ಆ್ಯಪ್ನಗರ

ಪ್ರಜ್ಞಾಹೀನ ರೋಗಿಯನ್ನು ಒಳಗೇ ಬಿಟ್ಟು ಲಾಕ್‌ ಮಾಡಿದ ಸಿಬ್ಬಂದಿ

30 ವರ್ಷದ ಸೋನಿಯಾ ಅವರನ್ನು ಶುಕ್ರವಾರ ಪುರ್ಕಾಜಿ ಬ್ಲಾಕ್‌ನ ಫಲೋಡಾ ಗ್ರಾಮದ ಆರೋಗ್ಯ ಕೇಂದ್ರಕ್ಕೆ ಕರೆ ತರಲಾಗಿತ್ತು. ಪ್ರಜ್ಞಾಹೀನರಾಗಿದ್ದ ಅವರನ್ನು ಆಸ್ಪತ್ರೆಯ ರೋಗಿಗಳ ಕೋಣೆಯ ಬೆಡ್‌ನಲ್ಲಿ ಮಲಗಿಸಲಾಗಿತ್ತು.

PTI 23 Jun 2019, 5:00 am
ಮುಜಪ್ಫರ್‌ನಗರ: ಒಂದು ಕಡೆ ಸರಕಾರಿ ಅಧಿಕಾರಿಗಳು ಸಮಯಪಾಲನೆ ಮಾಡುವುದಿಲ್ಲ ಎಂಬ ಆಪಾದನೆ ಕೇಳಿಬರುತ್ತಿರುವ ಮಧ್ಯೆ ಉತ್ತರ ಪ್ರದೇಶದ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ತಮ್ಮ ಸಮಯಪ್ರಜ್ಞೆಯ ಮೂಲಕ ಅಮಾನವೀಯತೆ ಮೆರೆದಿದ್ದಾರೆ! ಇವರ ಸಮಯ ಪ್ರಜ್ಞೆ ಎಷ್ಟೆಂದರೆ, ತಮ್ಮ ಕೆಲಸ ಅವಧಿ ಮುಗಿಯಿತೆಂದು ಆಸ್ಪತ್ರೆಯಲ್ಲಿ ಬೆಡ್‌ನಲ್ಲಿ ಪ್ರಜ್ಞಾಹೀನನಾಗಿದ್ದ ರೋಗಿಯನ್ನು ಹಾಗೆಯೇ ಬಿಟ್ಟು ಬಾಗಿಲು ಮುಚ್ಚಿಕೊಂಡು ಹೋಗುವಷ್ಟು!
Vijaya Karnataka Web lock


30 ವರ್ಷದ ಸೋನಿಯಾ ಅವರನ್ನು ಶುಕ್ರವಾರ ಪುರ್ಕಾಜಿ ಬ್ಲಾಕ್‌ನ ಫಲೋಡಾ ಗ್ರಾಮದ ಆರೋಗ್ಯ ಕೇಂದ್ರಕ್ಕೆ ಕರೆ ತರಲಾಗಿತ್ತು. ಪ್ರಜ್ಞಾಹೀನರಾಗಿದ್ದ ಅವರನ್ನು ಆಸ್ಪತ್ರೆಯ ರೋಗಿಗಳ ಕೋಣೆಯ ಬೆಡ್‌ನಲ್ಲಿ ಮಲಗಿಸಲಾಗಿತ್ತು. ಮನೆಯವರು ಯಾರೂ ಇರಲಿಲ್ಲ. ಸಂಜೆಯಾಗುತ್ತಿದ್ದಂತೆಯೇ ವೈದ್ಯರೂ ಸೇರಿದಂತೆ ಸಿಬ್ಬಂದಿ ತಮ್ಮ ಕೆಲಸದ ಅವಧಿ ಮುಗಿಯಿತೆಂದು ಬಾಗಿಲು ಹಾಕಿಕೊಂಡು ಹೋದರು!

ಇದಾಗಿ ಕೆಲವು ಗಂಟೆ ಕಳೆಯುತ್ತಿದ್ದಂತೆಯೇ ಸೋನಿಯಾಗೆ ಪ್ರಜ್ಞೆ ಮರಳಿತ್ತು. ಎದ್ದು ನೋಡಿದರೆ ಬಾಗಿಲು ಹಾಕಿದ್ದು ತಿಳಿಯಿತು. ಆಕೆ ಬೊಬ್ಬೆ ಹೊಡೆದಾಗ ಅಕ್ಕಪಕ್ಕದವರು ಕೇಳಿಸಿಕೊಂಡು ಅಧಿಕಾರಿಗಳನ್ನು ಕರೆಸಿ ಬಾಗಿಲು ತೆರೆಸಿದರು. ಈ ಘಟನೆ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಗ್ರೂಪ್‌ ಡಿ ಸಿಬ್ಬಂದಿಯೊಬ್ಬರನ್ನು ಅಮಾನತು ಮಾಡಲಾಗಿದೆ. ವೈದ್ಯಾಧಿಕಾರಿ ಡಾ. ಮೋಹಿತ್‌ ಕುಮಾರ್‌, ಮುಖ್ಯ ಫಾರ್ಮಸಿಸ್ಟ್‌ ಪ್ರವೀಣ್‌ ಕುಮಾರ್‌ ಅವರನ್ನು ವರ್ಗ ಮಾಡಲಾಗಿದೆ. ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ