ಆ್ಯಪ್ನಗರ

ಕಮಲ್‌ನಾಥ್‌ ಸಂಬಂಧಿ ವಿರುದ್ಧ ಜಾಮೀನು ರಹಿತ ಬಂಧನಕ್ಕೆ ವಾರೆಂಟ್‌

ಹಣ ಅಕ್ರಮ ವರ್ಗಾವಣೆ ತನಿಖೆ ಹೊಣೆ ಹೊತ್ತಿರುವ ಜಾರಿ ನಿರ್ದೇಶನಾಲಯದ(ಇ.ಡಿ) ವಿಚಾರಣೆಗೆ ರತುಲ್‌ ಸಹಕರಿಸುತ್ತಿಲ್ಲ. ಜತೆಗೆ ಅವರು ನಮ್ಮ ಪತ್ತೆಗೂ ಸಿಗುತ್ತಿಲ್ಲ ಎಂದು ಕೋರ್ಟ್‌ಗೆ ಇ.ಡಿ ತಿಳಿಸಿತ್ತು.

PTI 10 Aug 2019, 5:00 am
ಹೊಸದಿಲ್ಲಿ: ಅಗಸ್ಟಾವೆಸ್ಟ್‌ಲ್ಯಾಂಡ್‌ ವಿವಿಐಪಿ ಹೆಲಿಕಾಪ್ಟರ್‌ ಹಗರಣದಲ್ಲಿ ಹಣ ಅಕ್ರಮ ವರ್ಗಾಣೆ ಮಾಡಿದ ಆರೋಪಕ್ಕೆ ಗುರಿಯಾಗಿರುವ ಮಧ್ಯಪ್ರದೇಶ ಸಿಎಂ ಕಮಲ್‌ನಾಥ್‌ ಅವರ ಸೋದರಳಿಯ ರಾತುಲ್‌ ಪುರಿ ವಿರುದ್ಧ ದಿಲ್ಲಿ ಕೋರ್ಟ್‌ ಜಾಮೀನು ರಹಿತ ಬಂಧನ ವಾರೆಂಟ್‌ ಹೊರಡಿಸಿದೆ.
Vijaya Karnataka Web RATULPURI

ಹಣ ಅಕ್ರಮ ವರ್ಗಾವಣೆ ತನಿಖೆ ಹೊಣೆ ಹೊತ್ತಿರುವ ಜಾರಿ ನಿರ್ದೇಶನಾಲಯದ(ಇ.ಡಿ) ವಿಚಾರಣೆಗೆ ರತುಲ್‌ ಸಹಕರಿಸುತ್ತಿಲ್ಲ. ಜತೆಗೆ ಅವರು ನಮ್ಮ ಪತ್ತೆಗೂ ಸಿಗುತ್ತಿಲ್ಲ ಎಂದು ಕೋರ್ಟ್‌ಗೆ ಇ.ಡಿ ತಿಳಿಸಿತ್ತು.

ಬಂಧನಕ್ಕೆ ವಾರೆಂಟ್‌ ಹೊರಡಿಸುವ ಮೂಲಕ ತನಿಖೆಗೆ ಸಹಕರಿಸಲು ಸೂಚಿಸಬೇಕು ಎಂದು ಇ.ಡಿ ಮಾಡಿದ ಮನವಿ ಪುರಸ್ಕರಿಸಿದ ವಿಶೇಷ ನ್ಯಾಯಾಧೀಶ ಅರವಿಂದ್‌ ಕುಮಾರ್‌ ಬಂಧನಕ್ಕೆ ಆದೇಶಿಸಿದ್ದಾರೆ.
ಇ.ಡಿ ಮನವಿ ವಿರುದ್ಧ ರತುಲ್‌ ಕೋರ್ಟ್‌ಗೆ ಅರ್ಜಿ ಸಲ್ಲಿಸಿ, ನಿರೀಕ್ಷಣಾ ಜಾಮೀನು ನೀಡುವಂತೆ ಮಂಗಳವಾರ ಕೋರಿದ್ದರು. ಆದರೆ ರತುಲ್‌ ಮನವಿಯನ್ನು ಕೋರ್ಟ್‌ ತಿರಸ್ಕರಿಸಿತ್ತು.

.......
ಚಿದಂಬರಂ, ಕಾರ್ತಿಗೆ ಬಂಧನದಿಂದ ರಕ್ಷಣೆ ವಿಸ್ತರಣೆ
ಏರ್‌ಸೆಲ್‌-ಮ್ಯಾಕ್ಸಿಸ್‌ ಪ್ರಕರಣದಲ್ಲಿ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದಿಂದ ಬಂಧನ ಭೀತಿ ಎದುರಿಸುತ್ತಿರುವ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಹಾಗೂ ಪುತ್ರ ಕಾರ್ತಿಗೆ ಆ.23ರವರೆಗೆ ಮಧ್ಯಂತರ ರಕ್ಷಣೆಯನ್ನು ದಿಲ್ಲಿ ಕೋರ್ಟ್‌ ವಿಸ್ತರಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ