ಆ್ಯಪ್ನಗರ

ಮಸೂದ್ ಅಜರ್‌ ಬೆಂಬಲಿಸುವ ಚೀನಾದ ಬೂಟಾಟಿಕೆಗೆ ಹರಿಹಾಯ್ದ ಅಮೆರಿಕ

ಎರಡು ವಾರಗಳ ಹಿಂದೆ ಮಂಡಿಸಿದ್ದ ಇದೇ ನಿರ್ಣಯವನ್ನು ಚೀನಾ ತಡೆ ಹಿಡಿದಿತ್ತು. ಆ ಬಗ್ಗೆ ಚೀನಾವನ್ನು ವಿಶ್ವ ಸಮುದಾಯ ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಅದಾಗಿ ಎರಡೇ ವಾರದಲ್ಲಿ ಅಮೆರಿಕ ಮತ್ತೊಮ್ಮೆ ಈ ನಿರ್ಣಯ ಮಂಡಿಸಿದೆ. 'ಮುಸ್ಲಿಮರ ಬಗ್ಗೆ ಚೀನಾದ ನಾಚಿಕೆಗೇಡಿನ ಬೂಟಾಟಿಕೆ ಇಡೀ ಜಗತ್ತಿಗೇ ಗೊತ್ತಿದೆ. ಚೀನಾ ತನ್ನ ನೆಲದಲ್ಲಿ ಲಕ್ಷಾಂತರ ಮುಸ್ಲಿಮರ ಮೇಲೆ ಹೀನಾಯ ದೌರ್ಜನ್ಯ ನಡೆಸುತ್ತಿದೆ. ಇನ್ನೊಂದೆಡೆ ಹಿಂಸಾತ್ಮಕ ಉಗ್ರಗಾಮಿ ಸಂಘಟನೆಗಳ ಮೇಲೆ ವಿಶ್ವಸಂಸ್ಥೆ ನಿಷೇಧ ಹೇರುವುದನ್ನು ತಡೆಯುತ್ತಿದೆ' ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಟ್ವೀಟ್ ಮಾಡಿದ್ದಾರೆ.

Vijaya Karnataka Web 29 Mar 2019, 9:11 pm
ಹೊಸದಿಲ್ಲಿ: ಜೈಷೆ ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್‌ನನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಿಸುವ ಕರಡು ನಿರ್ಣಯವನ್ನು ಅಮೆರಿಕ ಮತ್ತೊಮ್ಮೆ 15 ಸದಸ್ಯರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಂಡಿಸಿದೆ. ಇದನ್ನು ಯುಕೆ ಮತ್ತು ಫ್ರಾನ್ಸ್ ಬೆಂಬಲಿಸಿವೆ.
Vijaya Karnataka Web Masood Azar


ಎರಡು ವಾರಗಳ ಹಿಂದೆ ಮಂಡಿಸಿದ್ದ ಇದೇ ನಿರ್ಣಯವನ್ನು ಚೀನಾ ತಡೆ ಹಿಡಿದಿತ್ತು. ಆ ಬಗ್ಗೆ ಚೀನಾವನ್ನು ವಿಶ್ವ ಸಮುದಾಯ ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಅದಾಗಿ ಎರಡೇ ವಾರದಲ್ಲಿ ಅಮೆರಿಕ ಮತ್ತೊಮ್ಮೆ ಈ ನಿರ್ಣಯ ಮಂಡಿಸಿದೆ.

ಭದ್ರತಾ ಮಂಡಳಿಯ ಪ್ರತಿಯೊಬ್ಬ ಸದಸ್ಯನೂ ನಿರ್ಣಯವನ್ನು ಬೆಂಲಿಸಿದ್ದರೆ, ಚೀನಾ ಮಾತ್ರ ತಾನಿನ್ನೂ ಆ ಬಗ್ಗೆ ಅಧ್ಯಯನ ನಡೆಸಬೇಕಿದೆ ಎಂಬ ನೆಪವೊಡ್ಡಿ ತಡೆ ಹಿಡಿದಿತ್ತು.

ಚೀನಾ ಉಯಿಗುರ್ ಮುಸ್ಲಿಮರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಎಂದು ಆರೋಪಿಸುತ್ತಲೇ ಅಜರ್ ನಿಷೇಧಕ್ಕೆ ತಡೆಯೊಡ್ಡುತ್ತಿರುವುದಕ್ಕೆ ಅಮೆರಿಕ ಆಕ್ರೋಶ ವ್ಯಕ್ತಪಡಿಸಿತ್ತು.

'ಮುಸ್ಲಿಮರ ಬಗ್ಗೆ ಚೀನಾದ ನಾಚಿಕೆಗೇಡಿನ ಬೂಟಾಟಿಕೆ ಇಡೀ ಜಗತ್ತಿಗೇ ಗೊತ್ತಿದೆ. ಚೀನಾ ತನ್ನ ನೆಲದಲ್ಲಿ ಲಕ್ಷಾಂತರ ಮುಸ್ಲಿಮರ ಮೇಲೆ ಹೀನಾಯ ದೌರ್ಜನ್ಯ ನಡೆಸುತ್ತಿದೆ. ಇನ್ನೊಂದೆಡೆ ಹಿಂಸಾತ್ಮಕ ಉಗ್ರಗಾಮಿ ಸಂಘಟನೆಗಳ ಮೇಲೆ ವಿಶ್ವಸಂಸ್ಥೆ ನಿಷೇಧ ಹೇರುವುದನ್ನು ತಡೆಯುತ್ತಿದೆ' ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಟ್ವೀಟ್ ಮಾಡಿದ್ದಾರೆ.

ಉಯಿಗುರ್ ಮುಸ್ಲಿಮರ ವಿಚಾರವನ್ನು ಬಳಸಿಕೊಂಡು ಭಾರತ 2016ರಲ್ಲೇ ಚೀನಾದ ವಿರುದ್ಧ ಹರಿಹಾಯ್ದಿತ್ತು. ಇದೀಗ ಅಮೆರಿಕ ಕೂಡ ಅದೇ ವಿಚಾರ ಎತ್ತಿಕೊಂಡು ಚೀನಾದ ವಿರುದ್ಧ ವಾಗ್ದಾಳಿ ನಡೆಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ