ಆ್ಯಪ್ನಗರ

ಸ್ವಂತ ಮಗನಂತೆ ಸಾಕಿದ ನಾಯಿಯ ಸ್ಮಾರಕಕ್ಕೆ ಭೇಟಿ ನೀಡುವ ಬಿಲ್ಡರ್‌

ನಾನು ಹೊರಗೆ ಹೋಗುವಾಗ ನನ್ನ ಬೈಕ್‌ ಮೇಲೆ ಹತ್ತಿ ಹಿಂದೆ ಕುಳಿತುಕೊಳ್ಳುತ್ತಿತ್ತು, ನಡೆದು ಹೋಗುವಾಗ ಹಿಂಬಾಲಿಸುತ್ತಿತ್ತು ಎಂದು ಪ್ರಶಾಂತ್‌ ನೆನಪು ಮಾಡಿಕೊಂಡಿದ್ದಾರೆ.

TOI.in 12 Jun 2019, 10:52 am
ವಡೋದರಾ: ಸಾಮಾನ್ಯವಾಗಿ ಎಲ್ಲರು ಬೆಳಗ್ಗೆ ಎದ್ದು ಸ್ನಾನ ಮಾಡಿ ದೇವಸ್ಥಾನಕ್ಕೆ ತೆರಳಿದರೆ ಗುಜರಾತ್‌ನ ಬಿಲ್ಡರ್‌ ಒಬ್ಬರು ಪ್ರತಿದಿನ 12 ವರ್ಷಗಳ ಹಿಂದೆ ಅಗಲಿದ ನಾಯಿಯ ಸಮಾಧಿಗೆ ಹೋಗಿ ಗೌರವ ನಮನ ಸಲ್ಲಿಸುತ್ತಿದ್ದಾರೆ.
Vijaya Karnataka Web Prashanth


ಬಿಲ್ಡರ್‌ ಪ್ರಶಾಂತ್‌ ಹಡಗಲ್ಕರ್‌ ಸಾಕಿದ್ದ ಪ್ರೀತಿಯ ನಾಯಿ ಟೋನಿ ವಯೋಸಹಜವಾಗಿ 12 ವರ್ಷಗಳ ಹಿಂದೆ ವಿಧಿವಶವಾಗಿತ್ತು. ಟೋನಿ ಪ್ರಸಿದ್ಧ ತಳಿಗೆ ಸೇರಿದ ನಾಯಿಯೇನಲ್ಲ. ಬೀದಿ ನಾಯಿಯನ್ನು ಮನೆಗೆ ತಂದು ಸಾಕಿಕೊಂಡಿದ್ದರು.

ಸುಮಾರು 1995ರ ಸಮಯವದು. ಫತೇಪುರದ ಕೊಯಿಲಿಫಾಲಿಯಾದಲ್ಲಿದ್ದ ನಮ್ಮ ಮನೆಯ ಮುಂದೆ ನಾಯಿ ಮರಿ ಕುಳಿತುಕೊಂಡಿತ್ತು. ಹಾಲು ಮತ್ತು ಆಹಾರ ಕೊಡುತ್ತಿದ್ದೆವು. ಓಂದು ಸಡನ್‌ ಆಗಿ ಕಾಣೆಯಾಗಿತ್ತು. ಕೆಲವು ತಿಂಗಳ ನಂತರ ಪಕ್ಕದ ಮನೆಯ ಆಟೋರಿಕ್ಷಾ ಚಾಲಕ ಛನಿಗೆ ಹೋಗಿದ್ದಾಗ ನಾಯಿ ಪತ್ತೆಯಾಯಿತು. ಚಾಲಕನನ್ನು ಗುರುತಿಸಿ ಆಟೋರಿಕ್ಷಾದ ಒಳಗೆ ಬಂದು ಕುಳಿತುಕೊಂಡಿತು. ಹಾಗೆ ನಮ್ಮ ಮನೆಗೆ ವಾಪಾಸಾಯಿತು ಎಂದು ಪ್ರಶಾಂತ್‌ ಟೈಮ್ಸ್‌ ಆಫ್‌ ಇಂಡಿಯಾಗೆ ತಿಳಿಸಿದ್ದಾರೆ.

ನಾನು ಯಾವತ್ತು ಟೋನಿಗೆ ನೋವು ಮಾಡಿಲ್ಲ. ಅದು ನಮ್ಮ ಸ್ವಂತ ಮಗನಂತೆ ಇತ್ತು. ನಾವೇನು ಅದಕ್ಕೆ ತರಬೇತಿ ನೀಡಿಲ್ಲ. ಮನೆಯನ್ನು ಗಲೀಜು ಮಾಡುತ್ತಿರಲಿಲ್ಲ. ನನ್ನನ್ನು ಬಿಟ್ಟಿರುತ್ತಿರಲಿಲ್ಲ. ನಾನು ಹೊರಗೆ ಹೋಗುವಾಗ ನನ್ನ ಬೈಕ್‌ ಮೇಲೆ ಹತ್ತಿ ಹಿಂದೆ ಕುಳಿತುಕೊಳ್ಳುತ್ತಿತ್ತು, ನಡೆದು ಹೋಗುವಾಗ ಹಿಂಬಾಲಿಸುತ್ತಿತ್ತು ಎಂದು ಪ್ರಶಾಂತ್‌ ನೆನಪು ಮಾಡಿಕೊಂಡಿದ್ದಾರೆ.

2007ರಲ್ಲಿ ಟೋನಿ ವಯೋಸಹಜವಾಗಿ ನಮ್ಮನ್ನು ಅಗಲಿದಾಗ ಖಾಸ್ವಾಡಿ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಿ ಸಮಾಧಿ ನಿರ್ಮಿಸಿದ್ದೇವೆ. ದಿನದ ಆರಂಭ ಎಂಬಂತೆ ಮೊದಲು ಸಮಾಧಿಗೆ ಹೋಗಿ ಹೂಗಳನ್ನು ಅರ್ಪಿಸಿ ಇತರ ಬೀದಿ ನಾಯಿಗಳಿಗೆ ಮತ್ತು ಪ್ರಾಣಿ ಪಕ್ಷಿಗಳಿಗೆ ಆಹಾರ ಅರ್ಪಿಸಿ ಬರುತ್ತೇನೆ. ನಂತರ ದೇವಸ್ಥಾನಕ್ಕೆ ಹೋಗುತ್ತೇನೆ ಎಂದು ಪ್ರಶಾಂತ್‌ ತಮ್ಮ ದೈನಂದಿನ ಆಚರಣೆ ಬಗ್ಗೆ ವಿವರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ