ಆ್ಯಪ್ನಗರ

ಪೊರಕೆಯನ್ನು ನೆಲಕ್ಕೆ ತಾಗಿಸದೆಯೇ ಕಸಗುಡಿಸಿದ ಹೇಮಾಮಾಲಿನಿ!

ಅವರು ಕಸಗುಡಿಸಿ ಸ್ವಚ್ಛಗೊಳಿಸಿದ ಪರಿ, ಅದಕ್ಕಾಗಿ ಸಜ್ಜಾಗಿ ಬಂದಿದ್ದ ರೀತಿಯನ್ನು ಕಂಡು ಎಲ್ಲರೂ ದಂಗಾದರು. ಕಪ್ಪು ಕನ್ನಡಕ ಧರಿಸಿ ಟಿಪ್‌ ಟಾಪ್‌ ಆಗಿ ಬಂದಿದ್ದ ಹೇಮಾಮಾಲಿನಿ, ಪೊರಕೆಯಿಂದ ಜೋರಾಗಿ ಗುಡಿಸಿದರೆ ನೆಲಕ್ಕೆ ನೋವಾಗುತ್ತದೆಯೇನೋ ಎಂಬಂತೆ ಕೆಲವು ಬಾರಿ ನಿಧಾನವಾಗಿ ಅತ್ತಿತ್ತ ಬೀಸಿದ್ದರು.

Agencies 14 Jul 2019, 5:00 am
ಹೊಸದಿಲ್ಲಿ: ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಹೊಲದಲ್ಲಿ ಟ್ರ್ಯಾಕ್ಟರ್‌ ಏರುವ ಮೂಲಕ ಟ್ರೋಲ್‌ಗೆ ಒಳಗಾಗಿದ್ದ ನಟಿ, ಬಿಜೆಪಿ ಸಂಸದೆ ಹೇಮಾಮಾಲಿನಿ ಮತ್ತೊಮ್ಮೆ ಸಾಮಾಜಿಕ ಜಾಲತಾಣದ ಟೀಕಾಕಾರರಿಗೆ ಆಹಾರವಾಗಿದ್ದಾರೆ. ಸಂಸತ್ತನ ಆವರಣದಲ್ಲಿ ಶನಿವಾರ ಸ್ವಚ್ಛವಾಗಿರುವ ನೆಲವನ್ನು ಗುಡಿಸಲು ಪೊರಕೆ ಹಿಡಿದುಬಂದು ಪೋಸ್‌ ನೀಡಿದ ಹೇಮಾಮಾಲಿನಿ ಅವರನ್ನು ಟ್ರೋಲಿಗರು ಹಿಗ್ಗಾಮುಗ್ಗಾ ಕಾಲೆಳೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ 'ಸ್ವಚ್ಛ ಭಾರತ ಅಭಿಯಾನ'ದಡಿ ಸಂಸದರು ಮತ್ತು ಸಚಿವರು ಶನಿವಾರ ಸಂಸತ್‌ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು. ಇದರ ಭಾಗವಾಗಿ ಹೇಮಾ ಮಾಲಿನಿ ಅವರೂ ಪೊರಕೆ ಹಿಡಿದು ನಿಂತರು. ಆದರೆ, ಅವರು ಕಸಗುಡಿಸಿ ಸ್ವಚ್ಛಗೊಳಿಸಿದ ಪರಿ, ಅದಕ್ಕಾಗಿ ಸಜ್ಜಾಗಿ ಬಂದಿದ್ದ ರೀತಿಯನ್ನು ಕಂಡು ಎಲ್ಲರೂ ದಂಗಾದರು. ಕಪ್ಪು ಕನ್ನಡಕ ಧರಿಸಿ ಟಿಪ್‌ ಟಾಪ್‌ ಆಗಿ ಬಂದಿದ್ದ ಹೇಮಾಮಾಲಿನಿ, ಪೊರಕೆಯಿಂದ ಜೋರಾಗಿ ಗುಡಿಸಿದರೆ ನೆಲಕ್ಕೆ ನೋವಾಗುತ್ತದೆಯೇನೋ ಎಂಬಂತೆ ಕೆಲವು ಬಾರಿ ನಿಧಾನವಾಗಿ ಅತ್ತಿತ್ತ ಬೀಸಿದ್ದರು. ಅವರ ಪೊರಕೆಯಿಂದ ಸ್ವಲ್ಪವೂ ಕಸ ಆಚೆ ಬರಲಿಲ್ಲ. ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಸೇರಿದಂತೆ ಇತರೆ ಸಂಸದರು ಪೊರಕೆಯಲ್ಲಿ ಕಸವನ್ನು ಸ್ವಚ್ಛಗೊಳಿಸುತ್ತಿದ್ದರೆ ಹೇಮಾಮಾಲಿನಿ ನಗುತ್ತಾ ಕ್ಯಾಮೆರಾಗಳಿಗೆ ಪೋಸ್‌ ನೀಡುವುದಕ್ಕಷ್ಟೇ ಸೀಮಿತರಾದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದಂತೆಯೇ ನೆಟ್ಟಿಗರು ಅವರನ್ನು ಭಾರಿ ಟ್ರೋಲ್‌ ಮಾಡಿ, ಕಾಲೆಳೆದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ