ಆ್ಯಪ್ನಗರ

ಮೇಕೆದಾಟು ಯೋಜನೆಗೆ ವಿರೋಧ: ಸಂಸತ್ತಿನಲ್ಲಿ ಸಭ್ಯತೆ ದಾಟಿದ ಎಐಎಡಿಎಂಕೆ 26 ಸದಸ್ಯರ ಅಮಾನತು

ಕಳದ ಐದು ದಿನಗಳಿಂದ ಎಐಎಡಿಎಂಕೆ ಸದಸ್ಯರು ಕಲಾಪಕ್ಕೆ ತೀವ್ರ ಅಡ್ಡಿಯುಂಟು ಮಾಡುತ್ತಿದ್ದರು. ಇದರಿಂದ ಕೆರಳಿದ ಸುಮಿತ್ರಾ ಮಹಾಜನ್‌ 26 ಸದಸ್ಯರನ್ನು ಅಮಾನತು ಮಾಡಿದ್ದಾರೆ.

Vijaya Karnataka Web 2 Jan 2019, 8:39 pm
ಹೊಸದಿಲ್ಲಿ: ಕರ್ನಾಟಕದ ಮಹತ್ವಾಕಾಂಕ್ಷಿ ಮೇಕೆದಾಟು ಯೋಜನೆಯನ್ನು ವಿರೋಧಿಸುತ್ತಿರುವ ತಮಿಳುನಾಡಿನ ಎಐಡಿಎಂಕೆ ಸದಸ್ಯರು ಲೋಕಸಭೆಯಲ್ಲಿ ಭಾರಿ ಗದ್ದಲ ನಡೆಸಿದರು. ಅಲ್ಲದೇ ಕಳೆದ ಐದು ದಿನಗಳಿಂದ ನಿರಂತರವಾಗಿ ಕಲಾಪಕ್ಕೆ ಅಡ್ಡಿಪಡಿಸಿದ್ದರಿಂದ ಕೆರಳಿದ ಲೋಕಸಭಾ ಸ್ಪೀಕರ್‌ ಸುಮಿತ್ರಾ ಮಹಾಜನ್‌ 26 ಸದಸ್ಯರನ್ನು ಅಮಾನತು ಮಾಡಿದ್ದಾರೆ.
Vijaya Karnataka Web ಮೇಕೆದಾಟು
ಮೇಕೆದಾಟು


ಮೇಕೆದಾಟು ಕಾಮಗಾರಿ ಕಾರ್ಯ ಯೋಜನೆಯ ವರದಿಯನ್ನು ಸಿದ್ಧಪಡಿಸಲು ಕೇಂದ್ರ ಸರಕಾರ ಅನುಮತಿ ನೀಡಿದ್ದಕ್ಕೆ ತಮಿಳುನಾಡು ಸರಕಾರ ಭಾರಿ ವಿರೋಧ ವ್ಯಕ್ತಪಡಿಸಿದೆ.

ಬುಧವಾರ ಲೋಕಸಭೆ ಕಲಾಪ ಸೇರುತ್ತಿದ್ದಂತೆ ಎಐಡಿಎಂಕೆ ಸದಸ್ಯರು ಗದ್ದಲ ಮಾಡಿದರು.

ಸುಗಮ ಕಲಾಪಕ್ಕೆ ಅನುವು ಮಾಡಿಕೊಡುವಂತೆ ಸುಮಿತ್ರಾ ಮಹಾಜನ್‌ ಹಲವಾರು ಬಾರಿ ಮನವಿ ಮಾಡಿದರು. ಇದಕ್ಕೆ ಸಸ್ಯರು ಯಾರೂ ಸೊಪ್ಪು ಹಾಕಲಿಲ್ಲ.

ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ. ಕೇಂದ್ರ ಸರಕಾರಕ್ಕೆ ಮನವಿ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಎಐಎಡಿಎಂಕೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ