ಆ್ಯಪ್ನಗರ

ರಷ್ಯಾದ 60 ರಾಜತಾಂತ್ರಿಕ ಅಧಿಕಾರಿಗಳ ಉಚ್ಚಾಟನೆ ಮಾಡಿದ ಅಮೆರಿಕ

ಅಮೆರಿಕ ಸರಕಾರ ಸೋಮವಾರ ರಷ್ಯಾದ 60 ರಾಜತಾಂತ್ರಿಕ ಸಿಬ್ಬಂದಿಯನ್ನು ಉಚ್ಚಾಟಿಸಿದೆ.

Vijaya Karnataka Web 26 Mar 2018, 9:25 pm
ವಾಷಿಂಗ್ಟನ್‌: ಗತಕಾಲದ ಶೀತಲ ಸಮರವನ್ನು ನೆನಪಿಸುವಂತಹ ಮಹತ್ವದ ಬೆಳವಣಿಗೆಯೊಂದರಲ್ಲಿ ಅಮೆರಿಕ ಸರಕಾರ ಸೋಮವಾರ ರಷ್ಯಾದ 60 ರಾಜತಾಂತ್ರಿಕ ಸಿಬ್ಬಂದಿಯನ್ನು ಉಚ್ಚಾಟಿಸಿದೆ.
Vijaya Karnataka Web us expels 60 russian diplomats closes seattle consulate
ರಷ್ಯಾದ 60 ರಾಜತಾಂತ್ರಿಕ ಅಧಿಕಾರಿಗಳ ಉಚ್ಚಾಟನೆ ಮಾಡಿದ ಅಮೆರಿಕ


ಅವರನ್ನು 'ಗುಪ್ತಚರ ಅಕಾರಿಗಳು' ಎಂದು ಜರೆದಿರುವ ಅಮೆರಿಕ, ಸಿಯಾಟಲ್‌ನಲ್ಲಿರುವ ರಷ್ಯಾದ ದೂತಾವಾಸ ಕಚೇರಿಯನ್ನು ಮುಚ್ಚುವಂತೆಯೂ ಆದೇಶಿಸಿದೆ. ಇಂಗ್ಲೆಂಡ್‌ನಲ್ಲಿದ್ದ ರಷ್ಯಾದ ಮಾಜಿ ಗೂಢಚಾರ ಸೆರ್ಗೀ ಸ್ಕ್ರಿಪಾಲ್‌ ವಿರುದ್ಧ 'ನರ್ವ್‌ ಏಜೆಂಟ್‌' ಬಳಸಿದ್ದಕ್ಕೆ ಪ್ರತೀಕಾರವಾಗಿ ತಾನು ಈ ಕ್ರಮ ಕೈಗೊಂಡಿರುವುದಾಗಿ ಶ್ವೇತಭವನ ಖಚಿತಪಡಿಸಿದೆ.

ಅಮೆರಿಕ ಸೋಮವಾರ ಉಚ್ಚಾಟಿಸಿದ ರಷ್ಯಾದ ಅಕಾರಿಗಳ ಪೈಕಿ ಒಂದಷ್ಟು ಮಂದಿ ವಿಶ್ವಸಂಸ್ಥೆಯಲ್ಲಿ ರಷ್ಯಾದ ಕಾಯಂ ಕಾರ್ಯಪಡೆ ಸದಸ್ಯರೂ ಆಗಿದ್ದಾರೆ. ''ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಅಮೆರಿಕದಲ್ಲಿರುವ ರಷ್ಯಾದ 60 ಅಕಾರಿಗಳನ್ನು ಉಚ್ಚಾಟಿಸಿದ್ದಾರೆ.

ಅಲ್ಲದೆ, ನಮ್ಮ ಜಲಾಂತರ್ಗಾಮಿ ನೌಕಾನೆಲೆ ಹಾಗೂ ಬೋಯಿಂಗ್‌ಗೆ ಹತ್ತಿರದಲ್ಲಿರುವುದರಿಂದ ಸಿಯಾಟಲ್‌ನಲ್ಲಿರುವ ರಷ್ಯಾದ ದೂತಾವಾಸ ಕಚೇರಿಯನ್ನು ಮುಚ್ಚುವಂತೆಯೂ ಆದೇಶಿಸಿದ್ದಾರೆ,'' ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ