ಆ್ಯಪ್ನಗರ

ರಾಷ್ಟ್ರ ಮಾತೆ ಗೋವು ಮಸೂದೆ ಹೊರಡಿಸಿದ ಮೊದಲ ರಾಜ್ಯ ಉತ್ತರಾಖಂಡ

ರಾಷ್ಟ್ರ ಮಾತೆ ಗೋವು ಎಂಬ ಮಸೂದೆಯನ್ನು ಹೊರಡಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಉತ್ತರಾಖಂಡ ಪಾತ್ರವಾಗಿದೆ. ರಾಜ್ಯ ಸಂಪುಟದಲ್ಲಿ ಬುಧವಾರ 'ರಾಷ್ಟ್ರ ಮಾತೆ ಗೋವು' ಎಂಬ ನಿರ್ಣಯವನ್ನು ಹೊರಡಿಸಲಾಗಿದ್ದು, ಸಮ್ಮತಿಗೆ ಕೇಂದ್ರಕ್ಕೆ ಮನವಿ ಮಾಡಿದೆ.

TOI.in 20 Sep 2018, 12:23 pm
ಡೆಹರಾಡೂನ್‌: ರಾಷ್ಟ್ರ ಮಾತೆ ಗೋವು ಎಂಬ ಮಸೂದೆಯನ್ನು ಹೊರಡಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಉತ್ತರಾಖಂಡ ಪಾತ್ರವಾಗಿದೆ. ರಾಜ್ಯ ಸಂಪುಟದಲ್ಲಿ ಬುಧವಾರ 'ರಾಷ್ಟ್ರ ಮಾತೆ ಗೋವು' ಎಂಬ ನಿರ್ಣಯವನ್ನು ಹೊರಡಿಸಲಾಗಿದ್ದು, ಸಮ್ಮತಿಗೆ ಕೇಂದ್ರಕ್ಕೆ ಮನವಿ ಮಾಡಿದೆ.
Vijaya Karnataka Web Cow


ಉತ್ತರಾಖಂಡ ವಿಧಾನಸಭೆಯಲ್ಲಿ ಪಶು ಸಂಗೋಪನಾ ಸಚಿವೆ ರೇಖಾ ಆರ್ಯಾ ರಾಷ್ಟ್ರ ಮಾತೆ ಗೋವು ಎಂದು ಪರಿಗಣಿಸುವ ನಿರ್ಣಯವನ್ನು ಮಂಡನೆ ಮಾಡಿದರು.
ಆಡಳಿತ ಪಕ್ಷದವರೇ ಆಗಲಿ, ವಿಪಕ್ಷದವರೇ ಆಗಲಿ ಗೋವುಗಳ ಪ್ರಾಮುಖ್ಯತೆ ಏನು ಎಂಬುದನ್ನು ಅರಿತುಕೊಳ್ಳಬೇಕು. ಭಾರತದಲ್ಲಿ ಮಾತ್ರವಲ್ಲ ಬೇರೆ ರಾಷ್ಟ್ರಗಳಲ್ಲು ಗೋವಿಗೆ ಮಹತ್ವ ನೀಡಲಾಗುತ್ತಿದೆ ಎಂದು ಸಚಿವೆ ರೇಖಾ ತಿಳಿಸಿದ್ದಾರೆ.

ಗೋವಿನ ದೇಹದಲ್ಲಿ 33 ಕೋಟಿ ದೇವರು ನೆಲೆಸಿದ್ದಾರೆ ಎಂಬ ನಂಬಿಕೆಯನ್ನು ಹೊಂದಿರುವ ಬಗ್ಗೆಯೂ ಸಂಪುಟದಲ್ಲಿ ವಿವರಿಸಿದರು.

ನಾವೆಲ್ಲರೂ ಗೋವುಗಳನ್ನು ಗೌರವಿಸುತ್ತೇವೆ. ಆದರೆ ಬಿಜೆಪಿ ಅದನ್ನು ರಾಷ್ಟ್ರ ಮಾತೆ ಎಂದು ಬಿಂಬಿಸುವ ಮೂಲಕ ಯಾವ ಸಂದೇಶವನ್ನು ಸಾರಲು ಪ್ರಯತ್ನಿಸುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ. ರಾಜ್ಯದಲ್ಲಿರುವ ಗೋಮಾಳಗಳು ಅತ್ಯಂತ ಕಳಪೆ ಗುಣಮಟ್ಟದಲ್ಲಿವೆ. ರಾಜ್ಯದಲ್ಲಿ ಪಶುವೈದ್ಯರ ಕೊರತೆಯೂ ಇದೆ ಎಂದು ವಿಪಕ್ಷ ನಾಯಕಿ ಇಂದಿರಾ ಹೃದಯೇಶ್‌ ತಿಳಿಸಿದ್ದಾರೆ.

ಇಂತಹ ನಿರ್ಣಯವನ್ನು ತರುವ ಬದಲು ಕರುಗಳನ್ನು ಕೊಲ್ಲದಿರುವಂತಹ ಕಠಿಣ ಕ್ರಮಗಳನ್ನು ತರಬಹುದು. ಉತ್ತಮ ಗೋಮಾಳ, ಪಶು ಅಭಿವೃದ್ಧಿ ಕ್ರಮಗಳನ್ನು ಕೈಗೊಳ್ಳಬಹುದು ಎಂದು ಇಂದಿರಾ ಸಲಹೆ ನೀಡಿದ್ದಾರೆ.

ಕಾಂಗ್ರೆಸ್‌ ಶಾಸಕರು ಈ ನಿರ್ಣಯಕ್ಕೆ ವಿರೋಧ ವ್ಯಕ್ತ ಪಡಿಸಿದ್ದು, ಎಲ್ಲವೂ ರಾಜಕೀಯ ಪ್ರೇರಿತವಾಗಿವೆ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ