ಆ್ಯಪ್ನಗರ

4 ಸಾವಿರ ಕೋಟಿ ಮಲ್ಯ ಸಾಲದ ಬಡ್ಡಿಗೂ ಬರದು

ದೇಶದ ಬ್ಯಾಂಕ್‌ಗಳಿಗೆ 9 ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಸಾ ಬಾಕಿ ಉಳಿಸಿರುವ ಉದ್ಯಮಿ ವಿಜಯ್ ಮಲ್ಯ ಅವರು ನೀಡಲು ಮುಂದಾಗಿರುವ 4 ಸಾವಿರ ಕೋಟಿ ರೂ. ಸಾಲದ ಮೇಲಿನ ಬಡ್ಡಿ ತುಂಬಲೂ ಸಾಕಾಗದು ಎಂದು ಬ್ಯಾಂಕ್‌ಗಳು ವಿಶ್ಲೇಷಿಸಿವೆ.

ಏಜೆನ್ಸೀಸ್ 4 Apr 2016, 1:17 pm
ಮುಂಬಯಿ: ದೇಶದ ಬ್ಯಾಂಕ್‌ಗಳಿಗೆ 9 ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಸಾ ಬಾಕಿ ಉಳಿಸಿರುವ ಉದ್ಯಮಿ ವಿಜಯ್ ಮಲ್ಯ ಅವರು ನೀಡಲು ಮುಂದಾಗಿರುವ 4 ಸಾವಿರ ಕೋಟಿ ರೂ. ಸಾಲದ ಮೇಲಿನ ಬಡ್ಡಿ ತುಂಬಲೂ ಸಾಕಾಗದು ಎಂದು ಬ್ಯಾಂಕ್‌ಗಳು ವಿಶ್ಲೇಷಿಸಿವೆ.
Vijaya Karnataka Web vijay mallyas rs 4000 crore offer doesnt interest banks
4 ಸಾವಿರ ಕೋಟಿ ಮಲ್ಯ ಸಾಲದ ಬಡ್ಡಿಗೂ ಬರದು


ಸೆಪ್ಟಂಬರ್ ಮೊದಲ ಭಾಗದಲ್ಲಿ ಮಲ್ಯ ಅವರು 2 ಸಾವಿರ ಕೋಟಿ ರೂ. ನೀಡುವುದಾಗಿ ಹೇಳಿದ್ದು, ಈ ಮೊತ್ತವನ್ನು ಕನಿಷ್ಠ 4,900ಕೋಟಿ ರೂ.ಗೆ ಏರಿಸಬೇಕು ಎಂದು ಏ.7ರಂದು ಪ್ರಕರಣದ ವಿಚಾರಣೆ ವೇಳೆ ಬ್ಯಾಂಕ್‌ಗಳು ಸುಪ್ರೀಂ ಕೋರ್ಟ್‌ಗೆ ತಿಳಿಸಲು ನಿರ್ಧರಿಸಿವೆ ಎಂದು ತಿಳಿದು ಬಂದಿದೆ.

ಮಲ್ಯ ನೀಡುವ ಹಣ ನಗದಾಗಿ ನಮ್ಮ ಟೇಬಲ್‌ನಲ್ಲಿರಬೇಕು, ನಾವು ರಿಕವರಿ ಏಜೆಂಟ್ ಅನ್ನು ಅವಲಂಬಿಸಲು ಬಯಸುವುದಿಲ್ಲ. ಮಲ್ಯ ಮುಂದಿಟ್ಟಿರುವ ಪ್ರಸ್ತಾವದ ಬಗ್ಗೆ ಅನುಮಾನವಿದೆ ಎಂದು ಹೆಸರು ಹೇಳಲಿಚ್ಛಿಸದ ಬ್ಯಾಂಕರ್‌ವೊಬ್ಬರು ಹೇಳಿದ್ದಾರೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ 19 ಸಾಲದಾತರು ಮಲ್ಯ ಒಡೆತನದ ಸಂಸ್ಥೆ ವಿರುದ್ಧ ಸಾಲ ಮರು ಪಾವತಿಗಾಗಿ 20 ಪ್ರಕರಣಗಳೊಂದಿಗೆ ಕಾನೂನು ಹೋರಾಟ ನಡೆಸುತ್ತಿದ್ದಾರೆ.

ಸಾಲ ಮರು ಪಾವತಿಸುವಂತೆ ನಿರ್ದೇಶನ ನೀಡಬೇಕು ಎಂದು ಬ್ಯಾಂಕ್‌ಗಳು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಯುವ ಮೊದಲೇ ಮಲ್ಯ ಕಳೆದ ತಿಂಗಳು ಲಂಡನ್‌ಗೆ ತೆರಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ