ಆ್ಯಪ್ನಗರ

ಯೋಗಿ ಆದಿತ್ಯನಾಥ್‌ರನ್ನು ಅಭಿನಂದಿಸಿದ ಟ್ರಂಪ್!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉತ್ತರ ಪ್ರದೇಶ ಮುಖ್ಯಮಂತ್ರಿಯಾದ ಯೋಗಿ ಆದಿತ್ಯನಾಥ್ ಅವರಿಗೆ ಟ್ವೀಟ್ ಮೂಲಕ ಅಭಿನಂದಿಸಿದ್ದಾರೆ!

ವಿಕ ಸುದ್ದಿಲೋಕ 21 Mar 2017, 11:54 am
ಬೆಂಗಳೂರು: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉತ್ತರ ಪ್ರದೇಶ ಮುಖ್ಯಮಂತ್ರಿಯಾದ ಯೋಗಿ ಆದಿತ್ಯನಾಥ್ ಅವರಿಗೆ ಟ್ವೀಟ್ ಮೂಲಕ ಅಭಿನಂದಿಸಿದ್ದಾರೆ!
Vijaya Karnataka Web us president congratulates up president
ಯೋಗಿ ಆದಿತ್ಯನಾಥ್‌ರನ್ನು ಅಭಿನಂದಿಸಿದ ಟ್ರಂಪ್!


ಇಂಥದ್ದೊಂದು ಫೇಕ್ ಟ್ವೀಟ್ ಟ್ವೀಟಿಗರನ್ನು ನಗೆಯ ಕಡಲಲ್ಲಿ ಮುಳುಗಿಸಿದೆ.

ಖಡಕ್ ಹಿಂದುತ್ವ ಪ್ರತಿಪಾದಕ ಯೋಗಿ ಉತ್ತರ ಪ್ರದೇಶದ 21ನೇ ಮುಖ್ಯಮಂತ್ರಿಯನ್ನಾಗಿ ಭಾನುವಾರ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಆಗಲೇ #ಯೋಗಿ ಆದಿತ್ಯನಾಥ್ ಟ್ರೆಂಡ್ ಆಗಿದ್ದು, ವಿನ್ ಡೀಸೆಲ್‌ಗೆ ಸಾಮ್ಯತೆ ಇರುವ ಬಗ್ಗೆಯೂ ಟ್ವೀಟಿಗರು ಯೋಗಿ ಅವರ ಕಾಲೆಳೆದಿದ್ದರು. ಇದೇ ಸಂದರ್ಭದಲ್ಲಿ ಟ್ರಂಪ್ ಯೋಗಿಯನ್ನು ಅಭಿನಂದಿಸಿರುವ ಟ್ವೀಟ್ ಸಹ ಸಿಕ್ಕಾಪಟ್ಟೆ ಫೇಮಸ್ ಆಯಿತು.

Wait!!! Donald Trump has something to say... #MandurVahiBanayenge #VikasPathPeYogi #YogiAdityanath pic.twitter.com/vsk93Cy7lE — Akul Shukla (@shuklaakul) 19 March 2017 ಟ್ರಂಪ್ ಅವರ ಟ್ವೀಟನ್ನು ಫೋಟೋ ಶಾಪ್ ಮಾಡಿ ಪೋಸ್ಟ್ ಮಾಡಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಮುಸ್ಲಿಂ ದೇಶಗಳಿಗೆ ಟ್ರಂಪ್ ನಿರ್ಬಂಧ ಹೇರಿದ್ದನ್ನು ಹೊಗಳಿದ ರಾಜಕಾರಣಿಗಳಲ್ಲಿ ಯೋಗಿಯೂ ಒಬ್ಬರು. ಈ ಹಿನ್ನೆಲೆಯಲ್ಲಿ ಇಂಥದ್ದೊಂದು ಟ್ವೀಟ್ ಜನಮನ್ನಣೆ ಗಳಿಸಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ