ಆ್ಯಪ್ನಗರ

ಪಾಕ್‌ಗೆ 1971ರ ದಾಳಿ ಮರೆತಿರಬೇಕು, ನೆನಪಿಸಿಕೊಂಡರೆ ಉತ್ತಮ: ನಾಯ್ಡು

ಭಾರತದ ಮೇಲೆ ಸದಾ ಯುದ್ದ ಸಾರುತ್ತಿರುವ ಪಾಕಿಸ್ತಾನಕ್ಕೆ ಆಡಳಿತಾರೂಢ ಎನ್‌ಡಿಎ ಪಕ್ಷದ ಉಪ ರಾಷ್ಟ್ರಪತಿ ಅಭ್ಯರ್ಥಿ ವೆಂಕಯ್ಯನಾಯ್ಡು ಎಚ್ಚರಿಕೆ ನೀಡಿದ್ದು, 1971ರ ಯುದ್ಧವನ್ನು ನೆನಪಿಟ್ಟುಕೊಳ್ಳಿ ಎಂದು ಹೇಳಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 23 Jul 2017, 5:38 pm
ಹೊಸದಿಲ್ಲಿ: ಭಾರತದ ಮೇಲೆ ಸದಾ ಯುದ್ದ ಸಾರುತ್ತಿರುವ ಪಾಕಿಸ್ತಾನಕ್ಕೆ ಆಡಳಿತಾರೂಢ ಎನ್‌ಡಿಎ ಪಕ್ಷದ ಉಪ ರಾಷ್ಟ್ರಪತಿ ಅಭ್ಯರ್ಥಿ ವೆಂಕಯ್ಯನಾಯ್ಡು ಎಚ್ಚರಿಕೆ ನೀಡಿದ್ದು, 1971ರ ಯುದ್ಧವನ್ನು ನೆನಪಿಟ್ಟುಕೊಳ್ಳಿ ಎಂದು ಹೇಳಿದ್ದಾರೆ.
Vijaya Karnataka Web venkaiah naidus warning to pakistan on terror recall what happened in 1971
ಪಾಕ್‌ಗೆ 1971ರ ದಾಳಿ ಮರೆತಿರಬೇಕು, ನೆನಪಿಸಿಕೊಂಡರೆ ಉತ್ತಮ: ನಾಯ್ಡು


ಕಾರ್ಗಿಲ್ ಪರಾಕ್ರಮ ಪರೇಡ್ ಕಾರ್ಯಕ್ರಮದಲ್ಲಿ ಮಾತನಾಡಿರುವ ನಾಯ್ಡು, ಭಯೋತ್ಪಾದನೆಗೆ ಉತ್ತೇಜಿಸುತ್ತಿರುವ ಪಾಕ್‌, 1971ರಲ್ಲಿ ಬಾಂಗ್ಲದೇಶ ವಿಮಾಚನಾ ಯುದ್ಧವನ್ನು ಮತ್ತೆ ನೆನೆಸಿಕೊಳ್ಳಬೇಕಿದೆ. ಭಯೋತ್ಪಾದನೆಗೆ ಧರ್ಮ ಹಾಗೂ ಜಾತಿಯಿಲ್ಲ. ದುರಾದೃಷ್ಟವೆಂದರೆ ಇಂತಹ ಭಯೋತ್ಪಾದನೆಯೇ ಪಾಕಿಸ್ತಾನದಲ್ಲಿ ರಾಷ್ಟ್ರನೀತಿಯಾಗಿದೆ ಹೋಗಿದೆ ಇದನ್ನು ಅವರೇ ಮಟ್ಟ ಹಾಕಬೇಕಿದೆ ಎಂದು ನಾಯ್ಡು ಹೇಳಿದ್ದಾರೆ.

'ಭಯೋತ್ಪಾದನೆಗೆ ನೆರವು ನೀಡುವುದು ಹಾಗೂ ಕುಮ್ಮಕ್ಕು ನೀಡುವುದರಿಂದ ನಮಗೇನೂ ನಷ್ಟವಾಗುವುದಿಲ್ಲ, ನಾವು ಶಾಂತಿಯನ್ನು ಪ್ರೀತಿಸುವ ಜನ. ಯಾವುದೇ ರಾಷ್ಟ್ರದ ಮೇಲೆ ದಾಳಿ ಮಾಡುವುದಿಲ್ಲ. ಇದು ನಮ್ಮ ವಿಶೇಷತೆ. ನಾವು ಯುದ್ಧವನ್ನು ಬಯಸುವುದಿಲ್ಲ. ಹಿಂಸಾಚಾರಗಳು ನಮಗೆ ಬೇಕಿಲ್ಲ. ನಮಗೆ ಶಾಂತಿ ಬೇಕು. ಆದರೆ ಸೈನಿಕರ ಮೇಲೆ ದಾಳಿ ನಡೆಸಿದರೆ ಪ್ರತ್ಯುತ್ತರೆ ಕೊಡದೇ ಸುಮ್ಮನಿರುವುದಿಲ್ಲ ಎಂದು ನಾಯ್ಡು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ