ಆ್ಯಪ್ನಗರ

ಯೋಗಿ ಸರಕಾರದಿಂದ 8 ಸಾವಿರಕ್ಕೂ ಅಧಿಕ ಮದ್ರಸಾಗಳ ಆಧುನೀಕರಣ!

ಉತ್ತರ ಪ್ರದೇಶದ ಸುಮಾರು 8 ಸಾವಿರಕ್ಕೂ ಅಧಿಕ ಮದರಸಾಗಳನ್ನು ಆಧುನೀಕರಣಗೊಳಿಸಲು ಇಲ್ಲಿನ ಮದರಸಾ ಶಿಕ್ಷಣ ಮಂಡಳಿ ಮುಂದಾಗಿದೆ.

Vijaya Karnataka Web 9 Dec 2017, 2:34 pm
ಲಖನೌ: ರಾಜ್ಯದಲ್ಲಿರುವ ಸುಮಾರು 8 ಸಾವಿರ ಮದ್ರಸಾಗಳನ್ನು ಆಧುನೀಕರಣಗೊಳಿಸಲು ಉತ್ತರ ಪ್ರದೇಶ (ಯುಪಿ) ಮದ್ರಸಾ ಶಿಕ್ಷಣ ಮಂಡಳಿ ಮುಂದಾಗಿದೆ. ಈಗಾಗಲೇ 8,521 ಮದ್ರಸಾಗಳು ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವ ಕೇಂದ್ರ ಸರಕಾರದ ಯೋಜನೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.
Vijaya Karnataka Web up government wants 8000 more madrassas to be modernised
ಯೋಗಿ ಸರಕಾರದಿಂದ 8 ಸಾವಿರಕ್ಕೂ ಅಧಿಕ ಮದ್ರಸಾಗಳ ಆಧುನೀಕರಣ!


ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಬೋರ್ಡ್ ಆನ್‌ಲೈನ್ ಪೋರ್ಟಲ್‌ನಲ್ಲಿ ಸುಮಾರು 16,705 ಮದ್ರಸಾಗಳು ನೋಂದಣಿ ಮಾಡಿಕೊಂಡಿವೆ. ಉಳಿದ 8,184 ಮದ್ರಸಾಗಳಿಗೆ ಅನುದಾನ ನೀಡುವಂತೆ ಕೇಂದ್ರದ ಬಳಿ ಅಲ್ಲಿನ ಸರಕಾರ ಮನವಿ ಮಾಡಲು ಮುಂದಾಗಿದೆ.

ರಾಜ್ಯದಲ್ಲಿರುವ ಎಲ್ಲಾ ಮದ್ರಸಾಗಳಲ್ಲಿ ಏಕ ರೂಪದ ಶಿಕ್ಷಣ ನೀಡುವುದು ಸರಕಾರದ ಉದ್ದೇಶ. ಆದರೆ, ಕೇವಲ 8 ಸಾವಿರ ಮದ್ರಸಾಗಳನ್ನು ಆಧುನೀಕರಣಗೊಳಿಸಲಾಗುತ್ತಿದ್ದು, ಅರ್ಹತೆ ಪಡೆದಿರುವ ಉಳಿದ ಮದ್ರಸಾಗಳನ್ನೇಕೆ ಆಧುನೀಕರಣಗೊಳಿಸುತ್ತಿಲ್ಲ ಎಂದು ರಿಜಿಸ್ಟಾರ್ ರಾಹುಲ್ ಗುಪ್ತಾ ಪ್ರಶ್ನಿಸಿದ್ದಾರೆ.

ಅಷ್ಟೇ ಅಲ್ಲದೆ, ಆಧುನಿಕ ವಿಷಯಗಳ ಬಗ್ಗೆ ಬೋಧಿಸುವ ಶಿಕ್ಷಕರ ಸಂಖ್ಯೆಯನ್ನು ಸಹ ಹೆಚ್ಚಿಸಬೇಕು ಎಂದು ಮದ್ರಸಾ ಶಿಕ್ಷಣ ಮಂಡಳಿ ಮನವಿ ಮಾಡಿದೆ.

ಉತ್ತರ ಪ್ರದೇಶದ 16 ಸಾವಿರ ಮದ್ರಸಾಗಳಲ್ಲಿ ಸುಮಾರು 30 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆಧುನಿಕ ವಿಷಯಗಳನ್ನು ಬೋಧಿಸಲು ಎನ್‌ಸಿಇಆರ್‌ಟಿ ಪುಸ್ತಕಗಳನ್ನು ತಲುವ ಪ್ರಕ್ರಿಯೆಯೂ ಚಾಲ್ತಿಯಲ್ಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ