ಆ್ಯಪ್ನಗರ

ಪದ್ಮಾವತ್‌ ವಿವಾದ: ಶಾಲಾ ಮಕ್ಕಳ ವಾಹನದ ಮೇಲೆ ದಾಳಿ

ದೇಶಾದ್ಯಂತ ಬಿಡುಗಡೆಯಾಗುತ್ತಿರುವ 'ಪದ್ಮಾವತ್ 'ಸಿನಿಮಾ ಬಿಡುಗಡೆ ವಿರೋಧಿಸಿ ಹಲವೆಡೆ ಕರ್ಣಿ ಸೇನಾ ಪ್ರತಿಭಟನೆ ನಡೆಸುತ್ತಿದ್ದು, ಬುಧಾರದಂದು ಗುರುಗ್ರಾಮದ ಶಾಲಾ ಬಸ್ ಮೇಲೆ ಕರ್ಣಿ ಸೇನಾ ಕಾರ್ಯಕರ್ತರು ದಾಳಿ ನಡೆಸಿದ್ದಾರೆ.

TNN 25 Jan 2018, 11:40 am
ಗುರುಗ್ರಾಮ: ದೇಶಾದ್ಯಂತ ಬಿಡುಗಡೆಯಾಗುತ್ತಿರುವ 'ಪದ್ಮಾವತ್' ಸಿನಿಮಾ ಬಿಡುಗಡೆ ವಿರೋಧಿಸಿ ಹಲವೆಡೆ ಕರ್ಣಿ ಸೇನಾ ಪ್ರತಿಭಟನೆ ನಡೆಸುತ್ತಿದ್ದು, ಬುಧಾರದಂದು ಗುರುಗ್ರಾಮದ ಶಾಲಾ ಬಸ್ ಮೇಲೆ ಕರ್ಣಿ ಸೇನಾ ಕಾರ್ಯಕರ್ತರು ದಾಳಿ ನಡೆಸಿದ್ದಾರೆ.
Vijaya Karnataka Web violent protests in ncr ahead of padmaavat release
ಪದ್ಮಾವತ್‌ ವಿವಾದ: ಶಾಲಾ ಮಕ್ಕಳ ವಾಹನದ ಮೇಲೆ ದಾಳಿ


ಮಾಹಿತಿಗಳ ಪ್ರಕಾರ, ಗುರುಗ್ರಾಮ ಹಾಗೂ ನೋಯ್ಡಾದಲ್ಲಿ ಈಗಾಗಲೇ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ, ಈ ನಡುವೆ ಬುಧವಾರದಂದು ಕರ್ಣಿ ಸೇನಾ ಕಾರ್ಯಕರ್ತರು ಗುರುಗ್ರಾಮದಲ್ಲಿ ಮನೆಗೆ ಹಿಂತಿರುಗುತ್ತಿದ್ದ ಶಾಲಾ ಬಸ್‌ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಮಕ್ಕಳು ಭಯದಿಂದ ಅಳುತ್ತಾ ಕೂಗಿಕೊಂಡು, ಕಲ್ಲೇಟಿನಿಂದ ತಪ್ಪಿಸಿಕೊಳ್ಳಲು ಕುರ್ಚಿಗಳ ಕೆಳಗೆ ತೂರಿ ಜೀವ ಉಳಿಸಿಕೊಂಡಿದ್ದಾರೆ. ಬಸ್ಸಿನ ಗಾಜುಗಳು ಒಡೆದಿದ್ದು ಕಾರ್ಯಕರ್ತರ ಈ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ಖಂಡನೆ ವ್ಯಕ್ತವಾಗಿದೆ.

ಗುರುಗ್ರಾಮ-ಅಲ್ವಾರ್‌ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಸಾರ್ವಜನಿಕರ ಮುಂದೆಯೇ ಪಟ್ರೋಲ್‌ ಬಾಂಬ್‌ ದಾಳಿ ನಡೆಸಿದ ದುಷ್ಕರ್ಮಿಗಳ ಗುಂಪು, ಬಸ್ಸಿಗೆ ಸಂಪೂರ್ಣವಾಗಿ ಬೆಂಕಿಗೆ ಹಚ್ಚುವ ಯೋಜನೆ ರೂಪಿಸಿದಂತೆ ಕಾಣಿಸುತ್ತಿತ್ತು. ಆದರೆ ಪೊಲೀಸರು ಕೂಡಲೇ ಈ ಗಂಪನ್ನು ತಡೆದಿದ್ದರು. ಅಲ್ಲದೇ ಬಸ್‌ನಲ್ಲಿ ಇಬ್ಬರು ಶಿಕ್ಷಕರೂ ಸೇರಿದಂತೆ 24 ಮಕ್ಕಳಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ