ಆ್ಯಪ್ನಗರ

ಶೀಘ್ರದಲ್ಲೇ ತಾಜ್‌ ಮಹಲ್‌ಗೂ ಮೆಟ್ರೋದಲ್ಲೇ ಹೋಗಬಹುದು!

ಆಗ್ರಾ ಮೆಟ್ರೋ ಯೋಜನೆಯು ತಾಜ್‌ ಮಹಲ್‌, ಆಗ್ರಾ ಫೋರ್ಟ್‌, ಸಿಕಂದರಾ ಮುಂತಾದ ಪ್ರವಾಸಿ ತಾಣಗಳಿಗೂ ಸಂಪರ್ಕ ಒದಗಿಸುವುದರಿಂದ ಪ್ರವಾಸಿಗರಿಗೆ ಸಂತಸದ ಸುದ್ದಿಯಾಗಿದೆ.

Times Now 7 Jun 2019, 11:40 am
ಹೊಸದಿಲ್ಲಿ: ಉತ್ತರ ಪ್ರದೇಶದಲ್ಲಿ ಪ್ರಮುಖ ನಗರಗಳಿಗೆ ಮೆಟ್ರೋ ಸೇವೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಉತ್ತರ ಪ್ರದೇಶ ಮೆಟ್ರೋ ರೈಲ್‌ ಕಾರ್ಪೋರೇಶನ್‌(ಯುಪಿಎಂಆರ್‌ಸಿಎಲ್‌) ಮಹತ್ವದ ಯೋಜನೆ ರೂಪಿಸುತ್ತಿದೆ. ಶಿಘ್ರದಲ್ಲೇ ದಿಲ್ಲಿಯಿಂದ ಆಗ್ರಾದ ತಾಜ್‌ ಮಹಲ್‌ಗೂ ಮೆಟ್ರೋಲ್‌ದಲ್ಲೇ ಭೇಟಿ ನೀಡಬಹುದಾದ ದಿನಗಳು ಆಗಮಿಸಲಿವೆ.
Vijaya Karnataka Web Delhi Metro


ಈಗಾಗಲೇ ಕೇಂದ್ರ ಸಂಪುಟ ಆಗ್ರಾ ಮತ್ತು ಕಾನ್ಪುರ ಮೆಟ್ರೋ ರೈಲು ಯೋಜನೆಗೆ ಅಸ್ತು ಎಂದಿದೆ. ಪ್ರಸ್ತುತ ನೋಯ್ಡಾ ಮೆಟ್ರೋ ರೈಲ್‌ ಕಾರ್ಪುರೇಶನ್‌ ನೋಯ್ಡಾ-ಗ್ರೇಟರ್‌ ನೋಯ್ಡಾ ನಡುವೆ ಸಂಚಾರ ಸೇವೆ ಒದಗಿಸುತ್ತಿದೆ. ಆಗ್ರಾ ಮತ್ತು ಕಾನ್ಪುರ ಮೆಟ್ರೋ ಯೋಜನೆ ಶೀಘ್ರದಲ್ಲೇ ಆರಂಭಗೊಳ್ಳಲಿದೆ. ಒಟ್ಟಾರೆ ಯುಪಿಎಂಆರ್‌ಸಿ ಹಮ್ಮಿಕೊಂಡಿರುವ ಯೋಜನೆ ಪ್ರಕಾರ ಲಖನೌ, ಘಾಜಿಯಾಬಾದ್‌, ನೋಯ್ಡಾ ಮತ್ತು ಗ್ರೇಟರ್‌ ನೋಯ್ಡಾ ನಗರಗಳಿಗೆ ಮೆಟ್ರೋ ಸಂಪರ್ಕ ಸಿಗಲಿದೆ.

ಆಗ್ರಾ ಮೆಟ್ರೋ ಯೋಜನೆಯು ತಾಜ್‌ ಮಹಲ್‌, ಆಗ್ರಾ ಫೋರ್ಟ್‌, ಸಿಕಂದರಾ ಮುಂತಾದ ಪ್ರವಾಸಿ ತಾಣಗಳಿಗೂ ಸಂಪರ್ಕ ಒದಗಿಸುವುದರಿಂದ ಪ್ರವಾಸಿಗರಿಗೆ ಸಂತಸದ ಸುದ್ದಿಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ