ಆ್ಯಪ್ನಗರ

ಲಷ್ಕರೆ ಉಗ್ರರಿಗೆ ಹಣ ಒದಗಿಸುತ್ತಿದ್ದ ಕಮ್ರಾನ್‌ ಗುರುತು ಪತ್ತೆ

ಜೈಷೆ ಉಗ್ರರಿಗೆ ಹಣಕಾಸಿನ ನೆರವು ಒದಗಿಸುವ ಫಲಾಹ್‌-ಇ-ಇನ್ಸಾನಿಯಾತ್‌ (ಎಫ್‌ಐಎಫ್‌) ಪ್ರತಿಷ್ಠಾನಕ್ಕೆ ಪೂರಕ ಸೌಕರ್ಯಗಳನ್ನು ಒದಗಿಸುವ ಆರೋಪದ ಮೇರೆಗೆ ಪಾಕ್‌ ಮೂಲದ ಕಮ್ರಾನ್‌, ದಿಲ್ಲಿಯ ಮೊಹಮದ್‌ ಸಲ್ಮಾನ್‌ ಮತ್ತು ರಾಜಸ್ಥಾನದ ಮೊಹಮದ್‌ ಸಲೀಂ ಮೇಲೆ ಎನ್‌ಐಎ ದೋಷಾರೋಪಪಟ್ಟಿ ಸಲ್ಲಿಸಿತ್ತು. ಸಲ್ಮಾನ್‌ ಮತ್ತು ಸಲೀಂನನ್ನು ಕಳೆದ ಸೆಪ್ಟೆಂಬರ್‌ನಲ್ಲಿ ಬಂಧಿಸಲಾಗಿತ್ತು.

Vijaya Karnataka 9 Apr 2019, 9:00 am
ಹೊಸದಿಲ್ಲಿ: ದೇಶದಲ್ಲಿ ಲಷ್ಕರೆ ತಯ್ಬಾ ಉಗ್ರರಿಗೆ ಹಣಕಾಸು ಒದಗಿಸುತ್ತಿದ್ದ ದುಬೈನಲ್ಲಿರುವ ಪಾಕಿಸ್ತಾನಿ ಪ್ರಜೆ ಮೊಹಮದ್‌ ಕಮ್ರಾನ್‌ನ ಗುರುತು ಪತ್ತೆ ಹಚ್ಚುವಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಕೊನೆಗೂ ಯಶಸ್ವಿಯಾಗಿದೆ. ದುಬೈನ ಎಮಿರೇಟ್ಸ್‌ ಏರ್‌ಲೈನ್ಸ್‌ ಸಂಸ್ಥೆಯಲ್ಲಿ ಕಮ್ರಾನ್‌ ವಿಮಾನ ಟಿಕೆಟ ಬುಕ್‌ ಮಾಡಿದ್ದ. ಏರ್‌ಲೈನ್ಸ್‌ನ ಐವಿಆರ್‌ಎಸ್‌- ಇಂಟರಾರ‍ಯಕ್ಟಿವ್‌ ವಾಯ್ಸ್‌ ರೆಸ್ಪಾನ್ಸ್‌ ಸಿಸ್ಟಂ ಮೂಲಕ ಪಡೆದುಕೊಂಡ ಮಾಹಿತಿಯ ಜಾಡು ಹಿಡಿದು ಎನ್‌ಐಎ ಕಮ್ರಾನ್‌ನ ಗುರುತು ಪತ್ತೆ ಮಾಡಿದೆ. ಎನ್‌ಐಎ ಮೊದಲಬಾರಿಗೆ ಧ್ವನಿ ವಿಚಾರಣೆ ವ್ಯವಸ್ಥೆಯನ್ನು ಉಗ್ರನ ವಿರುದ್ಧ ಸಾಕ್ಷ್ಯವಾಗಿ ಬಳಸಿಕೊಂಡಿದೆ.
Vijaya Karnataka Web Terrorists

ಜೈಷೆ ಉಗ್ರರಿಗೆ ಹಣಕಾಸಿನ ನೆರವು ಒದಗಿಸುವ ಫಲಾಹ್‌-ಇ-ಇನ್ಸಾನಿಯಾತ್‌ (ಎಫ್‌ಐಎಫ್‌) ಪ್ರತಿಷ್ಠಾನಕ್ಕೆ ಪೂರಕ ಸೌಕರ್ಯಗಳನ್ನು ಒದಗಿಸುವ ಆರೋಪದ ಮೇರೆಗೆ ಪಾಕ್‌ ಮೂಲದ ಕಮ್ರಾನ್‌, ದಿಲ್ಲಿಯ ಮೊಹಮದ್‌ ಸಲ್ಮಾನ್‌ ಮತ್ತು ರಾಜಸ್ಥಾನದ ಮೊಹಮದ್‌ ಸಲೀಂ ಮೇಲೆ ಎನ್‌ಐಎ ದೋಷಾರೋಪಪಟ್ಟಿ ಸಲ್ಲಿಸಿತ್ತು. ಸಲ್ಮಾನ್‌ ಮತ್ತು ಸಲೀಂನನ್ನು ಕಳೆದ ಸೆಪ್ಟೆಂಬರ್‌ನಲ್ಲಿ ಬಂಧಿಸಲಾಗಿತ್ತು.

ಇವರಿಬ್ಬರು ನೀಡಿದ್ದ ಸುಳಿವಿನ ಮೇರೆಗೆ ಜನವರಿಯಲ್ಲಿ ಗುಜರಾತ್‌ನ ವಲ್ಸದ್‌ನಲ್ಲಿರುವ ಕಮ್ರಾನ್‌ ಸಹಚರ ಆರೀಫ್‌ ಗುಲಾಂಬಶೀರ್‌ ಧರಂಪುರಿಯಾ ನಿವಾಸದ ಮೇಲೆ ಎನ್‌ಐಎ ದಾಳಿ ನಡೆಸಿ ವಶಪಡಿಸಿಕೊಂಡಿದ್ದ ಸಿಡಿಯಲ್ಲಿ ಹಲವು ದೂರವಾಣಿ ಮಾತುಕತೆ ಮಾದರಿಗಳು ಸಿಕ್ಕಿದ್ದವು. ಇದರಲ್ಲಿ ಕಮ್ರಾನ್‌ ಮತ್ತು ಎಫ್‌ಐಎಫ್‌ ಮುಖ್ಯಸ್ಥ ಸಾಹಿದ್‌ ಮೆಹಮೂದ್‌ ಧ್ವನಿಗಳು ರೆಕಾರ್ಡ್‌ ಆಗಿದ್ದವು. ಈ ಧ್ವನಿಯನ್ನು ಖಚಿತಪಡಿಸಿಕೊಳ್ಳಲು ಪೂರಕ ಸಾಕ್ಷ್ಯಗಳಿಗಾಗಿ ಎನ್‌ಐಎ ಹುಡುಕಾಟ ನಡೆಸುತ್ತಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ