ಆ್ಯಪ್ನಗರ

ರಾಹುಲ್‌ ‘ರೇಪ್‌ ಇನ್‌ ಇಂಡಿಯಾ’ ಹೇಳಿಕೆಗೆ ಸಂಸತ್‌ನಲ್ಲಿ ಭಾರಿ ಗದ್ದಲ, ಕಲಾಪ ಮುಂದೂಡಿಕೆ

ಜಾರ್ಖಂಡ್‌ನ ಗೊಡ್ಡಾದಲ್ಲಿ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ರಾಹುಲ್‌ ಗಾಂಧಿ, “ನರೇಂದ್ರ ಮೋದಿ ‘ಮೇಕ್‌ ಇನ್‌ ಇಂಡಿಯಾ’ ಎಂದು ಹೇಳಿದರು. ಆದರೆ ನೀವಿಂದು ಎಲ್ಲೇ ನೋಡಿ ‘ರೇಪ್‌ ಇನ್‌ ಇಂಡಿಯಾ’ ನಡೆಯುತ್ತಿದೆ," ಎಂದು ಹೇಳಿದ್ದರು.

Agencies 13 Dec 2019, 12:42 pm

ಹೊಸದಿಲ್ಲಿ: ಜಾರ್ಖಂಡ್‌ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ನೀಡಿದ ‘ರೇಪ್‌ ಇನ್‌ ಇಂಡಿಯಾ’ ಹೇಳಿಕೆಗೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಎರಡೂ ಸದನಗಳು ಗದ್ದಲದ ಗೂಡಾದ ಹಿನ್ನೆಲೆಯಲ್ಲಿ ಸಭಾಧ್ಯಕ್ಷರು ಕಲಾಪವನ್ನು ಮುಂದೂಡಿದ್ದಾರೆ.
Vijaya Karnataka Web uproar in lok sabha and rajya sabha over rahul gandhis rape in india remark
ರಾಹುಲ್‌ ‘ರೇಪ್‌ ಇನ್‌ ಇಂಡಿಯಾ’ ಹೇಳಿಕೆಗೆ ಸಂಸತ್‌ನಲ್ಲಿ ಭಾರಿ ಗದ್ದಲ, ಕಲಾಪ ಮುಂದೂಡಿಕೆ


ಜಾರ್ಖಂಡ್‌ನ ಗೊಡ್ಡಾದಲ್ಲಿ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ರಾಹುಲ್‌ ಗಾಂಧಿ, “ನರೇಂದ್ರ ಮೋದಿ ‘ಮೇಕ್‌ ಇನ್‌ ಇಂಡಿಯಾ’ ಎಂದು ಹೇಳಿದರು. ಆದರೆ ನೀವಿಂದು ಎಲ್ಲೇ ನೋಡಿ ‘ರೇಪ್‌ ಇನ್‌ ಇಂಡಿಯಾ’ ನಡೆಯುತ್ತಿದೆ. ಉತ್ತರ ಪ್ರದೇಶದಲ್ಲಿ ನರೇಂದ್ರ ಮೋದಿಯ ಶಾಸಕ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ನಂತರ ಆಕೆ ಅಪಘಾತಕ್ಕೆ ಗುರಿಯಾದಳು. ಆದರೂ ನರೇಂದ್ರ ಮೋದಿ ಈ ಬಗ್ಗೆ ಒಂದೇ ಒಂದು ಶಬ್ದವನ್ನೂ ಆಡಿಲ್ಲ,” ಎಂದು ಕಿಡಿಕಾರಿದ್ದರು.



ಇದಕ್ಕೆ ಇಂದು ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಲೋಕಸಭೆಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ನೇತೃತ್ವದಲ್ಲಿ ಬಿಜೆಪಿ ಮಹಿಳಾ ಸದಸ್ಯರು ರಾಹುಲ್‌ ಗಾಂಧಿ ಕ್ಷಮೆ ಕೋರಬೇಕು ಎಂದು ಗದ್ದಲವೆಬ್ಬಿಸಿದರು.

‘ಮೇಕ್‌ ಇನ್‌ ಇಂಡಿಯಾ’ದಿಂದ ‘ರೇಪ್‌ ಇನ್‌ ಇಂಡಿಯಾ’ದತ್ತ: ಅಧೀರ್‌ ರಂಜನ್‌ ಚೌಧರಿ ವಿವಾದಾತ್ಮಕ ಹೇಳಿಕೆ

“ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಬ್ಬ ನಾಯಕ ಭಾರತೀಯ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಬೇಕೆಂದು ಸ್ಪಷ್ಟ ಕರೆ ನೀಡುತ್ತಿದ್ದಾನೆ. ಇದು ದೇಶದ ಜನರಿಗೆ ರಾಹುಲ್ ಗಾಂಧಿಯವರ ಸಂದೇಶವೇ?” ಎಂದು ಸ್ಮೃತಿ ಇರಾನಿ ಹರಿಹಾಯ್ದಿದ್ದಾರೆ.

ರಾಹುಲ್‌ ಗಾಂಧಿ ಹೇಳಿಕೆಯನ್ನು ಸಮರ್ಥಿಸಿಕೊಂಡ ಡಿಎಂಕೆ ನಾಯಕಿ ಕನಿಮೋಳಿ, “ಪ್ರಧಾನಿ 'ಮೇಕ್ ಇನ್ ಇಂಡಿಯಾ' ಎಂದು ಹೇಳಿದರು.
ನಾವು ಅದನ್ನು ಗೌರವಿಸುತ್ತೇವೆ. ಆದರೆ ದೇಶದಲ್ಲಿ ಏನು ನಡೆಯುತ್ತಿದೆ? ಅದನ್ನೇ ರಾಹುಲ್ ಗಾಂಧಿ ಹೇಳಲು ಉದ್ದೇಶಿಸಿದ್ದರು. ದುರದೃಷ್ಟವಶಾತ್ ಮೇಕ್ ಇನ್ ಇಂಡಿಯಾ ನಡೆಯುತ್ತಿಲ್ಲ ಮತ್ತು ದೇಶದ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಇದು ಒಂದು ಕಳವಳವಕಾರಿ ಘಟನೆ," ಎಂದರು. ಆದರೆ ಗದ್ದಲ ಮುಂದುವರಿದಿದ್ದರಿಂದ ಸದನವನ್ನು ಸ್ಪೀಕರ್‌ ಓಂ ಬಿರ್ಲಾ 12 ಗಂಟೆವರೆಗೆ ಮುಂದೂಡಿಕೆ ಮಾಡಿದರು. ಮತ್ತೆ ಸದನ ಸೇರಿದಾಗ ಗಲಾಟೆ ನಿಲ್ಲದಿದ್ದರಿಂದ ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿಕೆ ಮಾಡಲಾಯಿತು.

ರಾಜ್ಯಸಭೆಯಲ್ಲೂ ಇದೇ ವಿಚಾರ ತೀವ್ರ ಸಂಘರ್ಷ ಹುಟ್ಟುಹಾಕಿತು. ಕೆಲವು ಸದಸ್ಯರು “ರಾಹುಲ್‌ ಗಾಂಧಿ ಮಾಫಿ ಮಾಂಗೋ” ಎಂದು ಘೋಷಣೆ ಕೂಗಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಭಾಧ್ಯಕ್ಷ ಎಂ. ವೆಂಕಯ್ಯ ನಾಯ್ಡು ‘ಈ ಸದನದ ಸದಸ್ಯರಲ್ಲದ ವ್ಯಕ್ತಿಯ ಹೆಸರನ್ನು ಎತ್ತಬಾರದು. ಕಲಾಪಕ್ಕೆ ತೊಂದರೆ ಉಂಡು ಮಾಡಲು ಯಾರಿಗೂ ಅಧಿಕಾರವಿಲ್ಲ,” ಎಂದರು. ಆದರೆ ಗದ್ದಲ ಮುಂದುವರಿದಿದ್ದರಿಂದ ಅವರು ಸದನವನ್ನು ಮಧ್ಯಾಹ್ನ 12 ಗಂಟೆಗೆ ಮುಂದೂಡಿದರು.

ಇದೇ ರೀತಿ ಕೆಲವು ದಿನಗಳ ಹಿಂದೆ ಕಾಂಗ್ರೆಸ್‌ ಲೋಕಸಭಾ ಸದಸ್ಯ ಅಧೀರ್‌ ರಂಜನ್‌ ಚೌಧರಿ ಹೇಳಿಕೆ ನೀಡಿದ್ದರು. ಇದಕ್ಕೂ ಭಾರಿ ಪ್ರತಿರೋಧ ವ್ಯಕ್ತವಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ