ಆ್ಯಪ್ನಗರ

ಗನ್‌, ಮದ್ಯ ಗ್ಲಾಸ್‌ ಹಿಡಿದು ಬಿಜೆಪಿ ಶಾಸಕನ ನೃತ್ಯದ ವೀಡಿಯೋ ವೈರಲ್‌

ಪ್ರಣವ್‌ ಚಾಂಪಿಯನ್‌ ವಿವಾದಗಳಿಗೆ ಹೆಸರುವಾಸಿಯಾಗಿದ್ದಾರೆ. ಈಗಾಗಲೇ ಹಲವಾರು ಬಾರಿ ಪಕ್ಷದ ಹಿರಿಯ ನಾಯಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೂ ಮತ್ತೊಮ್ಮೆ ವಿವಾದಕ್ಕೀಡಾಗಿದ್ದಾರೆ

Vijaya Karnataka Web 10 Jul 2019, 8:39 pm
ಡೆಹರಾಡೂನ್‌: ವಿವಾದಗಳ ಸುಳಿಯಲ್ಲಿ ಸಿಲುಕಿರುವ ಉತ್ತರಾಖಂಡದ ಬಿಜೆಪಿ ಶಾಸಕ ಪ್ರಣವ್‌ ಚಾಂಪಿಯನ್‌ ಈಗ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ.
Vijaya Karnataka Web ಗನ್‌ ಹಿಡಿದ ಶಾಸಕ
ಗನ್‌ ಹಿಡಿದ ಶಾಸಕ


ಎರಡು ಕೈಯಲ್ಲಿ ಗನ್, ಮದ್ಯದ ಗ್ಲಾಸು ಹಿಡಿದು ಡ್ಯಾನ್ಸ್‌ ಮಾಡುತ್ತಿರುವ ಪ್ರಣವ್‌ ಚಾಂಪಿಯನ್‌ ವೀಡಿಯೋ ವೈರಲ್ ಆಗಿದೆ.

ಕೈಯಲ್ಲಿ ಗನ್‌ ಹಿಡಿದು ಅಶ್ಲೀಲ ಪದ ಹೇಳುತ್ತಾ, ಡ್ಯಾನ್ಸ್‌ ಮಾಡುತ್ತಿದ್ದಾರೆ.


ಶಾಸಕರ ಜತೆ ಕೆಲವು ಸಹಚರರು ಹೆಜ್ಜೆ ಹಾಕಿದ್ದಾರೆ.

ವೀಡಿಯೋ ವೈರಲ್ ಆಗುತ್ತಿದ್ದಂತೆ ಬಿಜೆಪಿ ನಾಯಕರು ಎಚ್ಚೆತ್ತುಕೊಂಡಿದ್ದಾರೆ. ಕೂಡಲೇ ಶಾಸಕನ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಶಾಸಕರು ಗನ್‌ಗೆ ಪರವಾನಗೆ ಹೊಂದಿದ್ದಾರೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲು ಮುಂದಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ