ಆ್ಯಪ್ನಗರ

ವಿಜಯ್‌ ರೂಪಾನಿ ಗುಜರಾತ್‌ ಮುಖ್ಯಮಂತ್ರಿ; ನಿತಿನ್‌ ಪಟೇಲ್‌ ಉಪ ಮುಖ್ಯಮಂತ್ರಿ

ಶಾಸಕಾಂಗ ಪಕ್ಷದ ಸಭೆಯಲ್ಲಿ ಒಮ್ಮತದ ನಿರ್ಧಾರ

Vijaya Karnataka Web 22 Dec 2017, 5:14 pm
ಅಹಮದಾಬಾದ್‌: ಗುಜರಾತ್‌ನ ನೂತನ ಮುಖ್ಯಮಂತ್ರಿಯಾಗಿ ವಿಜಯ್‌ ರೂಪಾನಿ ಪುನರಾಯ್ಕೆಯಾಗಿದ್ದಾರೆ.
Vijaya Karnataka Web vijay rupani gujarat cm
ವಿಜಯ್‌ ರೂಪಾನಿ ಗುಜರಾತ್‌ ಮುಖ್ಯಮಂತ್ರಿ; ನಿತಿನ್‌ ಪಟೇಲ್‌ ಉಪ ಮುಖ್ಯಮಂತ್ರಿ


ಶುಕ್ರವಾರ ನಡೆದ ನೂತನ ಶಾಸಕರ ಸಭೆಯಲ್ಲಿ ವಿಜಯ್‌ ರೂಪಾಯಿ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಒಮ್ಮತದಿಂದ ಆಯ್ಕೆ ಮಾಡಲಾಗಿದೆ.

ಉಪ ಮುಖ್ಯಮಂತ್ರಿಯಾಗಿ ನಿತಿನ್‌ ಪಟೇಲ್‌ ಆಯ್ಕೆಯಾಗಿದ್ದಾರೆ. ಈ ಇಬ್ಬರ ನೇತೃತ್ವದಲ್ಲಿಯೇ ಮತ್ತೆ ಗುಜರಾತ್‌ ಸರಕಾರ ಮುಂದುವರಿಯಲಿದೆ.

ಕೇಂದ್ರ ವಿತ್ತಸಚಿವ ಅರುಣ್‌ ಜೇಟ್ಲಿ, ಹಿರಿಯ ಬಿಜೆಪಿ ಮುಖಂಡರಾದ ಸಂಜಯ್‌ ಪಾಂಡೆ, ರಾಜ್ಯ ಬಿಜೆಪಿ ಉಸ್ತುವಾರಿ ಭೂಪೇಂದ್ರ ಯಾದವ್‌ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿ. ಸತೀಶ್‌ ಅವರಿಗೆ ನೂತನ ಮುಖ್ಯಮಂತ್ರಿ ಆಯ್ಕೆ ಜವಾಬ್ದಾರಿ ನೀಡಲಾಗಿತ್ತು. ಅದರಂತೆ ಈ ನಾಯಕರು ಚುನಾಯಿತ ಶಾಸಕರ ಅಭಿಪ್ರಾಯ ಸಂಗ್ರಹಿಸಿ ಸೂಕ್ತ ತೀರ್ಮಾನ ಕೈಗೊಂಡಿದ್ದಾರೆ.

ನೂತನ ಸರಕಾರದ ಪ್ರಮಾಣವಚನ ಸ್ವೀಕಾರ ಡಿಸೆಂಬರ್ 25ರಂದು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದು ನಡೆಯಲಿದೆ. ಈ ಕುರಿತ ವಿವರಗಳನ್ನು ನಂತರ ಪ್ರಕಟಿಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಚುನಾವಣೆ ಫಲಿತಾಂಶದ ವಿವರ ರಾಜ್ಯಪಾಲರಿಗೆ ಸಲ್ಲಿಕೆ: ಚುನಾವಣೆ ಆಯೋಗದ ಹಿರಿಯ ಅಧಿಕಾರಿಗಳ ತಂಡವು ರಾಜ್ಯಪಾಲರನ್ನು ಭೇಟಿಯಾಗಿ ಚುನಾವಣೆ ಫಲಿತಾಂಶದ ವಿವರಗಳನ್ನು ಶುಕ್ರವಾರ ಸಲ್ಲಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ