ಆ್ಯಪ್ನಗರ

ಅನೈತಿಕ ಸಂಬಂಧಕ್ಕೆ ಬೇಸತ್ತು ಪತಿಯ ಮರ್ಮಾಂಗ ಕತ್ತರಿಸಿದ ಪತ್ನಿ

ಅನೈತಿಕ ಸಂಬಂಧಗಳು ದಾಂಪತ್ಯ ಜೀವನವನ್ನು ಹೇಗೆಲ್ಲಾ ಹಾಳುಗೆಡವುತ್ತವೆ ಎಂಬುದು ಗೊತ್ತಿರುವುದೆ. ಇದೇ ರೀತಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಪತಿಯ ಮರ್ಮಾಂಗವನ್ನು ಕತ್ತರಿಸಿ ಟಾಯ್ಲೆಟ್‌ನಲ್ಲಿ ಬಿಸಾಕಿದ ಘಟನೆ ಮಂಗಳವಾರ ರಾತ್ರಿ ಪಂಜಾಬ್‍ನ ಜಲಂಧರ್‌ನಲ್ಲಿ ನಡೆದಿದೆ.

TNN 21 Feb 2018, 1:15 pm
ಜಲಂಧರ್: ಅನೈತಿಕ ಸಂಬಂಧಗಳು ದಾಂಪತ್ಯ ಜೀವನವನ್ನು ಹೇಗೆಲ್ಲಾ ಹಾಳುಗೆಡವುತ್ತವೆ ಎಂಬುದು ಗೊತ್ತಿರುವುದೆ. ಇದೇ ರೀತಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಪತಿಯ ಮರ್ಮಾಂಗವನ್ನು ಕತ್ತರಿಸಿ ಟಾಯ್ಲೆಟ್‌ನಲ್ಲಿ ಬಿಸಾಕಿದ ಘಟನೆ ಮಂಗಳವಾರ ರಾತ್ರಿ ಪಂಜಾಬ್‍ನ ಜಲಂಧರ್‌ನಲ್ಲಿ ನಡೆದಿದೆ.
Vijaya Karnataka Web upset over extramarital affair woman chops off husbands genitals
ಅನೈತಿಕ ಸಂಬಂಧಕ್ಕೆ ಬೇಸತ್ತು ಪತಿಯ ಮರ್ಮಾಂಗ ಕತ್ತರಿಸಿದ ಪತ್ನಿ


ಪೊಲೀಸರು ತಿಳಿಸಿದ ಪ್ರಕಾರ, ಜೋಗಿಂದರ್ ನಗರದಲ್ಲಿ ವಾಸವಾಗಿರುವ ಅಜಾದ್ ಸಿಂಗ್, ಆತನ ಪತ್ನಿ ಸುಖ್ವಂತ್ ಕೌರ್‌ ನಿತ್ಯ ಜಗಳವಾಡುತ್ತಿದ್ದರು. ಪತಿ ಬೇರೊಬ್ಬರ ಜತೆಗೆ ಅನೈಕ ಸಂಬಂಧ ಇಟ್ಟುಕೊಂಡಿದ್ದಾನೆಂಬುದು ಪತ್ನಿಯ ಅನುಮಾನ. ಎಷ್ಟು ಹೇಳಿದರೂ ಅಜಾದ್ ಬದಲಾಗದ ಕಾರಣ ಕೌರ್ ಗಂಭೀರ ನಿರ್ಧಾರಕ್ಕೆ ಬಂದ್ದಿದ್ದಾರೆ.

ಗಂಡ ನಿದ್ರಿಸುತ್ತಿದ್ದ ಸಂದರ್ಭದಲ್ಲಿ ರಾಡ್‌ನಿಂದ ತಲೆಗೆ ಬಲವಾಗಿ ಹೊಡೆದಿದ್ದಾರೆ. ಆ ಹೊಡೆತಕ್ಕೆ ಆತ ಪ್ರಜ್ಞೆ ಕಳೆದುಕೊಂಡಿದ್ದಾನೆ. ಬಳಿಕ ಚಾಕುವಿನಿಂದ ಆತನ ಮರ್ಮಾಂಗವನ್ನು ಕತ್ತರಿಸಿ, ಟಾಯ್ಲೆಟ್‌ನಲ್ಲಿ ಬಿಸಾಕಿ ಫ್ಲಶ್ ಮಾಡಿದ್ದಾರೆ.

ಮಗನ ಪರಿಸ್ಥಿತಿಯನ್ನು ಗಮನಿಸಿದ ಅಜಾದ್ ತಂದೆ, ತುರ್ತಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ರೀತಿಯ ಕೃತ್ಯಕ್ಕೆ ಕಾರಣರಾದ ಸೊಸೆ ಮೇಲೆ ಪೊಲೀಸರಿಗೆ ದೂರು ನೀಡಿದ್ದಾರೆ. ತೀವ್ರ ರಕ್ತಸ್ರಾವ ಆಗಿದ್ದ ಕಾರಣ ಅಜಾದ್ ಪರಿಸ್ಥಿತಿ ಗಂಭೀರವಾಗಿದೆ. ಇನ್ನೂ ಸ್ವಲ್ಪ ಸಮಯ ಕಳೆದರೆ ಹೊರತು ಏನೂ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ ವೈದ್ಯರು. ಸಂತ್ರಸ್ತನ ತಂದೆಯ ದೂರಿನ ಮೇರೆಗೆ ಪೊಲೀಸರು ಸುಖ್ವಂತ್ ಕೌರ್‌ರನ್ನು ಬಂಧಿಸಿದ್ದಾರೆ. ಈ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ