ಆ್ಯಪ್ನಗರ

ತೆಲಂಗಾಣ ಸೇರ್ಪಡೆಗೆ ಮುಂದಾದ ‘ಮಹಾ’ ಗಡಿ ಗ್ರಾಮಸ್ಥರು!

ಕಳೆದ ಸುಮಾರು 70 ವರ್ಷಗಳಿಂದ ಮಹಾರಾಷ್ಟ್ರದಲ್ಲಿ ಆಡಳಿತ ನಡೆಸಿದ ಸರಕಾರಗಳ ದಿವ್ಯ ನಿರ್ಲಕ್ಷ್ಯದಿಂದ ಹೈರಾಣಾಗಿರುವ ನಾಂದೇಡ್‌ ಜಿಲ್ಲೆಯ ಸುಮಾರು 40 ಗ್ರಾಮಗಳ ಜನರು ಇದೀಗ ನೆರೆಯ ...

Vijaya Karnataka 24 May 2018, 7:23 am
ಮುಂಬಯಿ: ಕಳೆದ ಸುಮಾರು 70 ವರ್ಷಗಳಿಂದ ಮಹಾರಾಷ್ಟ್ರದಲ್ಲಿ ಆಡಳಿತ ನಡೆಸಿದ ಸರಕಾರಗಳ ದಿವ್ಯ ನಿರ್ಲಕ್ಷ್ಯದಿಂದ ಹೈರಾಣಾಗಿರುವ ನಾಂದೇಡ್‌ ಜಿಲ್ಲೆಯ ಸುಮಾರು 40 ಗ್ರಾಮಗಳ ಜನರು ಇದೀಗ ನೆರೆಯ ತೆಲಂಗಾಣಕ್ಕೆ ರಾಜ್ಯಕ್ಕೆ ಸೇರ್ಪಡೆಗೊಳ್ಳುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
Vijaya Karnataka Web maharastra


ರಸ್ತೆ, ನೀರು ಮುಂತಾದ ಮೂಲ ಸೌಲಭ್ಯಗಳಿಂದಲೂ ನಾವು ವಂಚಿತರಾಗಿದ್ದೇವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಮುಂಬಯಿಗೆ 575 ಕಿ.ಮೀ. ದೂರದಲ್ಲಿರುವ ನಾಂದೇಡ್‌ ಜಿಲ್ಲೆಯ ಧರ್ಮಾಬಾದ್‌ ತಾಲೂಕಿನ ಗ್ರಾಮವೊಂದರ ಸರಪಂಚ್‌ ಬಾಬುರಾವ್‌ ಕದಂ ಅವರು ಮಂಗಳವಾರ ತೆಲಂಗಾಣದ ನಿಜಾಮಾಬಾದ್‌ ಜಿಲ್ಲೆಗೆ ಭೇಟಿ ನೀಡಿ ಸ್ಥಳೀಯ ಶಾಸಕ (ಟಿಆರ್‌ಎಸ್‌) ಬಾಜಿರೆಡ್ಡಿ ಗೋವರ್ಧನ್‌ ಅವರಿಗೆ ತಮ್ಮ ಬೇಡಿಕೆಯ ಪ್ರಸ್ತಾಪ ಸಲ್ಲಿಸಿದರು.

''ನಾಂದೇಡ್‌ ಜಿಲ್ಲೆಯ ಧರ್ಮಾಬಾದ್‌ ತಾಲೂಕಿನ 55 ಗ್ರಾಮಗಳ ಪೈಕಿ 40 ಗ್ರಾಮಗಳು ಹಲವು ವರ್ಷಗಳಿಂದ ನಿರ್ಲಕ್ಷ್ಯಕ್ಕೊಳಗಾಗುತ್ತಲೇ ಬಂದಿವೆ. ಕಳೆದ 7 ದಶಕಗಳಿಂದ ರಾಜ್ಯವನ್ನಾಳಿದ ಯಾವುದೇ ಸರಕಾರ ಅಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿಲ್ಲ. ಈ ಹಿನ್ನೆಲೆಯಲ್ಲಿ, ಅಲ್ಲಿನ ಜನರು ತೆಲಂಗಾಣಕ್ಕೆ ಸೇರ್ಪಡೆಗೊಳ್ಳಲು ಬಯಸುತ್ತಿದ್ದಾರೆ. ನಮಗೆ 40 ಗ್ರಾಮಗಳ ಸರಪಂಚ್‌ಗಳ ಬೆಂಬಲವಿದೆ,'' ಎಂದು ಬಾಬುರಾವ್‌ ಕದಂ ಹೇಳಿದ್ದಾರೆ.

ಈ ಮಧ್ಯೆ, ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ನಾಂದೆಡ್‌ ಜಿಲ್ಲಾ ಉಸ್ತುವಾರಿ ಸಚಿವ ರಾಮ್‌ದಾಸ್‌ ಕದಮ್‌ ಅವರು, ಈ ವಿಚಾರದ ಬಗ್ಗೆ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ