ಆ್ಯಪ್ನಗರ

ವಿಕ್ರಮ್‌ ಲ್ಯಾಂಡರ್‌ ವಾಲಿದ ಸ್ಥಿತಿಯಲ್ಲಿದೆ: ಇಸ್ರೋ ವಿಜ್ಞಾನಿ

ಇಸ್ರೋ ಸಂಸ್ಥೆಯ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ 2 ಈಗ ನಿರ್ಣಾಯಕ ಘಟ್ಟ ತಲುಪಿದೆ. ಕೊನೆಯ ಹಂತದಲ್ಲಿ ವಿಕ್ರಮ್‌ ಲ್ಯಾಂಡರ್‌ ಹಾದಿ ತಪ್ಪಿದ್ದು ಅದನ್ನು ಸರಿಪಡಿಸಲು ವಿಜ್ಞಾನಿಗಳು ನಿರಂತರ ಪ್ರಯತ್ನದಲ್ಲಿದ್ದಾರೆ.

Vijaya Karnataka Web 9 Sep 2019, 4:33 pm
ಬೆಂಗಳೂರು: ಇಡೀ ವಿಶ್ವದ ಗಮನ ಸೆಳೆದಿದ್ದ ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ಇಸ್ರೋ) ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ 2 ಈಗ ಭಾರಿ ಕುತೂಹಲ ಕೆರಳಿಸಿದೆ.
Vijaya Karnataka Web ಇಸ್ರೋ ವಿಜ್ಞಾನಿಗಳು
ಇಸ್ರೋ ವಿಜ್ಞಾನಿಗಳು


ಏಕೆಂದರೆ ಕಳೆದ ಶನಿವಾರ ಕೇವಲ 2.1 ಕಿಲೋಮೀಟರ್‌ ಇರುವಾಗ ಹಾದಿ ತಪ್ಪಿದ ವಿಕ್ರಮ್ ಲ್ಯಾಂಡರ್‌ ಎಲ್ಲಿದೆ ಎಂಬುದನ್ನು ಇಸ್ರೋ ಪತ್ತೆ ಹಚ್ಚಿದೆ. ಆದರೆ ಅಲ್ಲಿಂದ ಸಂದೇಶಗಳು ಬರುವುದಕ್ಕೆ ಕಾಯುತ್ತಿದೆ.

ಈಗ ವಿಕ್ರಮ್ ಲ್ಯಾಂಡರ್‌ನೊಂದಿಗೆ ಸಂಪರ್ಕ ಸಾಧಿಸಲು ಇಸ್ರೋ ವಿಜ್ಞಾನಿಗಳು ಶತಾಯ ಗತಾಯ ಪ್ರಯತ್ನಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೆಲವ ಯಶಸ್ಸು ಕೂಡ ದೊರೆತಿದೆ ಎನ್ನಲಾಗಿದೆ.

ವಿಕ್ರಮ ಲ್ಯಾಂಡರ್‌ ತನ್ನ ಗರ್ಭದಲ್ಲಿ ಪ್ರಗ್ಯಾನ್‌ ರೋವರ್‌ ಇಟ್ಟುಕೊಂಡಿದೆ. ಕೊನೆ ಕ್ಷಣದಲ್ಲಿ ಇದು ಚಂದ್ರನ ಮೇಲಿಡಲು ಹಾದಿ ತಪ್ಪಿದ್ದರಿಂದ ಇಸ್ರೋ ವಿಜ್ಞಾನಿಗಳು ಆತಂಕಗೊಂಡಿದ್ದಾರೆ.

ಆದರೆ ಈಗ ವಿಕ್ರಮ್ ಎಲ್ಲಿದ್ದಾನೆ ಎಂದು ಪತ್ತೆಯಾಗಿದೆ. ಅಲ್ಲದೇ ಅದು ಕಳಚಿಕೊಂಡಿಲ್ಲ. ಆದರೆ ವಾಲಿದ ಸ್ಥಿತಿಯಲ್ಲಿದೆ ಎಂದು ಚಂದ್ರಯಾನ ಯೋಜನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಜ್ಞಾನಿಯೊಬ್ಬರು ಮಾಹಿತಿ ನೀಡಿದ್ದಾರೆ.

ವಿಕ್ರಮ್‌ ಲ್ಯಾಂಡರ್‌ನಲ್ಲಿದ್ದ ಕ್ಯಾಮರಾವೊಂದು ಕಳುಹಿಸಿರುವ ಫೋಟೋದಲ್ಲಿ ಇದು ಸ್ಪಷ್ಟವಾಗಿದೆ. ಈ ಕ್ಯಾಮರಾ ಅತ್ಯಂತ ಹೈ ರೆಸ್ಯೂಲುಷನ್‌ ಹೊಂದಿದೆ. ಪ್ರತಿ ಮಾಹಿತಿಯೂ ಇದರಿಂದ ಲಭ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಮುಂದಿನ 14 ದಿನಗಳ ಕಾಲ ವಿಕ್ರಮ್‌ ಲ್ಯಾಂಡರ್‌ ಜತೆ ಸಂಪರ್ಕ ಸಾಧಿಸಲು ಇಸ್ರೋ ವಿಜ್ಞಾನಿಗಳು ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದ್ದಾರೆ.

ಇಸ್ರೋ ವಿಜ್ಞಾನಿಗಳ ಪ್ರಕಾರ ಸಂಪರ್ಕ ಸಾಧಿಸುವ ಸಾಧ್ಯತೆ ತೀರಾ ಕಡಿಮೆ. ಆದರೆ ಕೆಲವೊಮ್ಮೆ ಸಿಗ್ನಲ್‌ ದೊರಕುವ ಅವಕಾಶಗಳೂ ಉಂಟು ಎಂದು ಮಾಹಿತಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ