ಆ್ಯಪ್ನಗರ

ಮಲ್ಯ ಹಸ್ತಾಂತರಕ್ಕೆ ಬ್ರಿಟನ್‌ ಗೃಹ ಕಾರ್ಯದರ್ಶಿ ಆದೇಶ

ನ್ಯಾಯಾಲಯದ ಪ್ರತಿ ಬ್ರಿಟನ್‌ ಗೃಹ ಕಾರ್ಯದರ್ಶಿ ಸಜಿದ್‌ ಜಾವಿದ್‌ಗೆ ತಲುಪಿದ್ದು, ಅವರು ಮಲ್ಯ ಹಸ್ತಾಂತರದ ಆದೇಶಕ್ಕೆ ಸಹಿ ಹಾಕಿದ್ದಾರೆ. ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಮಲ್ಯ ಅವರಿಗೆ 14 ದಿನಗಳ ಕಾಲವಕಾಶ ನೀಡಲಾಗಿದೆ.

Vijaya Karnataka 5 Feb 2019, 5:00 am
ಲಂಡನ್‌: ಬ್ಯಾಂಕ್‌ಗಳಿಗೆ ವಂಚನೆ ಮಾಡಿದ ಆರೋಪ ಹೊತ್ತಿರುವ ಉದ್ಯಮಿ ವಿಜಯ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಬ್ರಿಟನ್‌ ಗೃಹ ಕಾರ್ಯದರ್ಶಿ ಸಜಿದ್‌ ಜಾವಿದ್‌ ಆದೇಶಿಸಿದ್ದಾರೆ. ಮದ್ಯದ ದೊರೆ ಮಲ್ಯ ವಿರುದ್ಧದ ಕಾನೂನು ಸಮರದಲ್ಲಿ ಇದೊಂದು ಮುಖ್ಯವಾದ ರಾಜತಾಂತ್ರಿಕ ವಿಜಯ ಎಂದು ಗೃಹ ಕಚೇರಿಯು ಸೋಮವಾರ ಹೇಳಿದೆ. ಈ ಬೆಳವಣಿಗೆ ಮಲ್ಯ ಅವರಿಗೆ ಹೊಸ ಸಂಕಷ್ಟವನ್ನು ಸೃಷ್ಟಿಸಿದೆ.
Vijaya Karnataka Web malya


9,000 ಕೋಟಿ ರೂ. ಸಾಲ ಮಾಡಿ ವಿದೇಶಕ್ಕೆ ಪಲಾಯನ ಮಾಡಿದ್ದ ಮಲ್ಯರನ್ನು ಭಾರತಕ್ಕೆ ಕರೆತರಲು ನಾನಾ ಪ್ರಯತ್ನಗಳು ನಡೆದಿವೆ. ಡಿ.10ರಂದು ಲಂಡನ್‌ನ ವೆಸ್ಟ್‌ ಮಿನ್‌ಸ್ಟ್ಟರ್‌ ಕೋರ್ಟ್‌, ಮಲ್ಯ ಗಡಿಪಾರಿಗೆ ಅಸ್ತು ಎಂದಿತ್ತು. ನ್ಯಾಯಾಲಯದ ಪ್ರತಿ ಬ್ರಿಟನ್‌ ಗೃಹ ಕಾರ್ಯದರ್ಶಿಗೆ ತಲುಪಿದ್ದು, ಅವರು ಮಲ್ಯ ಹಸ್ತಾಂತರದ ಆದೇಶಕ್ಕೆ ಸಹಿ ಹಾಕಿದ್ದಾರೆ. ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಮಲ್ಯ ಅವರಿಗೆ 14 ದಿನಗಳ ಕಾಲವಕಾಶ ನೀಡಲಾಗಿದೆ.

''ಫೆ.3ರಂದು ಮಲ್ಯ ಹಸ್ತಾಂತರಕ್ಕೆ ಬ್ರಿಟನ್‌ ಕಾರ್ಯದರ್ಶಿ ಸಹಿ ಹಾಕಿದ್ದಾರೆ,'' ಎಂದು ಗೃಹ ಕಚೇರಿ ವಕ್ತಾರರು ತಿಳಿಸಿದ್ದಾರೆ. ಹೀಗಾಗಿ ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸಲು ಇದ್ದ ಕಾನೂನು ತೊಡಕುಗಳು ಈಗ ನಿವಾರಣೆಯಾಗಿವೆ. 2016ರಲ್ಲಿ ದೇಶ ಬಿಟ್ಟು ಪರಾರಿಯಾಗಿದ್ದ ಮಲ್ಯ ಅವರು, ಅಂದಿನಿಂದಲೂ ಬ್ರಿಟನ್‌ನಲ್ಲಿಯೇ ನೆಲೆಸಿದ್ದಾರೆ.

ವಿವಿಐಪಿ ಕಾಪ್ಟರ್‌ ಹಗರಣದ ಮಧ್ಯವರ್ತಿ ಕ್ರಿಶ್ಚಿಯನ್‌ ಮೈಖೆಲ್‌ ಹಸ್ತಾಂತರದ ಬಳಿಕ, ಮಲ್ಯ ಹಸ್ತಾಂತರವು ಕೇಂದ್ರ ಸರಕಾರಕ್ಕೆ ಭಾರಿ ಬಲ ನೀಡಿದೆ. ಇದುವರೆಗೆ ಸರಕಾರವನ್ನು ಟೀಕಿಸುತ್ತಿದ್ದ ಪ್ರತಿಪಕ್ಷಗಳಿಗೆ ತನ್ನ ನಡೆ ಮೂಲಕವೇ ಸರಕಾರ ಉತ್ತರ ನೀಡಿದಂತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ