ಆ್ಯಪ್ನಗರ

ವೊಡಾಫೋನ್‌, ಏರ್‌ಟೆಲ್‌ ಗ್ರಾಹಕರಿಗೆ ಶಾಕಿಂಗ್‌ ಸುದ್ದಿ! ಡಿಸೆಂಬರ್‌ 1ರಿಂದ ಕರೆ ದುಬಾರಿ!

ಜಿಯೋ ಗ್ರಾಹಕರ ಬೆನ್ನಲ್ಲೇ ಏರ್‌ಟೆಲ್‌ ಮತ್ತು ವೊಡಾಫೋನ್‌ ಗ್ರಾಹಕರಿಗೆ ಮುಂದಿನ ತಿಂಗಳಿಂದ ಫೋನ್‌ ಬಿಲ್‌ ಶಾಕ್‌ ತಟ್ಟಲಿದೆ. ವೊಡಾಫೋನ್‌ ಐಡಿಯಾ ಹಾಗೂ ಭಾರ್ತಿ ಏರ್‌ಟೆಲ್‌ ಕಂಪನಿಗಳು ಡಿಸೆಂಬರ್‌ 1ರಿಂದ ತನ್ನ ಸೇವೆಗಳ ದರಗಳನ್ನು ಏರಿಕೆ ಮಾಡುವುದಾಗಿ ಘೋಷಿಸಿವೆ.

Vijaya Karnataka Web 18 Nov 2019, 9:19 pm
ಹೊಸದಿಲ್ಲಿ: ಜಿಯೋ ಗ್ರಾಹಕರ ಬೆನ್ನಲ್ಲೇ ಏರ್‌ಟೆಲ್‌ ಮತ್ತು ವೊಡಾಫೋನ್‌ ಗ್ರಾಹಕರಿಗೆ ಮುಂದಿನ ತಿಂಗಳಿಂದ ಫೋನ್‌ ಬಿಲ್‌ ಶಾಕ್‌ ತಟ್ಟಲಿದೆ. ವೊಡಾಫೋನ್‌ ಐಡಿಯಾ ಹಾಗೂ ಭಾರ್ತಿ ಏರ್‌ಟೆಲ್‌ ಕಂಪನಿಗಳು ಡಿಸೆಂಬರ್‌ 1ರಿಂದ ತನ್ನ ಸೇವೆಗಳ ದರಗಳನ್ನು ಏರಿಕೆ ಮಾಡುವುದಾಗಿ ಘೋಷಿಸಿವೆ.
Vijaya Karnataka Web vodafone
ಸಾಂದರ್ಭಿಕ ಚಿತ್ರ


ಬಿಎಸ್‌ಎನ್‌ಎಲ್‌ ಮುಳುಗಿಸುವ ಹುನ್ನಾರದ ಮೊದಲ ಹೆಜ್ಜೆ 'ವಿಲೀನ' : ರಾಹುಲ್‌ ಗಾಂಧಿ

ಜುಲೈ-ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ50,922 ಕೋಟಿ ರೂ. ನಷ್ಟ ಸಂಭವಿಸಿದ ಬೆನ್ನಲ್ಲೇ ವೊಡಾಫೋನ್‌ ಬೆಲೆ ಏರಿಕೆ ತೀರ್ಮಾನ ಪ್ರಕಟಿಸಿದೆ. ಭಾರತದಲ್ಲಿಮೊಬೈಲ್‌ ಡೇಟಾ ದರಗಳು ವಿಶ್ವದಲ್ಲಿಯೇ ಅಗ್ಗವಾಗಿದ್ದು, ಡಿಸೆಂಬರ್‌ 1ರಿಂದ ಕಂಪನಿ ಸೂಕ್ತ ರೀತಿಯಲ್ಲಿದರವನ್ನು ಏರಿಸಲಿದೆ ಎಂದು ವೊಡಾಫೋನ್‌ ಐಡಿಯಾ ತಿಳಿಸಿದೆ.

Vodafone: ಟೆಲಿಕಾಂ ಕಂಪನಿಗಳಿಗೆ ಭಾರಿ ನಷ್ಟ

ಇತ್ತ, ಈ ಬಾರಿಯ ತ್ರೈಮಾಸಿಕ ಅವಧಿಯಲ್ಲಿ23,044 ಕೋಟಿ ನಷ್ಟ ಅನುಭವಿಸಿರುವ ಏರ್‌ಟೆಲ್‌ ಸಹ ದರ ಏರಿಕೆ ಅನಿವಾರ್ಯ ಎಂದಿದೆ. ಇತ್ತೀಚೆಗಷ್ಟೇ ಜಿಯೋ, ತನ್ನ ಗ್ರಾಹಕರು ಇತರೆ ನೆಟ್‌ವರ್ಕ್ಗಳಿಗೆ ಮಾಡುವ ಉಚಿತ ಕರೆಗಳನ್ನು ರದ್ದುಪಡಿಸಿ, ರೀಚಾಜ್‌ರ್‍ ಅನಿವಾರ್ಯ ಮಾಡುವ ಮೂಲಕ ಶಾಕ್‌ ನೀಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ