗಳು ತಿಳಿಸಿವೆ.

ಸೆಕ್ಟರ್ 39 ಪೊಲೀಸ್‌ ಠಾಣೆಯಲ್ಲಿ ಕೆಲಸ ಮಾಡುತ್ತಿರುವ ಆ ಇಬ್ಬರು ಪೊಲೀಸರಿಗೆ, ತಮ್ಮ ಹಿರಿಯ ಅಧಿಕಾರಿ ಆ ರಸ್ತೆಯಲ್ಲಿ ಬರುವ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಆ ಅಶಿಸ್ತಿನ ಬಗ್ಗೆ ವರದಿ ನೀಡಲು ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಆದರೆ, ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಗೌತಮ್ ಬುದ್ಧ ನಗರ ಪೊಲೀಸ್‌ ಅಧಿಕಾರಿ ಅಜಯ್‌ ಪಾಲ್‌ ಶರ್ಮಾ ಡಿಜಿಪಿಯನ್ನು ಸೆಲ್ಯೂಟ್‌ ಮಾಡದಿದ್ದಕ್ಕೆ ಅಲ್ಲ ಅವರನ್ನು ಗುರುತು ಹಿಡಿಯಲು ವಿಫಲರಾಗಿದ್ದಕ್ಕೆ ಶಿಸ್ತು ಕ್ರಮದ ಮೇಲೆ ಅವರನ್ನು ಆ ಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ