ಆ್ಯಪ್ನಗರ

ಉತ್ತರ ಪ್ರದೇಶ: 50ಕ್ಕೂ ಹೆಚ್ಚು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಕಿರಿಯ ಎಂಜಿನಿಯರ್‌ ಅರೆಸ್ಟ್‌

ಉತ್ತರ ಪ್ರದೇಶದ ನೀರಾವಳಿ ಇಲಾಖೆಯ ಕಿರಿಯ ಎಂಜಿನಿಯರ್‌ನಿಂದ 8 ಲಕ್ಷ ರೂ. ಲ್ಯಾಪ್‌ಟಾಪ್‌, ಮೊಬೈಲ್‌ ಫೋನ್‌, ವೆಬ್‌ ಕ್ಯಾಮರಾ, ಪೆನ್‌ ಡ್ರೈವ್‌, ಮೆಮೊರಿ ಕಾರ್ಡ್‌ ಸೇರಿದಂತೆ ಹಲವಾರು ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ.

Vijaya Karnataka Web 17 Nov 2020, 11:26 pm
ಲಖನೌ: ಅಪ್ರಾಪ್ತ ವಯಸ್ಸಿನವರ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಉತ್ತರ ಪ್ರದೇಶದ ಕಿರಿಯ ಎಂಜಿನಿಯರ್‌ ಒಬ್ಬರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
Vijaya Karnataka Web ಕಿರಿಯ ಎಂಜಿನಿಯರ್‌ ಬಂಧನ
ಕಿರಿಯ ಎಂಜಿನಿಯರ್‌ ಬಂಧನ


ಕಳೆದ 10 ವರ್ಷಗಳಲ್ಲಿ 50ಕ್ಕೂ ಹೆಚ್ಚು ಮಕ್ಕಳು ಮೇಲೆ ಈ ಕಿರಿಯ ಎಂಜಿನಿಯರ್‌ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಮಕ್ಕಳ ಮೇಲಿನ ಶೋಷಣೆಯನ್ನು ವಿಡಿಯೋ ಮಾಡಿ, ಫೋಟೋ ತೆಗೆದು ಮಾರಾಟ ಕೂಡ ಮಾಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೀರಾವರಿ ಇಲಾಖೆಯ ಈ ಕಿರಿಯ ಎಂಜಿನಿಯರ್‌ನಿಂದ 8 ಲಕ್ಷ ರೂ. ಲ್ಯಾಪ್‌ಟಾಪ್‌, ಮೊಬೈಲ್‌ ಫೋನ್‌, ವೆಬ್‌ ಕ್ಯಾಮರಾ, ಪೆನ್‌ ಡ್ರೈವ್‌, ಮೆಮೊರಿ ಕಾರ್ಡ್‌ ಸೇರಿದಂತೆ ಹಲವಾರು ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ.

5 ರಿಂದ 16 ವರ್ಷದ ಪ್ರಾಯದ ಮಕ್ಕಳ ಮೇಲೆ ಈ ಕಿರಿಯ ಎಂಜಿನಿಯರ್ ಲೈಂಗಿಕ ಶೋಷಣೆ ಮಾಡಿದ್ದಾನೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ