ಆ್ಯಪ್ನಗರ

ನಮಗೆ ಚೀನಾ ಅಥವಾ ಪಾಕಿಸ್ತಾನದ ನೆಲ ಬೇಕಿಲ್ಲ: ನಿತಿನ್ ಗಡ್ಕರಿ ಅಭಿಮತ!

ಗುಜರಾತ್‌ನ ಜನ ಸಂವಾದ ರ‍್ಯಾಲಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, ಪಾಕಿಸ್ತಾನ ಹಾಗೂ ಚೀನಾದ ನೆಲ ಕಬಳಿಸುವ ದುರಾಸೆ ಭಾರತಕ್ಕಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

Vijaya Karnataka Web 15 Jun 2020, 10:51 am
ಮುಂಬೈ: ಭಾರತಕ್ಕೆ ನೆರೆಯ ದೇಶಗಳ ನೆಲ ಕಬಳಿಸುವ ದುರಾಸೆ ಇಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಭಾರತ ಎಂದಿಗೂ ಚೀನಾ ಅಥವಾ ಪಾಕಿಸ್ತಾನದ ನೆಲ ಕಬಳಿಸಲು ಬಯಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
Vijaya Karnataka Web Nitin Gadkari
ಗುಜರಾತ್ ಜನ ಸಂವಾದ ಸಭೆ ಉದ್ದೇಶಿಸಿ ಮಾತನಾಡಿದ ನಿತಿನ್ ಗಡ್ಕರಿ


ಭಾರತ ನೆರೆಯ ದೇಶಗಳೊಂದಿಗೆ ಶಾಂತಿ ಮತ್ತು ಸಮೃದ್ಧಿ ಬಯುಸತ್ತದೆಯೇ ಹೊರತು ಯುದ್ಧವನ್ನಲ್ಲ ಎಂದು ನಿತಿನ್ ಗಡ್ಕರಿ ಮಾರ್ಮಿಕವಾಗಿ ಹೇಳಿದ್ದಾರೆ.

ಗುಜರಾತ್‌ನ ಜನ ಸಂವಾದ ರ‍್ಯಾಲಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ದೇಶಿಸಿ ಮಾತನಾಡಿದ ನಿತಿನ್ ಗಡ್ಕರಿ, ಭಾರತ ಶಾಂತಿ ಪ್ರಿಯ ರಾಷ್ಟ್ರವಾದರೂ ತನ್ನ ಸಾರ್ವಭೌಮತ್ವದ ಮೇಲೆ ಧಕ್ಕೆ ಬಂದಾಗ ಸುಮ್ಮನೆ ಕೂರುವ ಜಾಯಮಾನ ಹೊಂದಿಲ್ಲ ಎಂದು ಸೂಚ್ಯವಾಗಿ ಹೇಳಿದರು.

ಹವಾಮಾನ ಬದಲಾಗಿದೆ: ಕಣಿವೆಯ 'ಜನ ಸಂವಾದ' ರ‍್ಯಾಲಿಯಲ್ಲಿ ಪಾಕ್ ಕಾಲೆಳೆದ ರಾಜನಾಥ್!

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಾಹ್ಯ ಹಾಗೂ ಆಂತರಿಕ ಸಮಸ್ಯೆಗಳಿಗೆ ತೀಲಾಂಜಲಿ ನೀಡಿ ದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಈ ವೇಳೆ ನಿತಿನ್ ಗಡ್ಕರಿ ಅಭಿಪ್ರಾಯಪಟ್ಟರು.

ದೇಶದಲ್ಲಿ ನಕ್ಸಲರ ಹಾವಳಿ ತಡೆಗಟ್ಟುವಲ್ಲಿ ಹಾಗೂ ಗಡಿಯಲ್ಲಿ ಪಾಕ್ ಪ್ರೇರಿತ ಭಯೋತ್ಪಾದಕರನ್ನು ಮಟ್ಟ ಹಾಕುವಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಫಲವಾಗಿದೆ ಎಂದು ಗಡ್ಕರಿ ಹೇಳಿದರು.

ಸುವರ್ಣ ಬಂಗಾಳವೇ ನಮ್ಮ ಗುರಿ: ವರ್ಚುವಲ್ ರ‍್ಯಾಲಿಯಲ್ಲಿ ಶಾ ಅಭಿಮತ!

ಭಾರತ ಎಂದಿಗೂ ನೆಲಕ್ಕಾಗಿ ಇತರ ರಾಷ್ಟ್ರಗಳ ಮೇಲೆ ದಂಡೆತ್ತಿ ಹೋಗುವುದಿಲ್ಲ ಎಂದಿರುವ ಗಡ್ಕರಿ, ಶಾಂತಿ ಸ್ಥಾಪನೆಯ ಮೂಲಕವೇ ಭಾರತ ಅತ್ಯಂತ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ಅಭಿಪ್ರಾಯಪಟ್ಟರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ