ಆ್ಯಪ್ನಗರ

ರಾಮ ಮಂದಿರ ನಿರ್ಮಾಣಕ್ಕೆ ಶಿಯಾ ಮಂಡಳಿಯ ರಿಜ್ವಿಯಿಂದ 51,000 ರೂ ದೇಣಿಗೆ

ಉತ್ತರ ಪ್ರದೇಶ ಶಿಯಾ ಸೆಂಟ್ರಲ್‌ ವಕ್ಫ್ ಬೋರ್ಡ್‌ ಮುಖ್ಯಸ್ಥ ವಾಸಿಂ ರಿಜ್ವಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಘೋಷಿಸಿದ್ದಾರೆ. ಸುಪ್ರೀಂ ತೀರ್ಪು ಬಳಿಕ ಎಲ್ಲವೂ ಶಾಂತಿಯುತವಾಗಿದೆ. ರಾಮ ಮಂದಿರ ನಿರ್ಮಾಣ ನಮ್ಮ ಆಶಯ ಎಂದಿದ್ದಾರೆ.

Vijaya Karnataka Web 15 Nov 2019, 6:45 am
ಲಖನೌ: ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕೆ 51 ಸಾವಿರ ರೂ. ದೇಣಿಗೆ ನೀಡುವುದಾಗಿ ಉತ್ತರ ಪ್ರದೇಶ ಶಿಯಾ ಸೆಂಟ್ರಲ್‌ ವಕ್ಫ್ ಬೋರ್ಡ್‌ ಮುಖ್ಯಸ್ಥ ವಾಸಿಂ ರಿಜ್ವಿ ಘೋಷಿಸಿದ್ದಾರೆ.
Vijaya Karnataka Web wasim


ರಾಮ ಮಂದಿರ ನಿರ್ಮಾ­ಣಕ್ಕೆ ಟ್ರಸ್ಟ್‌ ರಚನೆ ಅಗತ್ಯವೇ ಇಲ್ಲ ಎಂದ ರಾಮ­ಜನ್ಮಭೂಮಿ ನ್ಯಾಸ್‌!

''ಸುಪ್ರೀಂ ಕೋರ್ಟ್‌ ತೀರ್ಪಿನಿಂದ ಅಯೋಧ್ಯೆ ಭೂ ವಿವಾದ ಶಾಂತಿಯುತವಾಗಿ ಇತ್ಯರ್ಥಗೊಂಡಿದೆ. ಆದಷ್ಟು ಬೇಗ ಶ್ರೀರಾಮಚಂದ್ರನ ಜನ್ಮಸ್ಥಾನದಲ್ಲಿಆತನಿಗೆ ಭವ್ಯ ರಾಮ ಮಂದಿರ ನಿರ್ಮಾಣವಾಗಬೇಕು ಎನ್ನುವುದು ನಮ್ಮ ಆಶಯವಾಗಿದೆ. ನಿರ್ಮಾಣ ಕಾಮಗಾರಿಗಳಿಗೆ ಪೂರ್ವ ಸಿದ್ಧತೆಗಳು ಆರಂಭಗೊಂಡಿದ್ದು ಇದಕ್ಕೆ 'ವಾಸಿಂ ರಿಜ್ವಿ ಫಿಲ್ಮ್ಸ್' ಸಂಸ್ಥೆ ವತಿಯಿಂದ 51 ಸಾವಿರ ರೂಪಾಯಿ ದೇಣಿಗೆ ನೀಡಲಾಗುವುದು,'' ಎಂದು ರಿಜ್ವಿ ಹೇಳಿದ್ದಾರೆ.

‘ಕೇವಲ ರಾಮಮಂದಿರ ನಿರ್ಮಾಣ ಹಿಂದುತ್ವವಲ್ಲ’- ಬಿಜೆಪಿ ವಿರುದ್ಧ ಶಿವಸೇನೆ ವಾಗ್ದಾಳಿ

ಅಯೋಧ್ಯೆಯಲ್ಲಿ ಹಿಂದೂಗಳು ಹಾಗೂ ಮುಸ್ಲಿಮರು ಸೌಹಾರ್ದತೆಯಿಂದ ಬದುಕು ಮುನ್ನಡೆಸುತ್ತಿರುವುದು ಖುಷಿಯ ವಿಚಾರ ಎಂದಿರುವ ಅವರು ರಾಮ ಮಂದಿರವು ಭಾರತದಲ್ಲಷ್ಟೇ ಅಲ್ಲ ವಿಶ್ವದಾದ್ಯಂತ ಇರುವ ರಾಮಭಕ್ತರಿಗೆ ಇದು ಹೆಮ್ಮೆಯ ವಿಷಯವಾಗಿದೆ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ