ಆ್ಯಪ್ನಗರ

ಆಂಧ್ರ, ಛತ್ತೀಸ್‌ಗಢಕ್ಕೆ ನೂತನ ರಾಜ್ಯಪಾಲರ ನೇಮಕ

ಕಳೆದ ಹತ್ತು ವರ್ಷಗಳಿಂದ ಆಂಧ್ರಪ್ರದೇಶ ರಾಜ್ಯಪಾಲರಾಗಿದ್ದ ಇ.ಎಸ್‌.ಎಲ್‌.ನರಸಿಂಹನ್‌ ಅವರಿಗೆ ವಿಶ್ರಾಂತಿ ನೀಡಿ, ಒಡಿಶಾ ಮೂಲದ ಬಿಜೆಪಿ ಮುಖಂಡ ಹರಿಚಂದನ್‌ ಅವರನ್ನು ನೇಮಕ ಮಾಡಲಾಗಿದೆ.

PTI 17 Jul 2019, 5:00 am
ಹೊಸದಿಲ್ಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಅನುಸುಯಾ ಉಕೆಯ್‌ ಮತ್ತು ಬಿಸ್ವಾ ಭೂಷಣ್‌ ಹರಿಚಂದನ್‌ ಅವರನ್ನು ಕ್ರಮವಾಗಿ ಛತ್ತೀಸ್‌ಗಢ ಮತ್ತು ಆಂಧ್ರಪ್ರದೇಶದ ನೂತನ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ.
Vijaya Karnataka Web rajbhavan

ಈ ಮಹತ್ವದ ಹುದ್ದೆಗಳಿಗೆ ನೂತನ ಹೆಸರುಗಳನ್ನು ಸೂಚಿಸಿ ಕೇಂದ್ರ ಸರಕಾರ ಕಳಿಸಿಕೊಟ್ಟಿದ್ದ ಶಿಫಾರಸಿಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಸಮ್ಮತಿ ಮುದ್ರೆ ಹೊತ್ತಿರುವುದಾಗಿ ಪ್ರಕಟಣೆ ತಿಳಿಸಿದೆ.
ಕಳೆದ ಹತ್ತು ವರ್ಷಗಳಿಂದ ಆಂಧ್ರಪ್ರದೇಶ ರಾಜ್ಯಪಾಲರಾಗಿದ್ದ ಇ.ಎಸ್‌.ಎಲ್‌.ನರಸಿಂಹನ್‌ ಅವರಿಗೆ ವಿಶ್ರಾಂತಿ ನೀಡಿ, ಒಡಿಶಾ ಮೂಲದ ಬಿಜೆಪಿ ಮುಖಂಡ ಹರಿಚಂದನ್‌ ಅವರನ್ನು ನೇಮಕ ಮಾಡಲಾಗಿದೆ. ಮಧ್ಯಪ್ರದೇಶದ ಬಿಜೆಪಿ ನಾಯಕಿ ಉಕೆಯ್‌ ಅವರನ್ನು ಛತ್ತೀಸ್‌ಗಢದ ಪೂರ್ಣಾವಧಿ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ. ಇದುವರೆಗೆ ಮಧ್ಯಪ್ರದೇಶದ ರಾಜ್ಯಪಾಲರಾದ ಆನಂದಿ ಬೆನ್‌ ಪಟೇಲ್‌ ಈ ರಾಜ್ಯದ ಉಸ್ತುವಾರಿ ನೋಡಿಕೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ