ಆ್ಯಪ್ನಗರ

ಪಟಾಕಿಗಿಂತಲೂ ವಾಹನಗಳಿಂದ ಅತಿಹೆಚ್ಚು ಮಾಲಿನ್ಯ: ಸುಪ್ರೀಂ ಕೋರ್ಟ್‌ ಕಳವವಳ

ಪಟಾಕಿಗಳಿಗಿಂತಲೂ ವಾಹನಗಳು ಉಗುಳುವ ಹೊಗೆಯಿಂದಲೇ ಅತ್ಯಧಿಕ ಪರಿಸರ ಮಾಲಿನ್ಯ ಉಂಟಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ...

Vijaya Karnataka 12 Mar 2019, 10:00 pm
ಹೊಸದಿಲ್ಲಿ: ಪಟಾಕಿಗಳಿಗಿಂತಲೂ ವಾಹನಗಳು ಉಗುಳುವ ಹೊಗೆಯಿಂದಲೇ ಅತ್ಯಧಿಕ ಪರಿಸರ ಮಾಲಿನ್ಯ ಉಂಟಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ.
Vijaya Karnataka Web vahicle


''ಪರಿಸರ ಮಾಲಿನ್ಯದ ವಿಷಯ ಬಂದಾಗ ಪಟಾಕಿ ಕಾರ್ಖಾನೆಗಳ ಮಾತ್ರ ಏಕೆ ಬೊಟ್ಟು ಮಾಡಬೇಕು? ವಾಸ್ತವವಾಗಿ ಪರಿಸರ ಮಾಲಿನ್ಯಕ್ಕೆ ವಾಹನಗಳ ಕೊಡುಗೆಯೇ ಅಧಿಕವಾಗಿದೆ,'' ಎಂದು ಹೇಳಿರುವ ನ್ಯಾಯಾಲಯ, ಪಟಾಕಿ ಕಾರ್ಖಾನೆಗಳನ್ನು ಮುಚ್ಚುವುದರಿಂದ ಅವುಗಳ ತಯಾರಿಕೆ ಮತ್ತು ಮಾರಾಟದಲ್ಲಿ ತೊಡಗಿರವವರು ಅನುಭವಿಸುವ ನಿರುದ್ಯೋಗ ಸಮಸ್ಯೆ ಬಗ್ಗೆಯೂ ಕಳವಳ ವ್ಯಕ್ತಪಡಿಸಿದೆ.

ಇದೆ ವೇಳೆ, ಪಟಾಕಿ ಮತ್ತು ವಾಹನಗಳಿಂದ ಆಗುತ್ತಿರುವ ಪರಿಸರ ಮಾಲಿನ್ಯದ ಬಗ್ಗೆ ತುಲನಾತ್ಮಕ ಅಧ್ಯಯನವೇನಾದರೂ ನಡೆಸಲಾಗಿದೆಯೇ ಎಂದು ಕೇಂದ್ರ ಸರಕಾರವನ್ನು ನ್ಯಾ. ಎಸ್‌.ಎ ಬೊಬ್ಡೆ ಮತ್ತು ಎಸ್‌.ಎ. ನಜೀರ್‌ ಅವರನ್ನೊಳಗೊಂಡ ನ್ಯಾಯಪೀಠ ಪ್ರಶ್ನಿಸಿದೆ.

''ಪಟಾಕಿ ಕಾರ್ಖಾನೆಗಳ ಮೇಲೆ ನಿರ್ಬಂಧ ವಿಧಿಸಿ ನಿರುದ್ಯೋಗ ಸೃಷ್ಟಿಸುವುದು, ಕಾರ್ಮಿಕರನ್ನು ಹಸಿವೆಗೆ ದೂಡುವುದು ನಮಗೆ ಇಷ್ಟವಿಲ್ಲ. ಅತ್ಯಧಿಕ ಪರಿಸರ ಮಾಲಿನ್ಯ ಉಂಟಾಗುವುದು ಮೋಟಾರು ವಾಹನಗಳಿಂದಲೋ ಅಥವಾ ಪಟಾಕಿ ಸುಡುವುದರಿಂದಲೋ ಎಂಬುದರ ತುಲನಾತ್ಮಕ ಮತ್ತು ವೈಜ್ಞಾನಿಕ ಅಧ್ಯಯನ ನಡೆಸಬೇಕು. ಜತೆಗೆ ಪಟಾಕಿಗೆ ನಿರ್ಬಂಧ ವಿಧಿಸಿದರೆ ನಿರುದ್ಯೋಗವನ್ನು ತಡೆಯುವ ಮಾರ್ಗವನ್ನೂ ಸೂಚಿಸಬೇಕು,'' ಎಂದು ಕೇಂದ್ರ ಸರಕಾರದ ಪರ ವಿಚಾರಣೆಗೆ ಹಾಜರಾದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎ.ಎನ್‌.ಎಸ್‌ ನಾಡಕರ್ಣಿ ಅವರಿಗೆ ನ್ಯಾಯಪೀಠ ಸೂಚಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ