ಆ್ಯಪ್ನಗರ

ಕುದುರೆ ರೇಸ್‌ನಿಂದ ದೂರ ಸರಿದ ವಿಜಯ್‌ ಮಲ್ಯ

ಮದ್ಯ ಹಾಗೂ ಸಾಲದ ದೊರೆ ವಿಜಯ್‌ ಮಲ್ಯ ಕುದುರೆ ರೇಸ್‌ ಮೋಜು ಅನುಭವಿಸುತ್ತಿದ್ದು ಎಲ್ಲರಿಗೂ ಗೊತ್ತಿದೆ. ಈಗ ಅವರ ಕಂಪನಿ ಕುದುರೆ ರೇಸ್‌ನಿಂದ ದೂರಾಗಲು ನಿರ್ಧರಿಸಿದೆ.

Mumbai Mirror 4 Aug 2017, 1:29 pm
ಮುಂಬೈ: ಒಂದು ಕಾಲದಲ್ಲಿ ಕುದುರೆ ರೇಸ್‌ನ ಮೋಜಿಗೆ ಒಳಗಾಗಿದ್ದ ಮದ್ಯ ದೊರೆ ವಿಜಯ್‌ ಮಲ್ಯ ಈಗ ಅದರಿಂದ ದೂರಾಗಲಿದ್ದಾರೆ. ಇದಕ್ಕೆ ಕಾರಣ ಸ್ಪಷ್ಟ ದುಡ್ಡು.
Vijaya Karnataka Web vijay mallya kisses racing goodbye
ಕುದುರೆ ರೇಸ್‌ನಿಂದ ದೂರ ಸರಿದ ವಿಜಯ್‌ ಮಲ್ಯ


ಸಾಲದ ಸುಳಿಯಲ್ಲಿ ಸಿಲುಕಿರುವ ವಿಜಯ್‌ ಮಲ್ಯ ಈಗ ಭಾರತ ಬಿಟ್ಟು ಲಂಡನ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಅವರು ನಡೆಸುತ್ತಿದ್ದ "ಯುನೈಟೆಡ್‌ ರೇಸಿಂಗ್‌ ಬ್ಲಡ್‌ ಸ್ಟಾಕ್‌ ಬ್ರೀಡರ್ಸ್‌ ಲಿಮಿಟೆಡ್‌' (ಯುಆರ್‌ಬಿಬಿಎಲ್) ಈಗ ಕುದುರೆಗಳನ್ನು ಪಳಗಿಸುವುದು ಹಾಗೂ ಆರೈಕೆ ಮಾಡುವ ಲಾಯಗಳನ್ನು ಮುಚ್ಚಲು ಮುಂದಾಗಿದೆ.
ಕುಣಿಗಲ್‌ ಮತ್ತು ಮುಂಬೈನಲ್ಲಿರುವ ಈ ಕುದುರೆ ಲಾಯಗಳು ಈಗ ಮುಚ್ಚುವ ಹಂತಕ್ಕೆ ಬಂದಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಯುಆರ್‌ಬಿಬಿಎಲ್ ವ್ಯವಸ್ಥಾಪಕ ನಿರ್ದೇಶಕ ಜೆನ್‌ ಮಿರ್ಜಾ, ಹೌದು ಇದು ನಿಜ. ನಮಗೆ ಹಣದ ಸಮಸ್ಯೆ ಎದುರಾಗಿದೆ. ವಾರ್ಷಿಕವಾಗಿ ನಮಗೆ ಬರುತ್ತಿದ್ದ ಅನುದಾನ ಬಹುತೇಕ ಕಡಿತಗೊಂಡಿದೆ. ಇದರಿಂದ ಕುದುರೆಗಳ ಆರೈಕೆ ಕಷ್ಟವಾಗಿದೆ ಎಂದರು.



ಒಂದು ಕಾಲದಲ್ಲಿ ಕರ್ನಾಟಕದ ಕುಣಿಗಲ್‌ನಲ್ಲಿರುವ ಮಲ್ಯ ಸ್ಟಡ್‌ ಫಾರ್ಮ್‌ ಹಾಗೂ ಮುಂಬೈನಲ್ಲಿ 100ಕ್ಕೂ ಹೆಚ್ಚು ಕುದುರೆಗಳಳಿದ್ದವು. ಅದೀಗ 35ಕ್ಕೆ ಇಳಿದಿದೆ.
ವಿಜಯ್‌ ಮಲ್ಯ ಈಗ ಭಾರತದಲ್ಲೇ ಇಲ್ಲ. ಇನ್ನು ರೇಸ್‌ ಮೋಜು ಅನುಭವಿಸಲು ಅವರಿಗೆ ಸಾಧ್ಯವಿಲ್ಲ. ಹೀಗಿದ್ದಾಗ ಕುದುರೆ ರೇಸ್‌ನಿಂದ ದೂರ ಸರಿಯಲಾಗುತ್ತಿದೆ ಎಂದು ಮಿರ್ಜಾ ತಿಳಿಸಿದ್ದಾರೆ.



9 ಸಾವಿರ ಕೋಟಿ ರೂಪಾಯಿ ಸಾಲದ ಹೊರೆ ಹೊತ್ತಿರುವ ಉದ್ಯಮಿ, ಮದ್ಯ ದೊರೆ ವಿಜಯ್‌ ಕಳೆದ ವರ್ಷ ಲಂಡನ್‌ಗೆ ತೆರಳಿದ್ದು ಸದ್ಯ ಅಲ್ಲಿಯೇ ವಾಸ್ತವ್ಯ ಹೂಡಿದ್ದಾರೆ.
ವಿಜಯ್‌ ಮಲ್ಯ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಲಂಡನ್‌ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ತೀರ್ಪು ಸದ್ಯದಲ್ಲೇ ಹೊರಬೀಳುವ ನಿರೀಕ್ಷೆ ಇದೆ.

VIJAY MALLYA KISSES RACING GOODBYE

Mallya's firm drastically cut operations in the past couple of years Preparing to hand over Kunigal Stud Farm back to Karnataka government

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ