ಆ್ಯಪ್ನಗರ

ಎಎಪಿ ವಿರುದ್ಧ ಬಿಜೆಪಿ ಆಂದೋಲನಕ್ಕೆ ನನ್ನನ್ನ ಆಹ್ವಾನಿಸಿರುವುದು ದುರಾದೃಷ್ಟಕರ: ಅಣ್ಣಾ

ಬಿಜೆಪಿಯ ದೆಹಲಿ ಘಟಕಕ್ಕೆ ಮರು ಪತ್ರ ಬರೆದಿರುವ ಅಣ್ಣಾ ಹಜಾರೆ, ಕಳೆದ ಆರು ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದೆ. ಆದರೂ ಬಿಜೆಪಿ 10 × 12 ಅಡಿ ಕೋಣೆಯಲ್ಲಿ ವಾಸಿಸುವ, ಯಾವುದೇ ಪ್ರಬಲ ಶಕ್ತಿ ಇಲ್ಲದ 83 ವರ್ಷದ ಈ ಫಕೀರನನ್ನ ಆಂದೋಲನಕ್ಕೆ ಕರೆಯುತ್ತಿದೆ. ಇದಕ್ಕಿಂತ ದೊಡ್ಡ ದುರಾದೃಷ್ಟಕರ ವಿಚಾರವಿಲ್ಲ ಎಂದು ಪತ್ರದ ಮೂಲಕ ಹೇಳಿದ್ದಾರೆ.

Agencies 29 Aug 2020, 12:41 pm
ಹೊಸದಿಲ್ಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್‌ ಅವರ ಎಎಪಿ ಪಕ್ಷದ ವಿರುದ್ಧದ ಆಂದೋಲನದಲ್ಲಿ ಭಾಗವಹಿಸುವಂತೆ ಬಿಜೆಪಿಯ ದೆಹಲಿ ಘಟಕ ಮಾಡಿರುವ ಮನವಿಯನ್ನು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ತಿರಸ್ಕರಿಸಿದ್ದಾರೆ. ಪ್ರಭಾವ ಇಲ್ಲದ ನನ್ನನ್ನ ಆಹ್ವಾನಿಸಿರುವುದು ನಿಜಕ್ಕೂ ದುರದೃಷ್ಟಕರ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.
Vijaya Karnataka Web anna


ಈ ಬಗ್ಗೆ ಬಿಜೆಪಿಯ ದೆಹಲಿ ಘಟಕಕ್ಕೆ ಮರು ಪತ್ರ ಬರೆದಿರುವ ಅಣ್ಣಾ ಹಜಾರೆ, ಕಳೆದ ಆರು ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದೆ. ಆದರೂ ಬಿಜೆಪಿ 10 × 12 ಅಡಿ ಕೋಣೆಯಲ್ಲಿ ವಾಸಿಸುವ, ಯಾವುದೇ ಪ್ರಬಲ ಶಕ್ತಿ ಇಲ್ಲದ 83 ವರ್ಷದ ಈ ಫಕೀರನನ್ನ ಆಂದೋಲನಕ್ಕೆ ಕರೆಯುತ್ತಿದೆ. ಇದಕ್ಕಿಂತ ದೊಡ್ಡ ದುರಾದೃಷ್ಟಕರ ವಿಚಾರವಿಲ್ಲ ಎಂದು ಪತ್ರದ ಮೂಲಕ ಹೇಳಿದ್ದಾರೆ.

ಅರವಿಂದ ಕೇಜ್ರಿವಾಲ್ ನೇತೃತ್ವದ ಸರ್ಕಾರದ ವಿರುದ್ಧ ನಡೆಸುವ ಆಂದೋಲನದಲ್ಲಿ ಭಾಗಿಯಾಗುವಂತೆ ಮನವಿ ಮಾಡಿ ಆದೇಶ ಗುಪ್ತಾ ಅವರು ಕಳೆದ ಸೋಮವಾರ ಭ್ರಷ್ಟಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಅವರಿಗೆ ಪತ್ರ ಬರೆದಿದ್ದರು. ಎಎಪಿ ಸರ್ಕಾರವು ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಭ್ರಷ್ಟಾಚಾರದ ಹೊಸ ಹೆಸರು ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದರು.

ದೇವರ ಸಂದೇಶವಾಹಕರೇ ದಯವಿಟ್ಟು ಉತ್ತರಿಸಿ: ನಿರ್ಮಲಾಗೆ ಪಿ.ಚಿದಂಬರಂ ಟಾಂಗ್
ಯುಪಿಎ ಸರಕಾರ ಆಡಳಿತದಲ್ಲಿರುವಾಗ ಅಣ್ಣ ಹಜಾರೆ ಸರಕಾರದ ವಿರುದ್ಧ ಬೃಹತ್‌ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಈ ಧರಣಿಯಲ್ಲಿ ಅರವಿಂದ್‌ ಕೇಜ್ರಿವಾಲ್‌ ಕೂಡ ಭಾಗಿಯಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ