ಆ್ಯಪ್ನಗರ

ಜಜ್‌ FB ಪೋಸ್ಟ್‌ ಲೈಕ್‌: ಕೇಸ್‌ ಕಳೆದುಕೊಂಡ ವಕೀಲ

ನ್ಯಾಯಾಧೀಶ ತಮ್ಮ ಫೇಸ್‌ಬುಕ್‌ ಪೋಸ್ಟ್‌ಗೆ ವಕೀಲನೊಬ್ಬ ಲೈಕ್‌ ಮತ್ತು ಕಮೆಂಟ್‌ ನೀಡಿದ ಎಂಬ ಕಾರಣಕ್ಕೆ ಆತ ವಾದಿಸುತ್ತಿದ್ದ ಕೇಸ್‌ ಅನ್ನೇ ಬೇರೆ ಕೋರ್ಟ್‌ಗೆ ವರ್ಗಾಯಿಸಿರುವ ಅಪರೂಪದ ಘಟನೆ ಬಾಂಬೆ ಹೈಕೋರ್ಟ್‌ನಲ್ಲಿ ನಡೆದಿದೆ.

TIMESOFINDIA.COM 19 Jul 2018, 3:19 pm
ಮುಂಬಯಿ: ನ್ಯಾಯಾಧೀಶ ತಮ್ಮ ಫೇಸ್‌ಬುಕ್‌ ಪೋಸ್ಟ್‌ಗೆ ವಕೀಲನೊಬ್ಬ ಲೈಕ್‌ ಮತ್ತು ಕಮೆಂಟ್‌ ನೀಡಿದ ಎಂಬ ಕಾರಣಕ್ಕೆ ಆತ ವಾದಿಸುತ್ತಿದ್ದ ಕೇಸ್‌ ಅನ್ನೇ ಬೇರೆ ಕೋರ್ಟ್‌ಗೆ ವರ್ಗಾಯಿಸಿರುವ ಅಪರೂಪದ ಘಟನೆ ಬಾಂಬೆ ಹೈಕೋರ್ಟ್‌ನಲ್ಲಿ ನಡೆದಿದೆ.
Vijaya Karnataka Web facebook


'ತಾನು ವಾದಿಸುತ್ತಿರುವ ಕೇಸ್‌ನ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶ ಅವರ ಫೇಸ್‌ಬುಕ್‌ ಪೋಸ್ಟ್‌ವೊಂದಕ್ಕೆ ಲೈಕ್‌ ನೀಡಿ ವೃತ್ತಿ ಅಶಿಸ್ತು ತೋರಿದ್ದಾರೆ' ಎಂದು ಹೇಳಿರುವ ವಿಭಾಗೀಯ ಪೀಠ, ಮುಖ್ಯ ನ್ಯಾಯಾಧೀಶ ಕೇಸ್‌ ಅನ್ನು ಮತ್ತೊಂದು ಕೋರ್ಟ್‌ಗೆ ವರ್ಗಾಯಿಸಿರುವುದೇ ಸರಿ ಎಂದು ಸಮರ್ಥಿಸಿಕೊಂಡಿದೆ.

ಎರಡು ಕುಟುಂಬಗಳ ನಡುವೆ ಆಸ್ತಿ ವಿಚಾರಕ್ಕೆ ಕಲಹ ನಡೆದಿದ್ದು, ಅದರ ವಿಚಾರಣೆ ಸೆಷನ್‌ ಕೋರ್ಟ್‌ನಲ್ಲಿ ನಡೆಯುತ್ತಿತ್ತು. ಇದರಲ್ಲಿ ಒಂದು ಪಕ್ಷದವರ ಪರವಾಗಿ ಓದಿಸುತ್ತಿದ್ದ ಆ ವಕೀಲ ಆ ಕುಟುಂಬದ ಸದಸ್ಯ ಆಗಿದ್ದರು.

ವಕೀಲ ಸೆಷನ್‌ ಕೋರ್ಟ್‌ನ ಮುಖ್ಯ ನ್ಯಾಯಾಧೀಶರ ಎಫ್‌ಬಿ ಪೋಸ್ಟ್‌ಗೆ ಲೈಕ್‌ ಮಾಡಿರುವ ವಿಷಯವನ್ನು ಅಡಿಷನಲ್ ಸೆಷನ್‌ ಜಜ್‌ ಮುಖ್ಯ ನ್ಯಾಯಾಧೀಶರ ಗಮನಕ್ಕೆ ತಂದಾಗ ಆ ಲಾಯರ್‌ ವಾದಿಸುತ್ತಿದ್ದ ಕೇಸ್‌ ಅನ್ನು ಮತ್ತೊಂದು ಕೋರ್ಟ್‌ಗೆ ವರ್ಗಾಯಿಸಲಾಗಿದೆ.

ಕಳೆದ ಮೂರು ವರ್ಷದಿಂದ ಕೇಸ್‌ನ ವಿಚಾರಣೆ ನಡೆಸುತ್ತಿದ್ದ ಸೆಷನ್‌ ಜಜ್ ಇದೀಗ ಕೇಸ್‌ ಅನ್ನು ಮತ್ತೊಂದು ಕೋರ್ಟ್‌ಗೆ ವರ್ಗಾಯಿಸಿರುವುದನ್ನು ಪ್ರಶ್ನಿಸಿ ಆ ಲಾಯರ್‌ನ ಕಕ್ಷಿದಾರರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ